ನವದೆಹಲಿ: ಸಶಸ್ತ್ರ ಪಡೆಗಳಿಗೆ ಸಿಬ್ಬಂದಿ ನೇಮಕಾತಿ ಮಾಡುವ ಅಗ್ನಿಪಥ್ ಯೋಜನೆಯ ಬಗ್ಗೆ ದೇಶದ ಹಲವೆಡೆ ಅಪಸ್ವರ, ಅಪಪ್ರಚಾರ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಯೋಜನೆಯ ಬಗ್ಗೆ ಸತ್ಯಾಸತ್ಯತೆಯ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಅಗ್ನಿಪಥ್ ಯೋಜನೆಯಿಂದ ಯುವಕರಿಗೆ ಅವಕಾಶಗಳು ಕಡಿಮೆಯಾಗಲಿವೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ವಾಸ್ತವದಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಯುವಕರಿಗೆ ಅವಕಾಶಗಳು ಸಾಕಷ್ಟು ಹೆಚ್ಚಾಗಲಿವೆ ಎಂದು ಸರ್ಕಾರ ತಿಳಿಸಿದೆ.
"ಸದ್ಯ ರಕ್ಷಣಾ ಪಡೆಗಳಿಗೆ ನಡೆಯುತ್ತಿರುವ ಅಗ್ನಿವೀರ್ಗಳ ನೇಮಕಾತಿಯ ಮೂರು ಪಟ್ಟು ನೇಮಕಾತಿ ಬರುವ ವರ್ಷಗಳಲ್ಲಿ ನಡೆಯಲಿದೆ." ಎಂದು ಸರ್ಕಾರ ಹೇಳಿಕೊಂಡಿದೆ.
-
Don’t fall prey to rumours regarding the Agnipath Scheme! Stay informed, stay safe. #MyGovMythBusters #BharatKeAgniveer pic.twitter.com/D1AbkSAWlm
— MyGovIndia (@mygovindia) June 16, 2022 " class="align-text-top noRightClick twitterSection" data="
">Don’t fall prey to rumours regarding the Agnipath Scheme! Stay informed, stay safe. #MyGovMythBusters #BharatKeAgniveer pic.twitter.com/D1AbkSAWlm
— MyGovIndia (@mygovindia) June 16, 2022Don’t fall prey to rumours regarding the Agnipath Scheme! Stay informed, stay safe. #MyGovMythBusters #BharatKeAgniveer pic.twitter.com/D1AbkSAWlm
— MyGovIndia (@mygovindia) June 16, 2022
ಅಗ್ನಿವೀರರು ಅಭದ್ರ ಭವಿಷ್ಯವನ್ನು ಹೊಂದಲಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಉದ್ಯಮ ಆರಂಭಿಸಬಯಸುವವರಿಗೆ ಹಣಕಾಸು ಸಹಾಯ ಹಾಗೂ ಬ್ಯಾಂಕ್ ಸಾಲ ಸಿಗಲಿದೆ. ಅಲ್ಲದೆ ಮುಂದೆ ಕಲಿಯ ಬಯಸಿದರೆ 12ನೇ ತರಗತಿಯ ಸಮಾನವಾದ ಶೈಕ್ಷಣಿಕ ಸರ್ಟಿಫಿಕೇಟ್ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಅಗ್ನಿವೀರ್ ನೇಮಕಾತಿ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಪ್ರಮುಖ ಸ್ಪಷ್ಟನೆಗಳು ಹೀಗಿವೆ:
- ಅಗ್ನಿವೀರ್ ನಂತರ ಕೆಲಸ ಹುಡುಕುವವರಿಗೆ ಕೇಂದ್ರೀಯ ರಕ್ಷಣಾ ಪಡೆ ಹಾಗೂ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಪ್ರಾಮುಖ್ಯತೆ.
- ರೆಜಿಮೆಂಟಲ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.
- ವಿಶ್ವದ ಹಲವಾರು ದೇಶಗಳಲ್ಲಿ ಇಂಥ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಸಶಸ್ತ್ರ ಪಡೆಗಳ ಬಲ ಹೆಚ್ಚಾಗುತ್ತದೆ.
- 4 ವರ್ಷಗಳ ನಂತರ ಅಗ್ನಿವೀರ್ ರನ್ನು ಮಿಲಿಟರಿಗೆ ಮರು ನೇಮಕ ಮಾಡಿಕೊಳ್ಳುವಾಗ ಅವರನ್ನು ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ರಕ್ಷಣಾ ಪಡೆಗಳಿಗೆ ನುರಿತ ಅಧಿಕಾರಿಗಳು ಸಿಗುತ್ತಾರೆ.
- ಅಗ್ನಿವೀರ್ಗಳು ಸಮಾಜ ಕಂಟಕರಾಗಬಹುದು ಎಂಬುದು ನಿರಾಧಾರ. ಇಂಥ ಆರೋಪ ಮಾಡುವುದು ಸಶಸ್ತ್ರ ಪಡೆಗಳಿಗೆ ಅಪಮಾನ ಮಾಡಿದಂತೆ.
- ಕಳೆದ ಎರಡು ವರ್ಷಗಳಿಂದ ರಕ್ಷಣಾ ಪಡೆಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗ್ನಿಪಥ್ ಯೋಜನೆ ರೂಪಿಸಲಾಗಿದೆ.
ಮಿಲಿಟರಿ ಸೇವಾಕಾಂಕ್ಷಿಗಳ ಆತಂಕವೇನು?:
- ಅಗ್ನಿಪಥ್ ಯೋಜನೆಯು 4 ವರ್ಷ ಅವಧಿಯದ್ದಾಗಿದ್ದು ಹಾಗೂ ಅಲ್ಪಾವಧಿಯ ಸೇವೆಯ ನಂತರ ಪಿಂಚಣಿ ಇಲ್ಲದಿರುವುದು. 17.5 ರಿಂದ 21 ವರ್ಷ ವಯೋಮಿತಿಯ ಕಾರಣದಿಂದ ಬಹಳಷ್ಟು ಮಿಲಿಟರಿ ಸೇವಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಲಿದ್ದಾರೆ.