ETV Bharat / bharat

ಘಜ್ನಿ ವಶಪಡಿಸಿಕೊಂಡ ತಾಲಿಬಾನ್​ಗೆ ಕಾಬೂಲ್ ಹೆಚ್ಚೇನೂ ದೂರವಿಲ್ಲ! - ಅಶ್ರಫ್ ಘನಿ

ಇಸ್ಲಾಮಾಬಾದ್ ತಾಲಿಬಾನ್‌ಗಳ ಮುಖವಾಣಿಯಾಗಿ ಮಾರ್ಪಟ್ಟಿದೆ. ಅಶ್ರಫ್ ಘನಿ ದೇಶದ ಅಧ್ಯಕ್ಷರಾಗಿ ಇರುವವರೆಗೂ ಭಯೋತ್ಪಾದಕ ಗುಂಪು ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಮಾತನಾಡುವುದಿಲ್ಲ ಎಂಬ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಖಾನ್ ಅವರ ನಿಲುವು ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

After the fall of Ghazni, Kabul is not too far for Taliban
ಘಜ್ನಿ ವಶಪಡಿಸಿಕೊಂಡ ತಾಲಿಬಾನ್​ಗೆ ಕಾಬೂಲ್ ಹೆಚ್ಚೇನೂ ದೂರವಿಲ್ಲ!
author img

By

Published : Aug 12, 2021, 7:28 PM IST

ಹೈದರಾಬಾದ್: ಅಫ್ಘಾನಿಸ್ತಾನದ ಹತ್ತು ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಅಫ್ಘಾನ್ ಸರ್ಕಾರವು ತಾಲಿಬಾನ್​ ಜೊತೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ. ತಾಲಿಬಾನ್ ಅಫ್ಘಾನಿಸ್ತಾನದ ಪ್ರಾಂತ್ಯಗಳು ಮತ್ತು ನಗರಗಳನ್ನು ನಿರ್ದಯವಾಗಿ ತನ್ನ ಕಿಸೆಗೆ ಸೇರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಸರ್ಕಾರದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಭಯೋತ್ಪಾದಕ ಗುಂಪು ಜನರನ್ನು ಲೂಟಿ ಮಾಡುತ್ತಿದೆ ಮತ್ತು ನಾಗರಿಕರನ್ನು ಕೊಲ್ಲುತ್ತಿವೆ. ದೇಶದಲ್ಲಿ ಹಿಂಸೆಯ ಪ್ರಮಾಣವು ತಾಲಿಬಾನ್​ನಿಂದ ಹೆಚ್ಚಾಗುತ್ತಿದೆ. ತಾಲಿಬಾನ್ ಪಡೆಗಳು ಈಗಾಗಲೇ ಸರ್-ಇ-ಪೋಲ್, ಶೆಬರ್ಘನ್, ಅಯ್ಬಾಕ್, ಕುಂಡುಜ್, ತಲುಕಾನ್, ಪುಲ್-ಇ-ಕುಮ್ರಿ, ಫರಾಹ್, ಜರಂಜ್, ಫೈಜಾಬಾದ್ ಮತ್ತು ಇತ್ತೀಚೆಗೆ ಘಜ್ನಿಯನ್ನೂ ವಶಪಡಿಸಿಕೊಂಡಿವೆ.

ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ತೀವ್ರ ಮತ್ತು ದೊಡ್ಡ ಪ್ರಮಾಣದ ಹೋರಾಟದ ನಡುವೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಾಂಬ್​ವೊಂದನ್ನು ಸಿಡಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡಿದ ಖಾನ್, ಅಶ್ರಫ್ ಘನಿ ದೇಶದ ಅಧ್ಯಕ್ಷರಾಗಿರುವವರೆಗೂ ಭಯೋತ್ಪಾದಕ ಗುಂಪು ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಮಾತನಾಡುವುದಿಲ್ಲ ಎಂದು ಎಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯ ಇತ್ಯರ್ಥವು ಕಷ್ಟಕರವಾಗಿದೆ. ನಾನು ತಾಲಿಬಾನ್‌ಗಳನ್ನು ಮನವೊಲಿಸಲು ಪ್ರಯತ್ನಿಸಿದೆ, ಮೂರ್ನಾಲ್ಕು ತಿಂಗಳ ಹಿಂದೆ ಅವರು ಇಲ್ಲಿಗೆ ಬಂದಿದ್ದರು. ಅಶ್ರಫ್ ಘನಿ ಇರುವವರೆಗೂ ನಾವು (ತಾಲಿಬಾನ್) ಸರ್ಕಾರದ ಜೊತೆ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಖಾನ್ ತಿಳಿಸಿದ್ದಾರೆ.

ಬಗ್ರಾಮ್ ವಾಯುನೆಲೆಯ ಪ್ರಮುಖ ವಾಯುನೆಲೆಯಿಂದ ಯುಎಸ್ ತನ್ನ ಕೊನೆ ಸೈನ್ಯವನ್ನು ಹೊರ ತೆಗೆದುಕೊಂಡ ನಂತರ ತಾಲಿಬಾನ್ ಪಡೆಗಳು ಬಲವಂತವಾಗಿ ಇಲ್ಲಿಗೆ ದಾಪುಗಾಲು ಇಟ್ಟವು. ಹಾಗೆ ಸರ್ಕಾರಿ ಪಡೆಗಳ ಮೇಲೆ ದಾಳಿ ಆರಂಭಿಸಿದವು.

ಕಳೆದ ವರ್ಷ ಫೆಬ್ರವರಿಯಲ್ಲಿ ವಾಷಿಂಗ್ಟನ್ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುಎಸ್ ಪಡೆಗಳು ಅಫ್ಘಾನಿಸ್ತಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಿಂತೆಗೆದುಕೊಳ್ಳಲು ಆರಂಭಿಸಿವೆ. ಇದನ್ನೇ ಕಾಯುತ್ತಿದ್ದ ತಾಲಿಬಾನ್ ತಕ್ಷಣ ಆಫ್ಘನ್​​ ಪಡೆಗಳ ವಿರುದ್ಧ ತನ್ನ ಆಕ್ರಮಣ ಹೆಚ್ಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.