ದೇವ್ಘರ್: ಮಧ್ಯಾಹ್ನದ ವೇಳೆಗೆ ಒಂದು ವಿಶಿಷ್ಟ ದೃಶ್ಯ ನೋಡುವ ಅವಕಾಶ ಜನತೆಗೆ ಸಿಕ್ಕಿದೆ. ಹೌದು, ಅಪರೂಪದಲ್ಲಿ ಅಪರೂಪ ಎನ್ನುವಂತೆ, ಆಕಾಶದಲ್ಲಿ ಸೂರ್ಯನ ಸುತ್ತಲೂ ಇಂದು ವೃತ್ತ ಆವೃತವಾಗಿತ್ತು. ಒಂದು ವೃತ್ತಾಕಾರದಲ್ಲಿ ಸೂರ್ಯನನ್ನು ಸೆರೆ ಹಿಡಿದಂತೆ ಕಾಣುವ ದೃಶ್ಯ ಇದಾಗಿತ್ತು.
ಸೂರ್ಯನ ಸುತ್ತಲೂ ಯಾರೋ ಒಂದು ಸರ್ಕಲ್ ಮಾಡಿ ಅದರಲ್ಲಿ ಸೂರ್ಯನನ್ನು ಸೆರೆ ಹಿಡಿದಂತೆ ಕಾಣುತ್ತಿತ್ತು. ಈ ಚಿತ್ರವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ಈ ಅದ್ಭುತ ದೃಶ್ಯವನ್ನು ನೋಡಲು ತಮ್ಮ ಮನೆ, ಕಟ್ಟಡದ ಮೇಲ್ಛಾವಣಿಗೆ ತಲುಪಿದ್ದಾರೆ.
ಆದ್ರೆ ಹವಾಮಾನ ಶಾಸ್ತ್ರಜ್ಞರು ಇದನ್ನು ಸಾಮಾನ್ಯ ವಿಷಯವೆಂದು ತಿಳಿಸಿದ್ದಾರೆ. ವಾತಾವರಣದಲ್ಲಿನ ಧೂಳಿನ ಕಣಗಳ ಪ್ರಮಾಣವು ಅಧಿಕ ಇದ್ದಾಗ ತೇವಾಂಶದೊಂದಿಗೆ ಬೆರೆತು ನಡೆಯುವ ಪ್ರಕ್ರಿಯೆ ವೃತ್ತದ ರೂಪದಲ್ಲಿ ನಮಗೆ ಗೋಚರಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಬಹುಕೋಟಿ ಮೇವು ಹಗರಣ ಪ್ರಕರಣ; ಲಾಲೂ ಪ್ರಸಾದ್ ಯಾದವ್ಗೆ ಜಾಮೀನು ಮಂಜೂರು!
ಇನ್ನೂ ಬಾಬಾ ದೇವಾಲಯದ ಗುಮ್ಮಟ ಸೇರಿಸಿ ಸೆರೆ ಹಿಡಿದಿರುವ ಸೂರ್ಯನ ದೃಶ್ಯ ಮತ್ತಷ್ಟು ಸುಂದರವಾಗಿ ಕಾಣುತ್ತಿತ್ತು.