ಅಮರಾವತಿ (ಆಂಧ್ರ ಪ್ರದೇಶ): ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಗುರುವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಸಿಎಂ ಜಗನ್ ಅವರನ್ನು ಅಂಬಡಿ ರಾಯುಡು ಭೇಟಿಯಾಗಿರುವುದು ಎರಡನೇ ಸಲ. ಹೀಗಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಐಪಿಎಲ್ ಟೂರ್ನಿಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರರಾದ ಅಂಬಟಿ ರಾಯುಡು ಮತ್ತು ಸಿಎಂ ಜಗನ್ ಭೇಟಿ ಸಂದರ್ಭದಲ್ಲಿ ಸಿಎಸ್‌ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಸಹ ಜೊತೆಗಿದ್ದರು. ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಗೆದ್ದ ಟ್ರೋಫಿಯನ್ನು ಸಿಎಂಗೆ ಪ್ರದರ್ಶಿಸಿದರು. ಇದೇ ವೇಳೆ ಸಿಎಸ್‌ಕೆ ತಂಡಕ್ಕೆ ಜಗನ್ ಅಭಿನಂದಿಸಿದರು.
-
సీఎం క్యాంప్ కార్యాలయంలో ముఖ్యమంత్రి శ్రీ వైఎస్ జగన్ను కలిసిన చెన్నై సూపర్ కింగ్స్ మేనేజ్మెంట్, క్రికెటర్ అంబటి రాయుడు.
— CMO Andhra Pradesh (@AndhraPradeshCM) June 8, 2023 " class="align-text-top noRightClick twitterSection" data="
సీఎస్కే టీంను అభినందించిన ముఖ్యమంత్రి శ్రీ వైఎస్ జగన్. pic.twitter.com/bwTm32LkjB
">సీఎం క్యాంప్ కార్యాలయంలో ముఖ్యమంత్రి శ్రీ వైఎస్ జగన్ను కలిసిన చెన్నై సూపర్ కింగ్స్ మేనేజ్మెంట్, క్రికెటర్ అంబటి రాయుడు.
— CMO Andhra Pradesh (@AndhraPradeshCM) June 8, 2023
సీఎస్కే టీంను అభినందించిన ముఖ్యమంత్రి శ్రీ వైఎస్ జగన్. pic.twitter.com/bwTm32LkjBసీఎం క్యాంప్ కార్యాలయంలో ముఖ్యమంత్రి శ్రీ వైఎస్ జగన్ను కలిసిన చెన్నై సూపర్ కింగ్స్ మేనేజ్మెంట్, క్రికెటర్ అంబటి రాయుడు.
— CMO Andhra Pradesh (@AndhraPradeshCM) June 8, 2023
సీఎస్కే టీంను అభినందించిన ముఖ్యమంత్రి శ్రీ వైఎస్ జగన్. pic.twitter.com/bwTm32LkjB
ಈ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಚೇರಿ (CMO Andhra Pradesh) ಟ್ವೀಟ್ ಮಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಮತ್ತು ಕ್ರಿಕೆಟಿಗ ಅಂಬಟಿ ರಾಯುಡು ಅವರು ಮುಖ್ಯಮಂತ್ರಿ ವೈಎಸ್ ಜಗನ್ ಅವರನ್ನು ಸಿಎಂ ಕ್ಯಾಂಪ್ ಕಚೇರಿಯಲ್ಲಿ ಭೇಟಿಯಾದರು. ಸಿಎಸ್‌ಕೆ ಫ್ರಾಂಚೈಸಿ ಮಾಲೀಕ ಎನ್.ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಹಾಗೂ ಅಂಬಟಿ ರಾಯುಡು ಇತ್ತೀಚೆಗೆ ಸಿಎಸ್‌ಕೆ ಗೆದ್ದ ಟ್ರೋಫಿಯನ್ನು ತೋರಿಸಿದರು. ಜೊತೆಗೆ ಸಿಎಸ್‌ಕೆ ತಂಡದ ಸದಸ್ಯರ ಹಸ್ತಾಕ್ಷರವಿರುವ ಸಿಎಂ ಅವರಿಗೆ ಜೆರ್ಸಿಯನ್ನು ನೀಡಿದರು ತಿಳಿಸಿದೆ.
ಅಲ್ಲದೇ, ಆಂಧ್ರಪ್ರದೇಶದಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಮೂಲಕ ಕ್ರೀಡೆಗೆ ಉತ್ತೇಜನ ನೀಡಲು ಉತ್ಸುಕನಾಗಿದ್ದೇನೆ ಎಂದು ಅಂಬಟಿ ರಾಯುಡು ಮುಖ್ಯಮಂತ್ರಿಗೆ ವಿವರಿಸಿದರು. ತಮ್ಮ ಸಲಹೆಯಂತೆ ಸರ್ಕಾರವು ಬಲವಾದ ಕಾರ್ಯಕ್ರಮವನ್ನು ರೂಪಿಸುತ್ತದೆ ಎಂದು ಸಿಎಂ ಭರವಸೆ ನೀಡಿದರು ಎಂದು ಸಿಎಂಒ ಕಚೇರಿ ಟ್ವೀಟ್ ಮಾಡಿದೆ.
-
Had a great meeting with honourable CM YS Jagan Mohan Reddy garu along with respected Rupa mam.and csk management to discuss the development of world class sports infrastructure and education for the underprivileged. Govt is developing a robust program for the youth of our state pic.twitter.com/iEwUTk7A8V
— ATR (@RayuduAmbati) June 8, 2023 " class="align-text-top noRightClick twitterSection" data="
">Had a great meeting with honourable CM YS Jagan Mohan Reddy garu along with respected Rupa mam.and csk management to discuss the development of world class sports infrastructure and education for the underprivileged. Govt is developing a robust program for the youth of our state pic.twitter.com/iEwUTk7A8V
— ATR (@RayuduAmbati) June 8, 2023Had a great meeting with honourable CM YS Jagan Mohan Reddy garu along with respected Rupa mam.and csk management to discuss the development of world class sports infrastructure and education for the underprivileged. Govt is developing a robust program for the youth of our state pic.twitter.com/iEwUTk7A8V
— ATR (@RayuduAmbati) June 8, 2023
ಮತ್ತೊಂದೆಡೆ, ರಾಯುಡು ಟ್ವೀಟ್ ಮಾಡಿದ್ದು, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ರೂಪಾ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಅವರೊಂದಿಗೆ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯ ಮತ್ತು ಹಿಂದುಳಿದವರಿಗೆ ಶಿಕ್ಷಣದ ಅಭಿವೃದ್ಧಿ ಕುರಿತು ಚರ್ಚಿಸಲು ಉತ್ತಮ ಸಭೆ ನಡೆಸಿದ್ದೇವೆ. ರಾಜ್ಯ ಸರ್ಕಾರವು ನಮ್ಮ ಯುವಕರಿಗೆ ದೃಢವಾದ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಐಪಿಎಲ್ ಫೈನಲ್ ದಿನದಂದು ರಾಯುಡು ಐಪಿಎಲ್ಗೆ ವಿವಾದ ಘೋಷಿಸಿದ್ದಾರೆ. ರಾಜಕೀಯಕ್ಕೆ ಬರುವುದಾಗಿ ಈ ಹಿಂದೆ ಘೋಷಿಸಿದ್ದರು. ಇದರ ನಡುವೆ ಜಗನ್ ಮೋಹನ್ ರೆಡ್ಡಿ ಅವರೊಂದಿಗಿನ ಮೇಲಿಂದ ಮೇಲೆ ಸಭೆಗಳು ನಡೆಸುತ್ತಿದ್ದಾರೆ. ಹೀಗಾಗಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ)ಕ್ಕೆ ರಾಯುಡು ಸೇರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದಂತೆ ಆಗಿದೆ.
ಇದನ್ನೂ ಓದಿ: ರಾಯುಡುಗೆ ಗೆಲುವಿನ ವಿದಾಯ ಕೊಟ್ಟ ಚೆನ್ನೈ: ಕಣ್ಣೀರು ಹಾಕಿದ ಅಂಬಾಟಿ ರಾಯುಡು