ETV Bharat / bharat

ಭಾರತದಲ್ಲಿ ಅಸಹಿಷ್ಣುತೆ ಹೆಚ್ಚು ಕಾಲ ಉಳಿಯುವುದಿಲ್ಲ: ಅಮರ್ತ್ಯ ಸೇನ್

author img

By

Published : Jan 9, 2023, 11:06 PM IST

ದೇಶದಲ್ಲಿ ವೈವಿಧ್ಯತೆಯ ಅನುಕೂಲಗಳು ಮತ್ತು ಅನಾನುಕೂಲಗಳು ಎರಡನ್ನೂ ನಾವು ನೋಡಬೇಕಾಗಿದೆ - ಧರ್ಮಗಳು ಮತ್ತು ಜನಾಂಗಗಳ ನಡುವಿನ ತಪ್ಪು ತಿಳಿವಳಿಕೆ - ಅಜ್ಞಾನ ಹಾಗೂ ಶಿಕ್ಷಣದ ಕೊರತೆಯೇ ಕಾರಣ

amartya-sen-says-intolerance-in-india-will-not-last-long-bjp-asks-him-to-shut-up
ಭಾರತದಲ್ಲಿ ಅಸಹಿಷ್ಣುತೆ ಹೆಚ್ಚು ಕಾಲ ಉಳಿಯುವುದಿಲ್ಲ: ಅಮರ್ತ್ಯ ಸೇನ್

ಕೋಲ್ಕತ್ತಾ: ಭಾರತದಲ್ಲಿ ಚಾಲ್ತಿಯಲ್ಲಿರುವ 'ಅಸಹಿಷ್ಣುತೆಯ ವಾತಾವರಣ' ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಇದರ ವಿರುದ್ಧ ಹೋರಾಡಲು ಜನರು ಒಂದಾಗಬೇಕು ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಭಾನುವಾರ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಪ್ರತಿಚಿ ಟ್ರಸ್ಟ್ ಆಯೋಜಿಸಿದ್ದ 'ನಿಮ್ಮ ನೆರೆಹೊರೆಯವರನ್ನು ತಿಳಿದುಕೊಳ್ಳಿ' ಎಂಬ ಶೀರ್ಷಿಕೆಯ ಚರ್ಚೆಯಲ್ಲಿ ಭಾಗವಹಿಸಿದ ಗಣ್ಯ ಅರ್ಥಶಾಸ್ತ್ರಜ್ಞರು, "ಯಾರಾದರೂ ನಿಮ್ಮ ಅಭಿಪ್ರಾಯವನ್ನು ಒಪ್ಪದಿದ್ದರೆ ಅಥವಾ ಬೇರೆ ಧರ್ಮದವರಾಗಿದ್ದರೆ, ಅವನನ್ನು ಕೊಲ್ಲಲಾಗುತ್ತದೆ, ಈ ಪರಿಸ್ಥಿತಿ ಹೆಚ್ಚು ಕಾಲ ಉಳಿಯುವುದಿಲ್ಲ, ಜನರು ಒಟ್ಟಾಗಿ ಕೆಲಸವನ್ನು ಮಾಡಬೇಕು, ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪರಸ್ಪರರ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ಬಹುಶಃ ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ನಾವು ಹೆಚ್ಚಾಗಿ ಕ್ಷಮಿಸಲು ಮರೆತು ಬಿಡುತ್ತೇವೆ”ಎಂದು ನೊಬೆಲ್ ಪ್ರಶಸ್ತಿ ವಿಜೇತರು ಹೇಳಿದರು.

ಅಮರ್ತ್ಯ ಸೇನ್ ಸಂಶೋಧನಾ ಸಂಸ್ಥೆಯ ಸಂಶೋಧನೆಯು ಪ್ರಸ್ತುತ ಜಗತ್ತಿನಲ್ಲಿ ಭಾವನಾತ್ಮಕ ಸಂವಹನದ ಹಾದಿಗೆ ಕಂಟಕವನ್ನು ಬಹಿರಂಗಪಡಿಸಿದೆ ಧರ್ಮಗಳು ಮತ್ತು ಜನಾಂಗಗಳ ನಡುವಿನ ಭಯಾನಕ ತಪ್ಪು ತಿಳುವಳಿಕೆ. ಅಜ್ಞಾನ ಹಾಗೂ ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ’ ಎಂದು ಹೇಳಿದರು

ಅಮರ್ತ್ಯ ಸೇನ್ ಏಳನೇ ತರಗತಿಯ ವಿದ್ಯಾರ್ಥಿಯ "ವೈವಿಧ್ಯತೆಯು ಯಾವಾಗಲೂ ಉತ್ತಮವಾಗಿದೆಯೇ?" ಎಂಬ ಪ್ರಶ್ನೆಗೆ ಪ್ರತಿಕ್ರತಿಯಿಸುತ್ತಾ, ಇತ್ತೀಚೆಗೆ, ಭಾರತವು ವೈವಿಧ್ಯತೆಯಲ್ಲಿ ಮುಳುಗಿದೆ, ಮೊದಲು ಹೀಗೆ ಇರಲಿಲ್ಲ. ವೈವಿಧ್ಯತೆಯ ಅನುಕೂಲಗಳು ಮತ್ತು ಅನಾನುಕೂಲಗಳು ಎರಡನ್ನೂ ನಾವು ನೋಡಬೇಕಾಗಿದೆ." ಇದರಲ್ಲಿ ಒಂದು ಗುಂಪು ಬಹಳಷ್ಟು ಹಣವನ್ನು ಹೊಂದಿದೆ ಮತ್ತು ಇನ್ನೊಂದು ಗುಂಪು ಬಡವಾಗಿದೆ ಅದಕ್ಕಾಗಿ ವೈವಿಧ್ಯತೆಯನ್ನು ಅವರು ಇಷ್ಟಪಡುವುದಿಲ್ಲ ಎಂದು ಉತ್ತರಿಸಿದರು.

ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಪರಸ್ಪರ ಸಂವಹನವನ್ನು ಉತ್ತೇಜಿಸುವುದು. ಸಮಾರಂಭದಲ್ಲಿ, ಈ ದಿನ, ವಿಶ್ವ ಭಾರತಿಯ ಪ್ರಾಧ್ಯಾಪಕ ಬಿಶ್ವಜಿತ್ ರಾಯ್ ಅವರು ಅಮರ್ತ್ಯ ಸೇನ್ ಅವರ ತಾಯಿಯ ಅಜ್ಜ ಕ್ಷಿತಿಮೋಹನ್ ಸೇನ್ ಅವರ "ಭಾರತದಲ್ಲಿ ಹಿಂದೂ-ಮುಸ್ಲಿಮರ ಜಂಟಿ ಅನ್ವೇಷಣೆ" ಎಂಬ ವಿಷಯಕ್ಕೆ ಸಂಬಂಧಿಸಿದ ಪ್ರಬಂಧ ಸಂಗ್ರಹದ ವಿವಿಧ ಭಾಗಗಳನ್ನು ಓದಿದರು.

ಇದೇ ವೇಳೆ, ಅವರ ಮರಿಮೊಮ್ಮಗ ಶಾಂತಭಾನು ಸೇನ್ ಅವರು ಕ್ಷಿತಿಮೋಹನ್ ಅವರ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಾಮರಸ್ಯದ ಕಲ್ಪನೆಯ ಕುರಿತು ಭಾಷಣ ಮಾಡಿದರು. ಈ ದೇಶದಲ್ಲಿ ಸಮಾಜ, ಕಲೆ ಮತ್ತು ಸೃಜನಶೀಲತೆಯಲ್ಲಿ ಎರಡು ಧರ್ಮಗಳು ಒಟ್ಟಿಗೆ ನಡೆಯುವ ಸಂಪ್ರದಾಯವನ್ನು ಒತ್ತಿ ಹೇಳಿದರು. ಈ ದಿನ, ಅಮರ್ತ್ಯ ಸೇನ್ ಅವರ ಹೇಳಿಕೆಯನ್ನು ಈ ರಾಜ್ಯದ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ ಬೆಂಬಲಿಸಿದೆ.

ಈ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್​ನ ರಾಷ್ಟ್ರೀಯ ವಕ್ತಾರರಲ್ಲಿ ಒಬ್ಬರಾದ ಸುಖೇಂದು ಶೇಖರ್ ರಾಯ್ ಅವರು, ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞರು ಸರಿಯಾದ ಮಾತನ್ನೇ ಹೇಳಿದ್ದಾರೆ. ದೇಶಾದ್ಯಂತ ವಿಭಜನೆಯ ಸಂಸ್ಕೃತಿಯನ್ನು ಅಮರ್ತ್ಯ ಸೇನ್ ಟೀಕಿಸಿದ್ದಾರೆ. ಈ ಕುರಿತು ವಿವರಿಸಿದ ರಾಜ್ಯಸಭಾ ಸಂಸದರು, ಬಿಜೆಪಿಯು ಧರ್ಮ, ಜಾತಿ, ಲಿಂಗ ಮತ್ತು ಭಾಷೆಯ ಆಧಾರದ ಮೇಲೆ ಇಡೀ ದೇಶವನ್ನು ವಿಭಜಿಸಿರುವ ಪರಿಸ್ಥಿತಿಯನ್ನು ಬದಲಾಯಿಸಲು ಅರ್ಮಾತ್ಯ ಸೇನ್ ಬಯಸಿದ್ದಾರೆ.

ಮತ್ತೊಂದೆಡೆ, ಸಿಪಿಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ, "ಅಮರ್ತ್ಯ ಸೇನ್​ ನಿಜವಾದ ಚಿಂತಕರಾಗಿ ತಮ್ಮ ಗ್ರಹಿಕೆ ಬಗ್ಗೆ ಮಾತನಾಡಿದರು. ರವೀಂದ್ರನಾಥ್, ನಜ್ರುಲ್ ನಮ್ಮ ದೇಶದ ಪರಂಪರೆ, ನಮ್ಮ ರಾಜ್ಯದ ಬಗ್ಗೆ ಮಾತನಾಡುವಾಗ ನಾವು ಬಹುತ್ವದ ಬಗ್ಗೆ ಮಾತನಾಡುತ್ತೇವೆ ಮತ್ತು ಏಕತೆಯ ಬಗ್ಗೆ ಮಾತನಾಡುತ್ತೇವೆ. ಅದನ್ನೇ ಹೈಲೈಟ್ ಮಾಡಲು ಅಮರ್ತ್ಯ ಸೇನ್ ಬಯಸಿದ್ದರು ಎಂದು ಹೇಳಿದರು.

ಮತ್ತೊಂದೆಡೆ, ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ತಮ್ಮ ಹೇಳಿಕೆಗೆ ನೊಬೆಲ್ ಪ್ರಶಸ್ತಿ ವಿಜೇತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. "ಮೊದಲು ಅವರು ದೇಶದ ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದ್ದರು, ಈಗ ಅಸಹಿಷ್ಣುತೆ ಕಾಣುತ್ತಿದೆ. ನಿಮಗೆ ವಯಸ್ಸಾಗಿದೆ, ಶಾಂತವಾಗಿ ಕುಳಿತುಕೊಳ್ಳಿ ಮತ್ತು ಇಲ್ಲಿಗೆ ಬರಲು ನೀವು ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ?" ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಾರ್ವಜನಿಕ ಕೆರೆಯಲ್ಲಿ ಸ್ನಾನ; ಕೆಳವರ್ಗದ ಮಹಿಳೆಯರನ್ನು ಅರೆಬೆತ್ತಲಾಗಿ ಮನೆಗೆ ಓಡಿಸಿ ಹಲ್ಲೆ: ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.