ನವದೆಹಲಿ: ಉತ್ತರ ಪ್ರದೇಶದ ರಾಜಧಾನಿ ಲಖನೌ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 24.38 ಲಕ್ಷ ರೂಪಾಯಿ ಮೌಲ್ಯದ 460 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಭಾನುವಾರ ದುಬೈನಿಂದ ಲಖನೌ ವಿಮಾನ ನಿಲ್ದಾಣಕ್ಕೆ ಒಬ್ಬ ಪ್ರಯಾಣಿಕ ಬಂದಿಳಿದ್ದ. ಆತ ಚಿನ್ನ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ತಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಅಲ್ಲದೇ, ಆತನ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಎರಡು ಟ್ರಾಲಿ ಬ್ಯಾಗ್‌ಗಳ ಒಳ ಕೆಳಗೆ ಕಪ್ಪು ಪಾಲಿಥಿನ್ ಮತ್ತು ಕಾರ್ಬನ್ ಪೇಪರ್ ಪದರಗಳ ನಡುವೆ ಚಿನ್ನದ ಹಾಳೆಗಳನ್ನು ಅಂಟಿಸಿರುವುದು ಪತ್ತೆಯಾಗಿದೆ. ಅಲ್ಲದೇ, ವಿಚಾರಣೆ ವೇಳೆ ತನ್ನನ್ನು ಕರೆದೊಯ್ಯಲು ಹೊರಗಡೆ ಮತ್ತೊಬ್ಬ ವ್ಯಕ್ತಿ ಕಾಯುತ್ತಿದ್ದಾನೆ. ಆತನಿಗೆ ಈ ಚಿನ್ನವನ್ನು ಹಸ್ತಾಂತರಿಸಬೇಕಾಗಿದೆ ಎಂದೂ ಆರೋಪಿ ಬಾಯ್ಬಿಟ್ಟಿದ್ದಾನೆ. ಅಂತೆಯೇ, ವಿಮಾನ ನಿಲ್ದಾಣದ ಹೊರಗೆ ಈತನಿಗಾಗಿ ಕಾಯುತ್ತಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಳು ಮತಾಂತರ: ಯತಿ ನರಸಿಂಗಾನಂದ್