ETV Bharat / bharat

ಅಧ್ಯಕ್ಷ ಪುಟಿನ್ ಭೇಟಿಗೂ ಮುನ್ನ ಭಾರತಕ್ಕೆ ಆಗಮಿಸಲಿರುವ ರಷ್ಯಾ ವಿದೇಶಾಂಗ ಸಚಿವ

author img

By

Published : Dec 4, 2021, 4:34 PM IST

ಡಿಸೆಂಬರ್​ 6 ರಂದು ರಷ್ಯಾ ಹಾಗೂ ಭಾರತದ ನಡುವೆ 2+2 ಸಂವಾದ ನಡೆಯಲಿದ್ದು, ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ನಾಳೆ ಭಾರತಕ್ಕೆ ಬರಲಿದ್ದಾರೆ.

Russian foreign minister Sergey Lavrov
ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್

ನವದೆಹಲಿ: ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡುವ ಮುನ್ನವೇ ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಆಗಮಿಸುತ್ತಿದ್ದಾರೆ. ಡಿಸೆಂಬರ್​ 6 ರಂದು ನಡೆಯುವ 2+2 ಸಂವಾದಲ್ಲಿ ಪಾಲ್ಗೊಳ್ಳಲು ಸೆರ್ಗೆ ಲಾವ್ರೊವ್ ನಾಳೆ ದೆಹಲಿಗೆ ಬಂದಿಳಿಯಲಿದ್ದಾರೆ.

ಡಿಸೆಂಬರ್​ 6 ರಂದೇ ರಷ್ಯಾ ಹಾಗೂ ಭಾರತದ ನಡುವೆ 21ನೇ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ಅಧ್ಯಕ್ಷ ಪುಟಿನ್, ಸೋಮವಾರ ಭಾರತಕ್ಕೆ ಬರಲಿದ್ದಾರೆ. 2+2 ಸಂವಾದಲ್ಲಿ ಸೆರ್ಗೆಯ್ ಲಾವ್ರೊವ್ ಮತ್ತು ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ರಷ್ಯಾವನ್ನು ಪ್ರತಿನಿಧಿಸಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: ಡಿ.6 ರಂದು ಭಾರತ ಮತ್ತು ರಷ್ಯಾ ನಡುವೆ 2+2 ಸಂವಾದ

ಸಂವಾದದ ಕಾರ್ಯಸೂಚಿಯು ಪರಸ್ಪರ ರಾಜಕೀಯ ಹಿತಾಸಕ್ತಿ ಮತ್ತು ರಕ್ಷಣಾ ವಿಷಯಗಳನ್ನು ಒಳಗೊಂಡಿರುತ್ತದೆ. ಇದು ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಇನ್ನು ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಪುಟಿನ್​ ಮಾತುಕತೆ ನಡೆಸಲಿದ್ದಾರೆ. 2019ರ ನವೆಂಬರ್​ನಲ್ಲಿ ಬ್ರಿಕ್ಸ್ (BRICS) ಸಮ್ಮೇಳನ ನಡೆದ ಬಳಿಕ ಪುಟಿನ್- ಮೋದಿ ನಡುವೆ ಇದು ಮೊದಲ ಭೇಟಿಯಾಗಲಿದೆ. 2018ರಲ್ಲಿ ನಡೆದ ವಾರ್ಷಿಕ ಶೃಂಗಸಭೆಯಲ್ಲಿ ಭಾರತ-ರಷ್ಯಾ ನಡುವೆ S400 ಸಿಸ್ಟಮ್‌ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.