ETV Bharat / bharat

ಲಾಲೂ ಕಾಲದ ರೈಲ್ವೆ ಯೋಜನೆಗೆ ಕೇವಲ 1000 ರೂ ಹಂಚಿಕೆ; ಯುವಕನಿಂದ ವಿನೂತನ ಪ್ರತಿಭಟನೆ - ಜಿಲ್ಲೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ

204 ಕೋಟಿ ವೆಚ್ಚದ 76 ಕಿ.ಮೀ ಉದ್ದದ ಸೀತಾಮರ್ಹಿ-ಬಾಪುಧಾಮ್​ ಮೊತಿಹರಿಯ ಯೋಜನೆಗೆ ಕೇವಲ 1000 ರೂ ಹಣ ಹಂಚಿಕೆ ಮಾಡಿರುವುದಕ್ಕೆ ಶಿಯೋಹರ್​ ನಗರದ ಯುವಕ ಆಕ್ರೋಶ ವ್ಯಕ್ತಪಡಿಸಿ, ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಲಾಲೂ ಕಾಲದ ರೈಲ್ವೆ ಯೋಜನೆಗೆ ಕೇವಲ 1000 ರೂ ಹಂಚಿಕೆ; ಯುವಕನಿಂದ ವಿನೂತನ ಪ್ರತಿಭಟನೆ

author img

By

Published : Feb 11, 2023, 1:30 PM IST

ಶಿಯೋಹರ್​: ಬಜೆಟ್​ನಲ್ಲಿ ಬಿಹಾರದ ಶೋಹರ್​ ಜಿಲ್ಲೆಯ ಸೀತಾಮರ್ಹಿ-ಬಾಪುಧಾಮ್​ ಮೊತಿಹರಿ ರೈಲ್ವೆ ಯೋಜನೆಗೆ ಕೇವಲ 1ಸಾವಿರ ರೂ ನೀಡಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ವಿನೂತನ ರೀತಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆರ್ಯನ್​ ಚೌಹಾಣ್ ಎಂಬ ವ್ಯಕ್ತಿ, ​ತಮ್ಮ ಜಿಲ್ಲೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಿದ್ದಾರೆ. ಬಜೆಟ್​ನಲ್ಲಿ ಕೇವಲ 1000 ರೂ ನೀಡಿದ ಹಿನ್ನೆಲೆ ಸಚಿವರಿಗೆ ಒಂದು ಸಾವಿರ ರೂಪಾಯಿ ಚೆಕ್​ ಕಳುಹಿಸುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಯೋಹರ್ ಜಿಲ್ಲೆಗೆ ಸಂಪರ್ಕಿಸುವ ಸೀತಾಮರ್ಹಿ-ಬಾಪುಧಾಮ್​ ಮೊತಿಹರಿಯ 76 ಕಿ.ಮೀ ಉದ್ದದ ಈ ರೈಲ್ವೆ ಯೋಜನೆ ಅಂದಾಜು 204 ಕೋಟಿ ವೆಚ್ಚದ್ದಾಗಿದೆ. ಈ ಯೋಜನೆಗೆ ಕೇವಲ ಒಂದು ಸಾವಿರ ರೂ ಹಂಚಿಕೆ ಮಾಡಿದ್ದಕ್ಕೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2007ರಲ್ಲಿ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್​ ಯಾದವ್​ ಅವರ ಅವಧಿಯಲ್ಲಿ ಆರಂಭವಾದ ಪ್ರಾಜೆಕ್ಟ್​ ಇದಾಗಿದೆ. ಈ ಯೋಜನೆಗೆ ಈ ಬಾರಿಯಾದರೂ ಉತ್ತಮ ಹಣ ನಿಗದಿ ಪಡಿಸಿ, ಮಂದಗತಿಯಲ್ಲಿ ಸಾಗುತ್ತಿದ್ದ ಕಾರ್ಯಕ್ಕೆ ಚುರುಕು ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಲ್ಲಿನ ಜನರ ನಿರೀಕ್ಷೆ ಈಗ ಹುಸಿಯಾಗಿದೆ.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆರ್ಯನ್​, ಇದು ಸಂಪೂರ್ಣವಾಗಿ ಅಪಹಾಸ್ಯಕ್ಕೀಡುಮಾಡುವ ಘಟನೆಯಾಗಿದೆ. ರೈಲ್ವೆ ಸಚಿವಾಲಯದ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಈ ಸಮಸ್ಯೆ ಬಗೆಹರಿಸಿ, ತಾರತಮ್ಯ ನಿವಾರಣೆ ಮಾಡದಿದ್ದರೆ, ಇಲ್ಲಿನ ಯುವಕರು ಬೃಹತ್‌ ಪ್ರತಿಭಟನೆಗೆ ಮುಂದಾಗುತ್ತಾರೆ. ಶಿಯೋಹರ್ ರೈಲ್ವೆ ಯೋಜನೆಗೆ ಇಷ್ಟು ಕಡಿಮೆ ಮೊತ್ತದ ಹಣ ಮಂಜೂರು ಮಾಡಿರುವುದು ಕೇಂದ್ರ ಸರ್ಕಾರದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದು ಮಹಾತ್ಮ ಗಾಂಧಿ ನಡೆದಾಡಿದ ಸ್ಥಳ. ಈ ರೈಲು ಯೋಜನೆಗೆ ಕೇವಲ 1000 ರೂಪಾಯಿಗಳನ್ನು ಒದಗಿಸುವ ಮೂಲಕ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಅವರಿಗೆ ಅವಮಾನಿಸಿದೆ ಎಂದು ಆರೋಪಿಸಿದರು.

ಬಿಹಾರದ ಶಿಯೋಹರ್ ಪ್ರದೇಶಕ್ಕೆ ಕೇವಲ 1000 ರೂ. ನೀಡಿರುವ ಕೇಂದ್ರ ರೈಲ್ವೆ ಸಚಿವಾಲಯದ ಉಭಯಪಕ್ಷೀಯ ಧೋರಣೆಯನ್ನು ಇನ್ಮುಂದೆ ಸಹಿಸಲಾಗುವುದಿಲ್ಲ. ಎಲ್ಲರೂ ಇದೀಗ ಒಗ್ಗೂಡುವ ಸಮಯ ಬಂದಿದ್ದು, ಒಟ್ಟಾಗಿ ಹೋರಾಟ ಮಾಡಬೇಕಿದೆ. ಪ್ರತಿಪಕ್ಷಗಳ ನಾಯಕರು ಕೂಡ ಒಗ್ಗೂಡಬೇಕು. ಇದನ್ನು ವಿರೋಧಿಸಿ ಹಾಲಿ ಸಂಸದರು ಮತ್ತು ಶಾಸಕರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಂಸದೆ ರಮಾ ದೇವಿ ಅವರು ಸತತ ಮೂರನೇ ಬಾರಿಗೆ ಲೋಕಸಭೆಯಲ್ಲಿ ಈ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಅವರ ನಡೆಯಿಂದ ಇದೀಗ ನಿರಾಶೆಗೊಂಡಿದ್ದೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ಜನರ ಆಕ್ರೋಶಕ್ಕೆ ಗುರಿಯಾಗಲಿದ್ದಾರೆ. ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಆರ್ಯನ್​ ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದರು.

ಸೀತಾಮರ್ಹಿ-ಬಾಪುಧಾಮ್ ಮೋತಿಹಾರಿ ರೈಲು ಮಾರ್ಗದ ಮೂಲ ಯೋಜನೆಯ ಪ್ರಕಾರ, ಅವರು ಎರಡು ಜಂಕ್ಷನ್‌ಗಳು, ಮೂರು ನಿಲುಗಡೆಗಳು ಮತ್ತು ಐದು ರೈಲ್ವೆ ಕ್ರಾಸಿಂಗ್‌ಗಳು ಸೇರಿದಂತೆ 10 ರೈಲು ನಿಲ್ದಾಣಗಳ ನಿರ್ಮಾಣವನ್ನು ಕೈಗೊಳ್ಳಬೇಕು. ಈ ಯೋಜನೆಯು ಸರಿಯಾದ ಸಮಯಕ್ಕೆ ಮುಗಿದಿದ್ದರೆ, ಶಿಯೋಹರ್ ಜಿಲ್ಲೆಗೆ ರೈಲು ಮಾರ್ಗಕ್ಕೆ ಸಂಪರ್ಕಿಸಲಾಗುತ್ತಿತ್ತು.

ಇದನ್ನೂ ಓದಿ: ಆರು ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಫೇಲ್​; ಸೋಲೇ ಗೆಲುವಿನ ಮೆಟ್ಟಿಲೆಂದು ಏಳನೇ ಬಾರಿಗೆ ಐಪಿಎಸ್​ ಆದ ಸಾಧಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.