ETV Bharat / bharat

ಡಿಎಚ್‌ಎಫ್‌ಎಲ್ ಹಗರಣ: ಆರೋಪಿ ಮನೆಯಲ್ಲಿದ್ದ "ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್" ವಶ - ದೇಶದ ಅತಿದೊಡ್ಡ ಹಗರಣ

ದೇಶದ ಅತಿದೊಡ್ಡ ಬ್ಯಾಂಕ್​ ವಂಚನೆ ಪ್ರಕರಣವಾದ ಡಿಎಚ್‌ಎಫ್‌ಎಲ್ ಹಗರಣದ ಪ್ರಮುಖ ಆರೋಪಿಯಾದ ಬಿಲ್ಡರ್​ ಅವಿನಾಶ್ ಭೋಸ್ಲೆ ಅವರ ಮನೆಯಿಂದ ಅಗಸ್ಟಾ ವೆಸ್ಟ್​ಲ್ಯಾಂಡ್​ ಹೆಲಿಕಾಪ್ಟರ್​ ಅನ್ನು ಸಿಬಿಐ ವಶಕ್ಕೆ ಪಡೆದಿದೆ.

agustawestland-chopper-seized
ಡಿಎಚ್‌ಎಫ್‌ಎಲ್ ಹಗರಣ
author img

By

Published : Jul 31, 2022, 10:40 AM IST

ಪುಣೆ: ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆಯಾದ ಡಿಎಚ್‌ಎಫ್‌ಎಲ್ ಹಗರಣದ ಪ್ರಮುಖ ಆರೋಪಿಯಾದ ಪುಣೆಯ ಬಿಲ್ಡರ್ ಅವಿನಾಶ್ ಭೋಸಲೆ ಅವರ ಮನೆಯಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಅನ್ನು ಸಿಬಿಐ ವಶಪಡಿಸಿಕೊಂಡಿದೆ. ಹಗರಣಕ್ಕೆ ಸಂಬಂಧಿಸಿದಂತೆ ಆದಾಯದಿಂದ ಬರುವ ಆಸ್ತಿಯನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆ ಕಳೆದ ಕೆಲವು ದಿನಗಳಿಂದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪುಣೆ ಮನೆಯಲ್ಲಿ ಹೆಲಿಕಾಪ್ಟರ್​ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಿಬಿಐ ಜೂನ್ 20 ರಂದು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್​​ನ ಮಾಜಿ ಸಿಎಂಡಿ ಕಪಿಲ್ ವಾಧವನ್, ನಿರ್ದೇಶಕ ದೀಪಕ್ ವಾಧವನ್ ಮತ್ತು ಇತರರನ್ನು 34,615 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿದೆ. ಇದು ದೇಶದ ಅತಿದೊಡ್ಡ ವಂಚನೆ ಪ್ರಕರಣ ಎಂದೇ ಹೇಳಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ಡಿಎಚ್‌ಎಫ್‌ಎಲ್‌ನ ನಕಲಿ ಖಾತೆ ಪುಸ್ತಕಗಳನ್ನು ಬಳಸಿ 34,615 ಕೋಟಿ ರೂಪಾಯಿ ಬ್ಯಾಂಕ್ ಸಾಲವಾಗಿ ಪಡೆದು ವಂಚಿಸಲಾಗಿದೆ.

ಇದನ್ನೂ ಓದಿ: ರಿಷಿ ಸುನಕ್‌ಗೆ ಯುಕೆ ಪ್ರಧಾನಿ ಪಟ್ಟ ಡೌಟು! ಹೊಸ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.