ETV Bharat / bharat

ಆಲಯಾ ಅಪಾರ್ಟ್‌ಮೆಂಟ್ ಕುಸಿತ: 14 ಮಂದಿ ರಕ್ಷಣೆ, ಉಳಿದವರ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ - ಲಕ್ನೋದ ಅಲಯಾ ಅಪಾರ್ಟ್‌ಮೆಂಟ್‌

ಮಂಗಳವಾರ ಸಂಜೆ 6:30ರ ಸುಮಾರಿಗೆ ಕುಸಿದು ಬಿದ್ದ ಲಕ್ನೋದ ಅಲಯಾ ಅಪಾರ್ಟ್‌ಮೆಂಟ್‌- ಅವಶೇಷಗಳಡಿ ಸಿಲುಕಿದ್ದ 14 ಜನರ ರಕ್ಷಣೆ - ಮುಂದುವರಿದ ರಕ್ಷಣಾ ಕಾರ್ಯಾಚರಣೆ

Alaya apartment collapses in Lucknow
ಆಲಯಾ ಅಪಾರ್ಟ್‌ಮೆಂಟ್ ಕುಸಿತ: 14 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ...
author img

By

Published : Jan 25, 2023, 6:19 PM IST

ಲಕ್ನೋ(ಉತ್ತರ ಪ್ರದೇಶ):ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿ ಮಂಗಳವಾರ ಸಂಜೆ ಅಪಾರ್ಟ್‌ಮೆಂಟ್​ ಕುಸಿದು ಬಿದ್ದಿದೆ, ಸದ್ಯ ಅವಶೇಷಗಳಿಂದ 14 ಜನರನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಲಕ್ನೋದ ಐಷಾರಾಮಿ ಪ್ರದೇಶವಾದ ಹಜರತ್‌ಗಂಜ್‌ನಲ್ಲಿರುವ ಅಲಯಾ ಅಪಾರ್ಟ್‌ಮೆಂಟ್ ಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ.

ಅಪಾರ್ಟ್‌ಮೆಂಟ್​ನ ಅವಶೇಷಗಳ ಅಡಿಯಲ್ಲಿ ವಯೋವೃದ್ಧರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸಿಲಿಕಿಕೊಂಡಿರುವ ಎಂದು ತಿಳಿಬಂದಿದೆ. ಅಧಿಕಾರಿಗಳ ಪ್ರಕಾರ, ಬಹುಮಹಡಿ ಅಪಾರ್ಟ್‌ಮೆಂಟ್ ಮಂಗಳವಾರ ಸಂಜೆ 6:30 ರ ಸುಮಾರಿಗೆ ಕುಸಿದು ಬಿದ್ದಿದೆ, ಒಟ್ಟು 12 ಫ್ಲಾಟ್‌ಗಳಲ್ಲಿ 8 ರಿಂದ 10 ಕುಟುಂಬಗಳು ವಾಸವಾಗಿದ್ದವು ಎಂದು ಅವರು ತಿಳಿಸಿದ್ದಾರೆ. ಘಟನೆಯ ನಂತರ, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ, ನೆರವಿನಿಂದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದರು.

ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಭೇಟಿ: ಇಲ್ಲಿಯವರೆಗೆ ಅವಶೇಷಗಳಡಿ ಸಿಲುಕ್ಕಿದ್ದ 14 ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಪಾಠಕ್ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಂತರ ಅವರು, ಯುಪಿ ಉಪ ಮುಖ್ಯಮಂತ್ರಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದರು.

ಯಜ್ದಾನ್ ಬಿಲ್ಡರ್ಸ್ ನಿರ್ಮಿಸಿರುವ ಅಪಾರ್ಟ್‌ಮೆಂಟ್: ಪಾಠಕ್ ಅವರಲ್ಲದೆ, ಮುಖ್ಯಮಂತ್ರಿಗಳ ಸಲಹೆಗಾರ ಅವನೀಶ್ ಅವಸ್ತಿ, ಲಕ್ನೋ ಮುನ್ಸಿಪಲ್ ಕಮಿಷನರ್ ಇಂದ್ರಜಿತ್ ಸಿಂಗ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದರು. ಈ ನಡುವೆ ವಜೀರ್ ಹಸನ್ ರಸ್ತೆಯಲ್ಲಿರುವ ಅಲಯಾ ಅಪಾರ್ಟ್‌ಮೆಂಟ್ ಅನ್ನು ಈ ಹಿಂದೆ ವಿವಾದಗಳಿಗೆ ಸಿಲುಕಿದ್ದ ಯಜ್ದಾನ್ ಬಿಲ್ಡರ್ಸ್ ನಿರ್ಮಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಡಿಮೆ ಪ್ರದೇಶದಲ್ಲಿ ಬಹುಮಹಡಿ ಅಪಾರ್ಟ್ಮೆಂಟ್ ನಿರ್ಮಾಣ: ನಿಯಮ ಉಲ್ಲಂಘಿಸಿ ಬಿಲ್ಡರ್ ಅಕ್ರಮವಾಗಿ ಅಪಾರ್ಟ್ ಮೆಂಟ್ ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ಬಹುಮಹಡಿ ಅಪಾರ್ಟ್ಮೆಂಟ್ ಅನ್ನು 2000 ಚದರ ಮೀಟರ್‌ಗಿಂತ ಕಡಿಮೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ, ಇದು ತುಂಬಾ ಕಡಿಮೆ ಮತ್ತು ನಿಯಮಗಳ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಈ ಕಟ್ಟಡ ನಿರ್ಮಾಣದ ನಕ್ಷೆಗೆ ಅಧಿಕಾರಿಗಳು ಕೂಡ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

ಇದರ ಮಧ್ಯೆ ವಸತಿ ಅಪಾರ್ಟ್‌ಮೆಂಟ್ ಕುಸಿದು ಬಿದ್ದಿರುವುದು ಕುಟುಂಬಸ್ಥರಲ್ಲಿ ದುಃಖ ಮತ್ತು ಆಘಾತವನ್ನುಂಟು ಮಾಡಿದೆ. ಅವಶೇಷಗಳಡಿಯಲ್ಲಿ ಹುದುಗಿರುವ ಸಂತ್ರಸ್ತರ ಕುಟುಂಬ ಸದಸ್ಯರು ತಮ್ಮವರು ಕ್ಷೇಮವಾಗಿ ಹೊರಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ನ ಮುಂದೆ ಹಾಜರಿದ್ದ ಮಹಿಳೆಯೊಬ್ಬರು ತಮ್ಮ ತಾಯಿ ಶಹಜಹಾನ್ ಫ್ಲಾಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಮಂಗಳವಾರ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ಈಕೆ ಇನ್ನೂ ವಾಪಸ್ ಬಂದಿಲ್ಲ. ಅವಶೇಷಗಳಡಿ ಸಿಲುಕಿರುವವರಲ್ಲಿ ಮಹಿಳೆಯೂ ಸೇರಿದ್ದಾಳೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ:ಮಲೆಮಹದೇಶ್ವರ ಬೆಟ್ಟದ ಬಳಿ ಗುಜರಾತ್ ಬಸ್ ಪಲ್ಟಿ: ಜಗಳೂರು ಬಳಿ ಅಪಘಾತದಲ್ಲಿ ಆರು ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.