ರಾಜಕೋಟ್: ಸೋಮನಾಥದಲ್ಲಿ ಅಲ್ಲಾ ನೆಲೆಸಿದ್ದಾನೆ ಮತ್ತು ಅಜ್ಮೇರ್ನಲ್ಲಿ ಭಗವಾನ್ ಶಿವ ನೆಲೆಸಿದ್ದಾನೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಹಾಗೂ ರಾಜಕೋಟ್ ಪೂರ್ವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ್ ರಾಜ್ಯಗುರು ಭಾರಿ ವಿವಾದ ಎಬ್ಬಿಸಿದ್ದಾರೆ.
ಸೋಮನಾಥ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ ಹಾಗೂ ಅಜ್ಮೇರ್ ಶರೀಫ್ ದರ್ಗಾ ಇರುವ ಅಜ್ಮೇರ್ ಮುಸಲ್ಮಾನರ ಪವಿತ್ರ ಕ್ಷೇತ್ರವಾಗಿದೆ. ಶನಿವಾರ ರಾಜಕೋಟ್ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಇಂದ್ರನೀಲ್ ಈ ಹೇಳಿಕೆ ನೀಡಿದ್ದು, ಅಲ್ಲಾಹು ಅಕ್ಬರ್ ಘೋಷಣೆಗಳೊಂದಿಗೆ ಸಭೆ ಅಂತ್ಯವಾಗಿದೆ.
ನನ್ನ ದೃಷ್ಟಿಯಲ್ಲಿ, ಮಹಾದೇವ ಮತ್ತು ಅಲ್ಲಾ ಒಂದೇ. ಅಲ್ಲಾ ಸೋಮನಾಥದಲ್ಲಿ ನೆಲೆಸಿದ್ದಾನೆ, ಮಹಾದೇವ ಅಜ್ಮೀರ್‌ನಲ್ಲಿ ನೆಲೆಸಿದ್ದಾನೆ ಎಂದು ಇಂದ್ರನೀಲ್ ರಾಜ್ಯಗುರು, ಮುಸ್ಲಿಮರ ಗಣನೀಯ ಜನಸಂಖ್ಯೆ ಹೊಂದಿರುವ ರಾಜ್‌ಕೋಟ್‌ನ ಜಂಗ್ಲೇಶ್ವರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಒಂದು ವಾರ ಬಾಕಿ ಇರುವಾಗ ಈ ಹೇಳಿಕೆ ರಾಜ್ಯದಲ್ಲಿ ರಾಜಕೀಯ ವಾತಾವರಣವನ್ನು ಮತ್ತೂ ಬಿಸಿಯಾಗಿಸಿವೆ.
ರಾಜ್ಯಗುರು ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿಯ ಪ್ರಾದೇಶಿಕ ಉಪಾಧ್ಯಕ್ಷ ಡಾ.ಭರತ್ ಬೋಧ್ರಾ, ಇಂದ್ರನೀಲ್ ಅವರ ಕಾರ್ಯವು ಯಾವುದೇ ಸಿದ್ಧಾಂತ ಹೊಂದಿರದ ಅವಕಾಶವಾದಿ ಸನ್ಯಾಸಿಯಂತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆ: ಜಾರಕಿಹೊಳಿ ವಿರುದ್ಧ ಖಾಸಗಿ ದೂರು ದಾಖಲು