ETV Bharat / bharat

ವಾಯುಪಡೆ ಯೋಧ ಗುಂಡೇಟಿನಿಂದ ಸಾವು: ಕಾರಣ ನಿಗೂಢ

author img

By

Published : Oct 22, 2022, 5:31 PM IST

ಕಾನ್ಪುರದ ಭಾರತೀಯ ವಾಯುಪಡೆಯ ಯೋಧ ಶುಕ್ರವಾರ ನಾಸಿಕ್‌ನ ವಾಯುಪಡೆಯ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Air Force soldier dies by gunshot: Cause mysterious
ವಾಯುಪಡೆ ಯೋಧ ಗುಂಡೇಟಿನಿಂದ ಸಾವು: ಕಾರಣ ನಿಗೂಢ

ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದ ಭಾರತೀಯ ವಾಯುಪಡೆಯ ಯೋಧ ಶುಕ್ರವಾರ ನಾಸಿಕ್‌ನ ವಾಯುಪಡೆಯ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ವೀರೇಂದ್ರ ಪಾಲ್ ಎಂದು ಗುರುತಿಸಲಾಗಿದ್ದು, ಘಟಂಪುರ ಕೊತ್ವಾಲಿ ಪ್ರದೇಶದ ಫತೇಪುರ್ ಗ್ರಾಮದ ನಿವಾಸಿಯಾಗಿದ್ದಾರೆ.

ಮೃತ ಯೋಧನ ತಂದೆ ಶ್ರೀರಾಮ್ ಪಾಲ್ ಮಾತನಾಡಿ, ನನ್ನ 27 ವರ್ಷದ ಮಗ ವೀರೇಂದ್ರ ಪಾಲ್ ವಾಯುಪಡೆಯಲ್ಲಿ ಸೈನಿಕನಾಗಿದ್ದು, ಮಹಾರಾಷ್ಟ್ರದ ನಾಸಿಕ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿರುವ ತಾಂತ್ರಿಕ ಆರ್ಮರಿಯಲ್ಲಿ ನಿಯೋಜಿತನಾಗಿದ್ದನು. ಆತನ ಸಾವಿನ ಬಗ್ಗೆ ನನ್ನ ಹಿರಿಯ ಮಗ ರಾಜುಗೆ ಕರೆ ಬಂದಿತ್ತು. ನಂತರ ನಮ್ಮ ಕುಟುಂಬ ಸದಸ್ಯರು ಮುಂಬೈನಲ್ಲಿ ನೌಕಾಪಡೆಯಲ್ಲಿದ್ದ ನಮ್ಮ ಸಂಬಂಧಿಕರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದರು ಎಂದು ಹೇಳಿದರು.

ಸ್ಥಳಕ್ಕೆ ತಲುಪಿದ ನಂತರ, ಬುಲೆಟ್ ಗಾಯಗಳಿಂದ ವೀರೇಂದ್ರ ಸಾವನ್ನಪ್ಪಿದ್ದಾನೆ ಎಂದು ನಮಗೆ ತಿಳಿಸಲಾಯಿತು. ವಾಯುಪಡೆಯ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳು ವೀರೇಂದ್ರ ತನ್ನ ಕೋಣೆಯ ಹೊರಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಸ್ವಲ್ಪ ನಡಿಗೆಯ ನಂತರ ಅವನು ಕೋಣೆಯೊಳಗೆ ಹೋಗುತ್ತಾನೆ ಮತ್ತು ಗುಂಡಿನ ಶಬ್ದ ಕೇಳಿಸುತ್ತದೆ ಎಂದು ಅವರು ತಿಳಿಸಿದರು.

ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಘಟಂಪುರ ಠಾಣಾಧಿಕಾರಿ (ಎಸ್‌ಎಚ್‌ಒ) ರಾಮಬಾಬು ಸಿಂಗ್ ಹೇಳಿದರು.

ಇದನ್ನೂ ಓದಿ: 14ರ ಬಾಲಕಿಯ ಮೇರು ಸಾಧನೆ.. ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಬಾಲಕಿಗೆ ಗೌರವ ಡಾಕ್ಟರೇಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.