ETV Bharat / bharat

ಎಲ್ಎಲ್​ಬಿ ಮಾಡಿ ತನ್ನ ಮೇಲಿನ ಪ್ರಕರಣವನ್ನು ವಾದಿಸಿ ಗೆದ್ದ ಅಮಿತ್ ಚೌಧರಿ; ಯುವಕರಿಗೆ ಸ್ಫೂರ್ತಿ - ಕುಟುಂಬಸ್ಥರಿಂದ ನಿರ್ಲಕ್ಷ್ಯ

Amit Chaudhary: ಉತ್ತರಪ್ರದೇಶದ ಮೀರತ್​ನ ಅಮಿತ್ ಚೌಧರಿ ಎಂಬ ಯುವಕ ಎಲ್​ಎಲ್​ಬಿ ಮಾಡಿ ತನ್ನ ಮೇಲಿನ ಪ್ರಕರಣವನ್ನು ವಾದಿಸಿ ಗೆಲುವು ಸಾಧಿಸಿದ್ದಾರೆ.

amit-chaudhary-of-meerut-fought-his-own-case-after-doing-llb-acquitted-of-murder-charges
ಎಲ್ಎಲ್​ಬಿ ಮಾಡಿ ತನ್ನ ಮೇಲಿನ ಪ್ರಕರಣವನ್ನು ವಾದಿಸಿ ಗೆದ್ದ ಅಮಿತ್ ಚೌಧರಿ : ಯುವಜನರಿಗೆ ಸ್ಪೂರ್ತಿ
author img

By ETV Bharat Karnataka Team

Published : Dec 10, 2023, 4:26 PM IST

ಮೀರತ್​ (ಉತ್ತರಪ್ರದೇಶ): ಜೀವನದಲ್ಲಿ ಯಾವುದೇ ಕಷ್ಟದ ಸಂದರ್ಭಗಳನ್ನು ಎದುರಿಸಲು ನಾವು ಮೊದಲು ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ನಮ್ಮ ಮೇಲಿನ ನಂಬಿಕೆ, ನಮ್ಮ ಧೈರ್ಯ ಒಂದಲ್ಲ ಒಂದು ದಿನ ನಮ್ಮನ್ನು ಕಾಪಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಉತ್ತರಪ್ರದೇಶದ ಮೀರತ್​ನ ಯುವಕನೋರ್ವನ ಕಥೆ.

ಮೀರತ್​ನ ಅಮಿತ್​ ಚೌಧರಿ ಎಂಬ ಯುವಕ ಇಂದು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ಇವರು ತಮ್ಮ ಮೇಲೆ ಬಂದ ಸುಳ್ಳು ಕೊಲೆ ಆರೋಪವನ್ನು ಸ್ವತಃ ಕೋರ್ಟ್​ನಲ್ಲಿ ವಾದಿಸಿ ಇಂದು ನಿರಪರಾಧಿ ಎಂದು ಸಾಬೀತುಪಡಿಸಿಕೊಂಡಿದ್ದಾರೆ. ಈ ಮೂಲಕ ಬೇರೆಯವರು ತಮ್ಮ ಮೇಲೆ ಇಡುವ ನಂಬಿಕೆಗಿಂತ ನಾವು ನಮ್ಮ ಮೇಲೆ ಇಟ್ಟುಕೊಳ್ಳುವ ನಂಬಿಕೆ ತುಂಬಾ ಮುಖ್ಯವಾದುದು ಎಂದು ಸಾಬೀತುಪಡಿಸಿದ್ದಾರೆ.

ಕೊಲೆ ಪ್ರಕರಣದಿಂದ ಬದಲಾದ ಅಮಿತ್ ಜೀವನ : ಅಮಿತ್​ ಅವರು ಮೂಲತಃ ಬಾಗ್​ಪತ್​ನ ಕಿರ್ಟಲ್​ ನಿವಾಸಿಯಾಗಿದ್ದಾರೆ. 2011ರ ಅಕ್ಟೋಬರ್​ 12ರಂದು ಸುಮಿತ್​ ಕೈಲ್​ ಎಂಬ ದುಷ್ಕರ್ಮಿ ಇಲ್ಲಿನ ಥಾಣಾ ಭವನ್​ನ ಮಸ್ತ್​ ಭವನ್​ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ​ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದನು. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಈ ವೇಳೆ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪೊಲೀಸ್ ಪೇದೆಯೊಬ್ಬರು​ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್​ ಇಲಾಖೆ ಪ್ರಕರಣ ನಡೆದ ಸ್ಥಳವನ್ನು ಸಂಪೂರ್ಣ ಸೀಲ್​ಡೌನ್​ ಮಾಡಿತ್ತು. ಈ ಸಂಬಂಧ 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಕೆಲವು ಅಮಾಯಕರನ್ನು ಬಂಧಿಸಿದ್ದು, ಈ ವೇಳೆ ಅಮಿತ್​ ಅವರನ್ನು ಪೊಲೀಸರು ಬಂಧಿಸಿದ್ದರು.

ಆಗ ಅಮಿತ್​ ಅವರಿಗೆ ಸುಮಾರು 18 ವರ್ಷ ವಯಸ್ಸು. ಈ ಸಂದರ್ಭದಲ್ಲಿ ಅಮಿತ್​ ಬಿಎ ವ್ಯಾಸಂಗ ಮಾಡುತ್ತಿದ್ದರು. ಅಲ್ಲದೆ ತನ್ನ ಬಿಎ ವ್ಯಾಸಂಗದ ಬಳಿಕ ಭಾರತೀಯ ಸೇನೆ ಸೇರುವ ಬಗ್ಗೆ ಕನಸು ಕಾಣುತ್ತಿದ್ದರು. ಆದರೆ ಈ ಒಂದು ಘಟನೆ ಅವರ ಕನಸನ್ನು ನುಚ್ಚುನೂರು ಮಾಡಿತ್ತು. ಈ ಪ್ರಕರಣ ನಡೆಯುವಾಗ ಅಮಿತ್​ ಇಲ್ಲಿಯೇ ಇದ್ದ ತನ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಸೀಲ್​ ಡೌನ್​ ಮಾಡಿದ ಬಳಿಕ ಪೊಲೀಸರು ಸ್ಥಳದಲ್ಲಿದ್ದ ಅಮಿತ್​ನನ್ನು ಬಂಧಿಸಿದ್ದರು. ತಾನು ನಿರಪರಾಧಿ ಎಂದು ಗೋಗರೆದರೂ ಯಾರೂ ಕೇಳಿರಲಿಲ್ಲ. ಈತನ ಮೇಲೆ ಪೊಲೀಸ್​ ಪೇದೆಯ ಹತ್ಯೆಯ ಆರೋಪವನ್ನು ಮಾಡಲಾಗಿತ್ತು. ಆದರೆ ಇನ್ನೂ ಬಿಎ ವ್ಯಾಸಂಗ ಮಾಡುತ್ತಿದ್ದ ಯುವಕನಾಗಿದ್ದರಿಂದ ಏನಾಗುತ್ತಿದೆ ಎಂಬುದು ಅಮಿತ್​ಗೆ ಅರ್ಥವಾಗಿರಲಿಲ್ಲ. ಇದರಿಂದಾಗಿ ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ನುಚ್ಚುನೂರಾಗಿತ್ತು.

ಕುಟುಂಬಸ್ಥರಿಂದ ನಿರ್ಲಕ್ಷ್ಯ: ಅಮಿತ್ ಅವರು ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ಒದಗಿಬಂತು. ಈ ಬಗ್ಗೆ ಮಾತನಾಡಿದ ಅವರು, ''ನಾನು 862 ದಿನಗಳನ್ನು ಜೈಲಿನಲ್ಲಿ ಕಳೆದಿದ್ದೇನೆ. ಅಲ್ಲದೆ ನನ್ನ ಮೇಲೆ ರಸುಕಾ ಕಾಯ್ದೆಯನ್ನು ಹಾಕಲಾಗಿತ್ತು. ಜೈಲಿನಲ್ಲಿ ತುಂಬಾ ಕಷ್ಟದ ದಿನಗಳನ್ನು ಕಳೆದಿದ್ದೇನೆ. ಆದರೂ ನಾನು ಧೃತಿಗೆಡಲಿಲ್ಲ. ಬಳಿಕ ನನ್ನ ಮೇಲೆ ಹಾಕಲಾಗಿದ್ದ ರಸುಕಾ ಕಾಯ್ದೆಯನ್ನು ತೆಗೆದ ಮೇಲೆ ನನಗೆ ಜಾಮೀನು ಸಿಕ್ಕಿತು'' ಎಂದು ಭಾವುಕರಾಗಿ ಹೇಳಿದರು.

''ಜಾಮೀನು ಸಿಕ್ಕ ಬಳಿಕ ನಾನು ಇಲ್ಲಿಂದ ನೇರವಾಗಿ ಗುರುಗ್ರಾಮಕ್ಕೆ ತೆರಳಿದೆ. ಅಲ್ಲಿ ಒಬ್ಬರು ನ್ಯಾಯವಾದಿಗಳ ಬಳಿ ಮೂರು ಸಾವಿರ ರೂಪಾಯಿಗೆ ಕ್ಲರ್ಕ್​ ಆಗಿ ಸೇರಿಕೊಂಡೆ. ಜೊತೆಗೆ ನನ್ನ ಹೊಟ್ಟೆಪಾಡಿಗಾಗಿ ರಸ್ತೆ ರಸ್ತೆಗಳಲ್ಲಿ ಕ್ಯಾಲೆಂಡರ್ ಮಾರಿದೆ. ಕೆಲವು ದಿನಗಳು ತಿನ್ನಲು ಆಹಾರ ಇಲ್ಲದೆ ಉಪವಾಸ ಮಲಗಿಕೊಂಡಿದ್ದೆ'' ಎಂದು ಹೇಳಿದರು.

ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳಲು ಎಲ್​ಎಲ್​ಬಿ ಪದವಿ : ಈ ಸಂದರ್ಭದಲ್ಲಿಯೂ ಅಮಿತ್​ ಅವರು ತಮ್ಮ ಶಿಕ್ಷಣವನ್ನು ಮುಂದುವರೆಸಿದರು. 2015ರಲ್ಲಿ ಬಿಎ ಪದವಿ ಪಡೆದುಕೊಂಡರು. ಬಳಿಕ ತನ್ನನ್ನು ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಎಲ್​ಎಲ್​ಬಿ ಅಧ್ಯಯನ ಮಾಡಲು ನಿರ್ಧರಿಸಿದರು. ಎಲ್​ಎಲ್​ಬಿ ಪದವಿ ಪಡೆದ ಬಳಿಕ ತನ್ನ ಆಸೆಯಂತೆಯೇ ಪ್ರಕರಣವನ್ನು ನ್ಯಾಯಾಲಯದ ಮುಂದೆ ವಾದಿಸಿ ಇಂದು ನಿರಪರಾಧಿ ಎಂದು ಸಾಬೀತುಪಡಿಸಿಕೊಂಡಿದ್ದಾರೆ. 2023ರ ಸೆಪ್ಟೆಂಬರ್​ನಲ್ಲಿ ಕೋರ್ಟ್​ ಅಮಿತ್​ ಅವರನ್ನು ನಿರಪರಾಧಿ ಎಂದು ಘೋಷಿಸಿದೆ.

ಅಮಿತ್ ಅವರು ಎಲ್​ಎಲ್​ಬಿ ಜೊತೆಗೆ ಚೌಧರಿ ಚರಣ್​ ಸಿಂಗ್​ ವಿಶ್ವ ವಿದ್ಯಾಲಯದಿಂದ ಎಲ್​ಎಲ್​ಎಂ ಪದವಿ ಕೂಡ ಪಡೆದಿದ್ದಾರೆ. ಈ ಮೂಲಕ ಸುತ್ತಮುತ್ತಲಿನ ಯುವಜನರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅಮಿತ್ ಅವರು ನೆಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಪ್ರಾಧ್ಯಾಪಕರಾಗಿ ಯುವಜನರ ಬದುಕನ್ನು ರೂಪಿಸಲು ಮುಂದಾಗಿದ್ದಾರೆ. ಇವರ ಧೈರ್ಯ, ಸಾಹಸ ನಿಜಕ್ಕೂ ಯುವಜನರಿಗೆ ಪ್ರೇರಣೆಯಾಗಿದೆ.

ಇದನ್ನೂ ಓದಿ : ಬೆಳಿಗ್ಗೆ 6.20ಕ್ಕೆ ಕಚೇರಿಯಲ್ಲಿರುತ್ತಿದ್ದೆ, ರಾತ್ರಿ 8.30ಕ್ಕೆ ಮನೆಗೆ ಹೊರಡುತ್ತಿದ್ದೆ: ಎನ್‌.ಆರ್‌.ನಾರಾಯಣ ಮೂರ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.