ಜೈಪುರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) CA 2022 ರ ಅಂತಿಮ ಫಲಿತಾಂಶ ಬಿಡುಗಡೆ ಮಾಡಿದೆ. ಫಲಿತಾಂಶದ ಜೊತೆಗೆ, ಐಸಿಎಐ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಇದರಲ್ಲಿ ಜೈಪುರದ ಅಕ್ಷತಾ ಗೋಯಲ್ ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಇದಲ್ಲದೇ ಜೈಪುರದ ಇನ್ನೂ ಐವರು ವಿದ್ಯಾರ್ಥಿಗಳು ಟಾಪ್ 50ರಲ್ಲಿ ಸ್ಥಾನ ಪಡೆದಿದ್ದಾರೆ.
ಅಕ್ಷತಾ ಅವರ ತಂದೆ ಮತ್ತು ಅಕ್ಕ ಕೂಡ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಈಟಿವಿ ಭಾರತದ ಜೊತೆ ಅಕ್ಷತಾ ಮಾತನಾಡಿದ್ದು, ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸರಿಯಾದ ಯೋಜನೆ ಅತ್ಯಗತ್ಯ. ಕಠಿಣ ಪರಿಶ್ರಮಕ್ಕಿಂತ ಸ್ಮಾರ್ಟ್ ವರ್ಕ್ ಮುಖ್ಯವಾಗುತ್ತದೆ. ಕಳೆದ 6 ತಿಂಗಳಲ್ಲಿ ಅವರು ಅಧ್ಯಯನದತ್ತ ಹೆಚ್ಚು ಗಮನ ಹರಿಸಿದ್ದರಂತೆ. ಅಲ್ಲದೇ ಸಾಮಾಜಿಕ ಮಾಧ್ಯಮಗಳಿಂದ ಸಾಕಷ್ಟು ದೂರ ಸಹ ಇದ್ದರಂತೆ.
ಇದನ್ನೂ ಓದಿ: ಎತ್ತಿನ ಭಾರಕ್ಕೆ ನೊಗವಾದ 'ರೋಲಿಂಗ್ ಸಪೋರ್ಟ್'.. ವಿದ್ಯಾರ್ಥಿಗಳಿಂದ 'ಸಾರಥಿ' ನಿರ್ಮಾಣ
ಹೃತಿಕ್ ಸಿಂಘಾಲ್ ಅವರು 17ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಮಾತನಾಡಿ, ನನ್ನ ಮುಂದಿನ ಗುರಿ ಯುಪಿಎಸ್‌ಸಿಯನ್ನು ಪಾಸ್ ಮಾಡುವುದಾಗಿದೆ ಎಂದರು. ಜೈಪುರದ ಇತರ ಇಬ್ಬರು ವಿದ್ಯಾರ್ಥಿಗಳಾದ ತನು ಜಿಂದಾಲ್ 34 ನೇ ರ‍್ಯಾಂಕ್ ಗಳಿಸಿದರೆ, ನಮನ್ ಸಂಗಿ 50 ನೇ ರ‍್ಯಾಂಕ್ ಪಡೆಯುವ ಮೂಲಕ ಟಾಪ್ 50 ರೊಳಗೆ ಸ್ಥಾನ ಪಡೆದಿದ್ದಾರೆ. CA 2022 ಅನ್ನು ಮೇ 14 ರಿಂದ ಮೇ 30, 2022 ರವರೆಗೆ ದೇಶದಾದ್ಯಂತ 192 ಜಿಲ್ಲೆಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.