ETV Bharat / bharat

ಏರ್​ ಇಂಡಿಯಾ ವಿಮಾನದ ಕಾಕ್​ಪಿಟ್​ನಲ್ಲಿ ಮಹಿಳೆ ಪ್ರಯಾಣದ ಆರೋಪ: ಡಿಜಿಸಿಎ ತನಿಖೆ ಆರಂಭ

author img

By

Published : Apr 21, 2023, 2:34 PM IST

ಏರ್ ಇಂಡಿಯಾ ಪೈಲಟ್ ಒಬ್ಬರು ತಮ್ಮ ಮಹಿಳಾ ಸ್ನೇಹಿತೆಯೊಬ್ಬರನ್ನು ಕಾಕ್​ಪಿಟ್​ನಲ್ಲಿ ಕೂರಿಸಿಕೊಂಡು ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಡಿಜಿಸಿಎ ಈ ಬಗ್ಗೆ ತನಿಖೆ ನಡೆಸಿದೆ.

Air India Pilot
Air India Pilot

ನವದೆಹಲಿ: ದುಬೈನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಡಿಜಿಸಿಎ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಸ್ನೇಹಿತೆಯೊಬ್ಬರಿಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಫೆಬ್ರವರಿ 27 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯ ಮಾಹಿತಿ ಹೊರಬಿದ್ದ ನಂತರ ಡಿಜಿಸಿಎ ಈ ಬಗ್ಗೆ ತನಿಖೆ ಆರಂಭಿಸಿದೆ.

  • A pilot of an Air India flight, operating from Dubai to Delhi, allowed a female friend in the cockpit, on February 27, violating DGCA safety norms. Probe being conducted: DGCA

    — ANI (@ANI) April 21, 2023 " class="align-text-top noRightClick twitterSection" data=" ">

ಡಿಜಿಸಿಎ ಹೇಳಿಕೆಯ ಪ್ರಕಾರ, ಫೆಬ್ರವರಿ 27 ರಂದು ದುಬೈನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಡಿಜಿಸಿಎ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಮಹಿಳಾ ಸ್ನೇಹಿತೆ ಕಾಕ್‌ಪಿಟ್​ಗೆ ಪ್ರವೇಶಿಸಲು ಅನುಮತಿ ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಡಿಜಿಸಿಎ ವಿಸ್ತೃತ ತನಿಖೆಗೆ ಆದೇಶಿಸಿದೆ. ತನಿಖಾ ತಂಡವು ಸಂಬಂಧಿತ ಸಂಗತಿಗಳನ್ನು ಪರಿಶೀಲಿಸುತ್ತದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೈಲಟ್​ ಈ ಪ್ರಮಾದ ಎಸಗಿದ್ದರೆ ಅದು ಡಿಜಿಸಿಎ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಕ್ಯಾಬಿನ್ ಸಿಬ್ಬಂದಿಯೊಬ್ಬರು ಈ ಘಟನೆಯ ಬಗ್ಗೆ ನಿಯಂತ್ರಕರಿಗೆ ದೂರು ನೀಡಿದ್ದಾರೆ. ಪೈಲಟ್​ ತನ್ನ ಮಹಿಳಾ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಕರೆತರುವಂತೆ ಸಿಬ್ಬಂದಿಗೆ ತಿಳಿಸಿದರು ಮತ್ತು ಅವಳಿಗಾಗಿ ಕೆಲ ದಿಂಬುಗಳನ್ನು ತಂದು ಕೊಡುವಂತೆ ಕೇಳಿದರು. ಮಹಿಳೆ ಮೊದಲ ವೀಕ್ಷಕ ಸೀಟಿನಲ್ಲಿ ಕುಳಿತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ಏಪ್ರಿಲ್ 18 ರಂದು ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ವಿಂಡ್ ಶೀಲ್ಡ್ ಬಿರುಕು ಬಿಟ್ಟ ಸಂಶಯದ ಆಧಾರದಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಅನುಮತಿ ಕೇಳಿತ್ತು. ಆದಾಗ್ಯೂ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.

ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಏರ್ ಇಂಡಿಯಾ ನಿರ್ಧಾರ: ಏರ್ ಇಂಡಿಯಾ ವಿಶ್ವಾದ್ಯಂತ ತನ್ನ ನೆಟ್‌ವರ್ಕ್‌ನಲ್ಲಿನ ಎಲ್ಲ ವಿಮಾನಗಳಲ್ಲಿ ಸುಮಾರು 80 ಪ್ರತಿಶತದಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಶುಕ್ರವಾರ ಈ ಬಗ್ಗೆ ಏರ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ಶನಿವಾರದಂದು ಜಗತ್ತಿನಾದ್ಯಂತ ಆಚರಿಸಲಾಗುವ ಭೂ ದಿನಕ್ಕೆ ಒಂದು ದಿನ ಮುಂಚಿತವಾಗಿ ಈ ಘೋಷಣೆ ಮಾಡಿರುವುದು ಗಮನಾರ್ಹ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕಾರ್ಯನಿರ್ವಹಿಸುವ ವೈಡ್‌ಬಾಡಿ ವಿಮಾನಗಳಲ್ಲಿನ ಎಲ್ಲಾ ಎಕಾನಮಿ ಕ್ಲಾಸ್ ಸೀಟ್ ಪಾಕೆಟ್‌ಗಳಿಂದ 500 ಎಂಎಲ್ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತಹ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ.

ಏರ್ ಇಂಡಿಯಾ ಇನ್ನೂ ಹಲವಾರು ಪರಿಸರ ಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಂಡಿದೆ. ಕಪ್​ಗಳಲ್ಲಿನ ಪ್ಲಾಸ್ಟಿಕ್ ಕಡ್ಡಿಗಳ ಬದಲಾಗಿ ಮರದ ಕಡ್ಡಿಗಳನ್ನು ನೀಡಲಾಗುತ್ತಿದೆ. ಮರುಬಳಕೆ ಮಾಡಬಹುದಾದ ಲಿನೆನ್​ ಬ್ಯಾಗ್​​ಗಳ ಉಪಯೋಗ, ಶೇಕಡಾ 100 ರಷ್ಟು ಮಿಶ್ರಗೊಬ್ಬರ PET ಮುಚ್ಚಳಗಳು ಮತ್ತು ಪ್ರಾಥಮಿಕ ಬಳಕೆಯ ಪ್ಲಾಸ್ಟಿಕ್ ಬ್ಯಾಗ್​ಗಳ ಉಪಯೋಗಗಳನ್ನು ಏರ್​ ಇಂಡಿಯಾ ಜಾರಿಗೆ ತಂದಿದೆ. ಎಕಾನಮಿ ಕ್ಲಾಸ್ ಪ್ರಯಾಣಿಕರಿಗಾಗಿ ಶೀಘ್ರದಲ್ಲೇ ಪೇಪರ್ ಕಟ್ಲರಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಏರ್‌ಲೈನ್ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ : ಚಾಟ್​ಜಿಪಿಟಿಗಿಂತ ಪ್ರಬಲ AI ತಯಾರಿಸಲಿದೆ ’ಗೂಗಲ್​ ಡೀಪ್​ ಮೈಂಡ್​’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.