ಕೊಚ್ಚಿ (ಕೇರಳ): ಮಂಗಳೂರಿನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗ ಬದಲಿಸಿ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಈ ವಿಚಾರವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (CIAL)ನ ನಿರ್ದೇಶಕ ಎಸಿಕೆ ನಾಯರ್ ದೃಢಪಡಿಸಿ, ಲ್ಯಾಂಡಿಂಗ್ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
-
Air India flight from Dubai to Mangalore was diverted and landed at the Cochin International Airport due to bad weather conditions in Mangalore: ACK Nair, Director of Cochin International Airport Limited (CIAL) pic.twitter.com/22zJ6OtcN0
— ANI (@ANI) April 13, 2021 " class="align-text-top noRightClick twitterSection" data="
">Air India flight from Dubai to Mangalore was diverted and landed at the Cochin International Airport due to bad weather conditions in Mangalore: ACK Nair, Director of Cochin International Airport Limited (CIAL) pic.twitter.com/22zJ6OtcN0
— ANI (@ANI) April 13, 2021Air India flight from Dubai to Mangalore was diverted and landed at the Cochin International Airport due to bad weather conditions in Mangalore: ACK Nair, Director of Cochin International Airport Limited (CIAL) pic.twitter.com/22zJ6OtcN0
— ANI (@ANI) April 13, 2021
ನಿನ್ನೆ ಕೂಡ ರಿಯಾದ್‌ನಿಂದ ಕೇರಳದ ಕೋಯಿಕ್ಕೋಡ್ಗೆ 180ನ ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್ ಆಗಿತ್ತು. ವಿಮಾನದ ಟೈರ್ನಲ್ಲಿ ದೋಷ ಕಂಡುಬಂದ ಹಿನ್ನೆಲೆ ಪೈಲಟ್ ಮಾರ್ಗ ಬದಲಿಸಿ ಕೊಚ್ಚಿಯಲ್ಲಿ ಇಳಿಸಿದ್ದರು. ಇಲ್ಲಿ ಲ್ಯಾಂಡ್ ಆದ ಸ್ವಲ್ಪ ಸಮಯದಲ್ಲೇ ಟೈರ್ ಸ್ಫೋಟಗೊಂಡಿತ್ತು. ಆದ್ರೆ ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿತ್ತು.