ETV Bharat / bharat

ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ: ಸಿಬ್ಬಂದಿಗೆ ವರ್ಕ್​ ಫ್ರಮ್​ ಹೋಮ್​ ಜಾರಿ.. ಶಾಲೆಗಳು ಬಂದ್​

ಶೇ. 50ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವ ಆದೇಶವನ್ನು ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳು ಅನುಸರಿಸಬೇಕು ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ
ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ
author img

By

Published : Nov 4, 2022, 6:50 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆ ನವೆಂಬರ್​ 4 ರಿಂದ ಶೇ.50ರಷ್ಟು ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಪರಿಸರ ಸಚಿವ ಗೋಪಾಲ್ ರೈ ಈ ಆದೇಶವನ್ನು ಹೊರಡಿಸಿದ್ದು, ಇದನ್ನು ಅನುಸರಿಸಲು ಖಾಸಗಿ ಕಂಪನಿಗಳಿಗೆ ಸಲಹೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಹದಗೆಟ್ಟ ಗಾಳಿಯ ಗುಣಮಟ್ಟದಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ನವೆಂಬರ್ 5 ರಿಂದ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ಹಿರಿಯ ವಿದ್ಯಾರ್ಥಿಗಳ ಹೊರಾಂಗಣ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಶಾಲೆಗಳಿಗೆ ಸೂಚಿಸಲಾಗುವುದು ಎಂದು ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಪಾಕ್​​ ಕಾರಣವೆಂದ ಯುಪಿ ಸರ್ಕಾರ: ಅಲ್ಲಿ ನಾವು ಕೈಗಾರಿಕೆ ನಿಷೇಧಿಸಬೇಕಾ? ಎಂದು ಸುಪ್ರೀಂ ಗರಂ

ಬಿಎಸ್ VI ಅಲ್ಲದ ಡೀಸೆಲ್-ಚಾಲಿತ ಲಘು ಮೋಟಾರು ವಾಹನಗಳ ನಿಷೇಧ ಸೇರಿದಂತೆ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗವು ಶಿಫಾರಸು ಮಾಡಿದ ಮಾಲಿನ್ಯ ವಿರೋಧಿ ನಿರ್ಬಂಧಗಳನ್ನು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

ಸಂಬಂಧಿತ ಇಲಾಖೆಗಳೊಂದಿಗಿನ ಸಭೆಯಲ್ಲಿ, ಸೋಮವಾರದಿಂದ ಸರ್ಕಾರಿ ಕಚೇರಿಗಳ ಶೇ 50ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಲು ನಿರ್ಧರಿಸಲಾಗಿದೆ. ಅದನ್ನು ಅನುಸರಿಸಲು ಖಾಸಗಿ ಕಚೇರಿಗಳಿಗೆ ಸಲಹೆಯನ್ನು ನೀಡಲಾಗುವುದು ಎಂದು ರೈ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.