ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಭೀತಿ ದಟ್ಟವಾದ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ. ಇಂದು ರಾತ್ರಿ ಉಕ್ರೇನ್ನಿಂದ ಭಾರತೀಯ ಪ್ರಜೆಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾರತಕ್ಕೆ ಹಾರಲಿದೆ.
ಉಕ್ರೇನ್ ತೊರೆಯಲು ಇಚ್ಚಿಸಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಟಾಟಾ ಒಡೆತನದ ಏರ್ ಇಂಡಿಯಾದ ಮೂರು ವಿಮಾನಗಳಲ್ಲಿ ಒಂದು ವಿಮಾನ ಇಂದು ರಾತ್ರಿಯೇ ನಾಗರಿಕರನ್ನು ಕರೆತರಲಿದೆ ಎಂದು ವಿಮಾನಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.
-
#FlyAI : Air India is operating 3 flights between India & Ukraine on 22nd, 24th & 26th FEB 2022 .
— Air India (@airindiain) February 19, 2022 " class="align-text-top noRightClick twitterSection" data="
Seats are available on these flights.
Booking open through Air India Booking offices, Website, Call Centre and Authorised Travel Agents.@IndiainUkraine pic.twitter.com/jKW5InGCOR
">#FlyAI : Air India is operating 3 flights between India & Ukraine on 22nd, 24th & 26th FEB 2022 .
— Air India (@airindiain) February 19, 2022
Seats are available on these flights.
Booking open through Air India Booking offices, Website, Call Centre and Authorised Travel Agents.@IndiainUkraine pic.twitter.com/jKW5InGCOR#FlyAI : Air India is operating 3 flights between India & Ukraine on 22nd, 24th & 26th FEB 2022 .
— Air India (@airindiain) February 19, 2022
Seats are available on these flights.
Booking open through Air India Booking offices, Website, Call Centre and Authorised Travel Agents.@IndiainUkraine pic.twitter.com/jKW5InGCOR
ಉಕ್ರೇನ್ನಿಂದ ಭಾರತಕ್ಕೆ ಮರಳಲು ಇಚ್ಚಿಸಿದ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಇವು ಫೆಬ್ರವರಿ 22, 24, 26 ರಂದು ಕಾರ್ಯಾಚರಣೆ ನಡೆಸಲಿವೆ.
ಇದಲ್ಲದೇ, ದೆಹಲಿಯಿಂದ ಬೋಯಿಂಗ್ ಡ್ರೀಮ್‌ಲೈನರ್ ಬಿ-787 ವಿಮಾನವು ಉಕ್ರೇನ್ಗೆ ಇಂದು ಹೊರಟಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ: ರಷ್ಯಾ-ಉಕ್ರೇನ್ ಸಂಯಮ ಕಾಪಾಡಿಕೊಳ್ಳಲು ಭಾರತ ಸಲಹೆ