ETV Bharat / bharat

40 ಕಿ.ಮೀ ದೂರ, 29 ನಿಮಿಷ..: ಡ್ರೋನ್ ಮೂಲಕ ಔಷಧ ಸೇವೆ ಪ್ರಾರಂಭಿಸಿದ ಏಮ್ಸ್​!

ಉತ್ತರಾಖಂಡದ ರಿಷಿಕೇಶ್​ನಲ್ಲಿರುವ ಏಮ್ಸ್​ ಸಂಸ್ಥೆಯು ರೋಗಿಗಳಿಗೆ ಔಷಧ ಪೂರೈಸಲು ಡ್ರೋನ್​ ಸೇವೆ ಶುರು ಮಾಡಿದೆ.

aiims-rishikesh-delivered-medicines-by-drone-for-first-time
ಕೇವಲ 29 ನಿಮಿಷದಲ್ಲಿ 40 ಕಿಮೀ ಕ್ರಮಿಸಿ ಔಷಧಿ ಪೂರೈಸಿದ ಡ್ರೋನ್​: ನೂತನ ಸೇವೆ ಆರಂಭಿಸಿದ ಏಮ್ಸ್​!
author img

By

Published : Feb 16, 2023, 5:17 PM IST

Updated : Feb 16, 2023, 10:57 PM IST

ಡ್ರೋನ್ ಮೂಲಕ ಔಷಧ ಸೇವೆ ಪ್ರಾರಂಭಿಸಿದ ಏಮ್ಸ್​

ರಿಷಿಕೇಶ್​ (ಉತ್ತರಾಖಂಡ): ಗುಡ್ಡಗಾಡಿನ ದುರ್ಗಮ ಪ್ರದೇಶಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಔಷಧಿಗಳನ್ನು ತಲುಪಿಸಲು ಉತ್ತರಾಖಂಡ ರಾಜ್ಯದ ರಿಷಿಕೇಶ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​) ತಂತ್ರಜ್ಞಾನದ ನೂತನ ಮಾರ್ಗ ಕಂಡುಕೊಂಡಿದೆ. ಡ್ರೋನ್​ ಮೂಲಕ ರೋಗಿಗಳಿಗೆ ಔಷಧಿ ತಲುಪಿಸುವ ಯೋಜನೆಯನ್ನು ಗುರುವಾರದಿಂದ ಆರಂಭಿಸಲಾಗಿದೆ. ಮೊದಲ ದಿನವೇ ಸುಮಾರು 40 ಕಿಲೋ ಮೀಟರ್​ ದೂರವನ್ನು ಕೇವಲ 29 ನಿಮಿಷಗಳಲ್ಲಿ ಡ್ರೋನ್​ ಕ್ರಮಿಸಿ ಔಷಧ ಪೂರೈಸಿತು.

ಡ್ರೋನ್ ಸಹಾಯದಿಂದ ಪರ್ವತದ ಪ್ರದೇಶಗಳಿಗೆ ಔಷಧಿಗಳನ್ನು ತಲುಪಿಸುವ ಕಾರ್ಯಕ್ರಮಕ್ಕೆ ಇಂದು ಏಮ್ಸ್​ ನಿರ್ದೇಶಕ ಪ್ರೊ.ಮೀನು ಸಿಂಗ್ ಮತ್ತು ಡ್ರೋನ್ ಕಂಪನಿಯ ಅಧಿಕಾರಿ ಗೌರವ್ ಕುಮಾರ್ ಉದ್ಘಾಟಿಸಿದರು. ಸುಮಾರು ಮೂರು ಕೆಜಿ ತೂಕದ ಔಷಧಿಗಳ ಪ್ಯಾಕೆಟ್ ​ಅನ್ನು ಡ್ರೋನ್‌ನಲ್ಲಿ ನ್ಯೂ ತೆಹ್ರಿ ಪ್ರದೇಶಕ್ಕೆ ರವಾನಿಸಲಾಯಿತು. ಈ ಮೂಲಕ ಡ್ರೋನ್​ನಿಂದ ಔಷಧಿ ರವಾನಿಸಿದ ದೇಶದ ಮೊದಲ ಏಮ್ಸ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಡ್ರೋನ್​ ಬಳಸಿದ ದೇಶದ ಮೊದಲ ಏಮ್ಸ್: ಗುಡ್ಡಗಾಡಿನ ನಿವಾಸಿಗಳಿಗೆ ವೈದ್ಯಕೀಯ ಸೌಲಭ್ಯ ತಲುಪಿಸಲು ಏಮ್ಸ್​ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಡ್ರೋನ್ ಮೂಲಕ ಔಷಧಗಳನ್ನು ತಲುಪಿಸುವ ಸೇವೆ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ದೇಶದ ಯಾವುದೇ ಏಮ್ಸ್​ ಸಂಸ್ಥೆಯಲ್ಲಿ ಅಂತಹ ಸೌಲಭ್ಯ ಲಭ್ಯವಿಲ್ಲ. ಔಷಧಿ ಪೂರೈಕೆಗೆ ಡ್ರೋನ್​ ಬಳಕೆ ಮಾಡಿದ ದೇಶದ ಮೊದಲ ಏಮ್ಸ್ ಆಗಿದೆ ಎಂದು ಮೀನು ಸಿಂಗ್ ತಿಳಿಸಿದರು.

ಈಗಾಗಲೇ ರಸ್ತೆ ಮಾರ್ಗವನ್ನು ಬಳಸಿ ಔಷಧಿಗಳು ಮತ್ತು ಇತರ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ, ದುರ್ಗಮ ರಸ್ತೆಗಳಿಂದ ಅನೇಕ ಪ್ರದೇಶಗಳಿಗೆ ತಲುವುದು ಕಷ್ಟ ಸಾಧ್ಯ. ಅಲ್ಲದೇ, ಕೆಲವೊಮ್ಮೆ ರಸ್ತೆಯ ಮೂಲಕ ಔಷಧಿಗಳನ್ನು ತಲುಪಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಡ್ರೋನ್‌ಗಳ ಮೂಲಕ ಔಷಧಿಗಳನ್ನು ಕಲುಪಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಡ್ರೋನ್​ ಬಳಕೆಯಿಂದ ಸಮಯ ಉಳಿತಾಯವಾಗಲಿದೆ. ರೋಗಿಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳ ತಲುಪಿಸಲು ಕೂಡ ಇದರಿಂದ ಸಾಧ್ಯ. ಆದ್ದರಿಂದ ಮೊದಲ ಪ್ರಾಯೋಗಿಕ ಡ್ರೋನ್​ ಅನ್ನು ಪರ್ವತದ ವಿವಿಧ ಪ್ರದೇಶಗಳಿಗೆ ಕಳುಹಿಸುವ ಕಾರ್ಯಾಚರಣೆ ನಡೆಸಲಾಗಿತ್ತು. ಈ ಪ್ರಯೋಗ ಯಶಸ್ವಿಯಾದ ಕಾರಣ ಗುರುವಾರ ಮೊದಲ ಬಾರಿಗೆ ನ್ಯೂ ತೆಹ್ರಿ ಪ್ರದೇಶಕ್ಕೆ ಡ್ರೋನ್‌ ಮೂಲಕ ಔಷಧಗಳನ್ನು ರವಾನಿಸಲಾಯಿತು. ಇದೇ ರೀತಿಯಾಗಿ ರಾಜ್ಯದ ಯಾವುದೇ ಮೂಲೆಗೂ ಔಷಧಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

80 ಕಿ.ಮೀ ದೂರ ಹಾರುವ ಸಾಮರ್ಥ್ಯ: ರಿಷಿಕೇಶ್​ನ ಏಮ್ಸ್​ ಆವರಣದಿಂದ ನ್ಯೂ ತೆಹ್ರಿ ಪ್ರದೇಶಕ್ಕೆ ಇಂದು ಡ್ರೋನ್​ ಹಾರಾಟ ನಡೆದಿದೆ. ಈ ಡ್ರೋನ್​ ಒಂದು ಬಾರಿಗೆ 80 ಕಿಲೋ ಮೀಟರ್‌ಗಳವರೆಗೆ ಹಾರಾಟ ನಡೆಸಬಲ್ಲದು. ಸದ್ಯ ಗುಡ್ಡಗಾಡು ಪ್ರದೇಶಗಳಲ್ಲಿ ಗರಿಷ್ಠ 42 ಕಿ.ಮೀ ದೂರವನ್ನು ಹಾರುವ ಡ್ರೋನ್ ಮೂಲಕ ನ್ಯೂ ತೆಹ್ರಿ ಪ್ರದೇಶಕ್ಕೆ ತಲುಪಿದೆ ಎಂದು ಡ್ರೋನ್ ತಾಂತ್ರಿಕ ತಂಡದ ಸದಸ್ಯ ಗೌರವ್ ಕುಮಾರ್ ಹೇಳಿದರು.

ರಿಷಿಕೇಶದಿಂದ ಔಷಧಗಳೊಂದಿಗೆ ನ್ಯೂ ತೆಹ್ರಿಗೆ ಹೊರಟ ಡ್ರೋನ್​ ಕೇವಲ 29 ನಿಮಿಷಗಳಲ್ಲಿ ಅಲ್ಲಿಗೆ ತಲುಪಿತು. 2000 ಮೀಟರ್ ಎತ್ತರದಲ್ಲಿ ಇದು ಹಾರಾಟ ಮಾಡಿದೆ. ಇಲ್ಲಿಂದ ವೈಮಾನಿಕ ಅಂತರವು ಅಂದಾಜು 44 ಕಿಮೀ ಆಗುತ್ತದೆ. ಅದೇ ರಸ್ತೆ ಮೂಲಕ ಹೋದರೆ 75 ಕಿ.ಮೀ ದೂರ ಕ್ರಮಿಸಬೇಕಾಗುತ್ತದೆ. ಡ್ರೋನ್​ ಬಳಕೆಯಿಂದ ಬೇಗನೇ ತಲುಪಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮೆಟ್ರೋ ಹಳಿ ಮೇಲೆ ಬಿದ್ದ ವೈದ್ಯಕೀಯ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಡ್ರೋನ್

Last Updated : Feb 16, 2023, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.