ETV Bharat / bharat

7 ಕ್ಷೇತ್ರ ಗೆದ್ದ ಎಐಎಂಐಎಂ: ಹೈದರಾಬಾದ್‌ ಓಲ್ಡ್ ಸಿಟಿಯಲ್ಲಿ ಮುಂದುವರೆದ ಓವೈಸಿ ಪಕ್ಷದ ಹಿಡಿತ - Old City of Hyderabad

AIMIM continues to hold sway in Old City of Hyderabad: ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಈ ಸಲವೂ ಕೂಡ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಾರ್ಟಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

AIMIM
ಎಐಎಂಐಎಂ
author img

By PTI

Published : Dec 4, 2023, 12:31 PM IST

ಹೈದರಾಬಾದ್(ತೆಲಂಗಾಣ): ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ತನ್ನ ಸಾಂಪ್ರದಾಯಿಕ ಭದ್ರಕೋಟೆಯಾದ ಹೈದರಾಬಾದ್‌ನ ಹಳೆಯ ನಗರದಲ್ಲಿ ಹಿಡಿತ ಮುಂದುವರೆಸಿದೆ. ಹಾಗೆಯೇ, ಕಳೆದ ಬಾರಿಯ ಚುನಾವಣೆಯಂತೆ ಈ ಬಾರಿ ಕೂಡ ಏಳು ಸ್ಥಾನಗಳನ್ನು ಉಳಿಸಿಕೊಂಡಿದೆ.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಂಬತ್ತು ಸ್ಥಾನಗಳ ಪೈಕಿ ಏಳರಲ್ಲಿ ಎಐಎಂಐಎಂ ಅಭ್ಯರ್ಥಿಗಳು ಗೆದ್ದಿದ್ದಾರೆ. ವಿಧಾನಸಭೆಯಲ್ಲಿ ಈ ಏಳು ಕ್ಷೇತ್ರಗಳನ್ನು ಹಿಡಿದಿಟ್ಟುಕೊಂಡಿರುವ ಪಕ್ಷವು, 2009ರಿಂದ ಇಷ್ಟೇ ಸ್ಥಾನಗಳಿಂದ ಗೆಲ್ಲುತ್ತಿದೆ. ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ಅವರು 81,660 ಮತಗಳ ಅಂತರದಿಂದ 1999 ರಿಂದ ಸತತ ಆರನೇ ಬಾರಿಗೆ ಚಂದ್ರಾಯನಗುಟ್ಟಾ ಕ್ಷೇತ್ರದಲ್ಲಿ ಪ್ರಬಲ ಗೆಲುವು ದಾಖಲಿಸಿದ್ದಾರೆ. ಅಕ್ಬರುದ್ದೀನ್ 99,776 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ 18,116 ಮತಗಳನ್ನು ಪಡೆದರು.

ಮಲಕ್‌ಪೇಟ್‌ನಲ್ಲಿ ಅಹ್ಮದ್ ಬಿನ್ ಅಬ್ದುಲ್ಲಾ ಬಲಾಲ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶೇಕ್ ಅಕ್ಬರ್ ವಿರುದ್ಧ 26,106 ಮತಗಳ ಬಹುಮತದೊಂದಿಗೆ ಸತತ ನಾಲ್ಕನೇ ಬಾರಿಗೆ ಜಯಗಳಿಸಿದರೆ, ಜಾಫರ್ ಹುಸೇನ್ ಯಾಕುತ್‌ಪುರದಿಂದ ಕೇವಲ 878 ಮತಗಳ ಅಂತರದಿಂದ ಮಜ್ಲಿಸ್ ಬಚಾವೋ ತಹ್ರೀಕ್ (UMBT) ನಾಯಕ ಅಮ್ಜೆದ್ ಖಾನ್ ವಿರುದ್ಧ ಗೆದ್ದಿದ್ದಾರೆ.

ಇಬ್ಬರು ಹೊಸ ಮುಖಗಳು: ಬಹದ್ದೂರ್‌ಪುರದಿಂದ ಬಿಆರ್‌ಎಸ್ ಅಭ್ಯರ್ಥಿ ವಿರುದ್ಧ 67,025 ಅಂತರದಲ್ಲಿ ಮೊಹಮ್ಮದ್ ಮುಬೀನ್ ಮತ್ತು ಚಾರ್ಮಿನಾರ್‌ನಿಂದ ಎಐಎಂಐಎಂ ಪಕ್ಷದ ಮೀರ್ ಜುಲ್ಫೆಕರ್ ಅಲಿ ಅವರು ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿಗಿಂತ 22,853 ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಸಿಎಂ ಕೆಸಿಆರ್, ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಗೆ ಸೋಲುಣಿಸಿದ ಬಿಜೆಪಿ ನಾಯಕ ಇವರೇ!

ನಾಂಪಲ್ಲಿಯಿಂದ ಮೊಹಮ್ಮದ್ ಮಜೀದ್ ಹುಸೇನ್ 2,037 ಮತಗಳ ಅಂತರದಿಂದ ಕಾಂಗ್ರೆಸ್‌ನ ಮೊಹಮ್ಮದ್ ಫಿರೋಜ್ ಖಾನ್ ಅವರನ್ನು ಸೋಲಿಸಿದರೆ, ಕರ್ವಾನ್ ವಿಧಾನಸಭಾ ಕ್ಷೇತ್ರದಲ್ಲಿ ಎಐಎಂಐಎಂನ ಕೌಸರ್ ಮೊಹಿಯುದ್ದೀನ್ ವಿಜಯಶಾಲಿಯಾಗಿ ಹೊರಹೊಮ್ಮಿದರು.

ಎಐಎಂಐಎಂ 119 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂಬತ್ತರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಆದರೆ ಬೇರೆಡೆ ಬಿಆರ್‌ಎಸ್‌ಗೆ ಬೆಂಬಲ ನೀಡಿತ್ತು. ರಾಜೇಂದ್ರನಗರ ಮತ್ತು ಜುಬಿಲಿ ಹಿಲ್ಸ್‌ನಲ್ಲಿ ಸೋತಿದೆ.

ಇದನ್ನೂ ಓದಿ: ಸನಾತನ ಧರ್ಮ ನಿಂದಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ: ವೆಂಕಟೇಶ್ ಪ್ರಸಾದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.