ಥಾಣೆ(ಮಹಾರಾಷ್ಟ್ರ): 2018 ರಲ್ಲಿ ಅಪಘಾತವೊಂದಲ್ಲಿ ಮಗನನ್ನು ಕಳೆದುಕೊಂಡಿದ್ದ ಪೋಷಕರು, ತಮಗೆ ದೊರೆತ ಪರಿಹಾರದ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲು ನಿರ್ಧರಿಸಿದ್ದಾರೆ.
2018ರಲ್ಲಿ ಮುಂಬೈನ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬಂದ ಕಂಟೇನರ್ ಗುದ್ದಿದ ಪರಿಣಾಮ 21 ವರ್ಷದ ಯುವಕ ಮೃತಪಟ್ಟಿದ್ದ. ಈ ಹಿನ್ನೆಲೆ ಆತನ ಪೋಷಕರು ಥಾಣೆ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ (MACT)ಗೆ ಅರ್ಜಿ ಸಲ್ಲಿಸಿ, 50 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು.
MACT ಸದಸ್ಯ ಮತ್ತು ಜಿಲ್ಲಾ ನ್ಯಾಯಾಧೀಶರಾದ ಆರ್.ಎನ್. ರೋಕಡೆ ಅವರ ಮಧ್ಯಸ್ಥಿಕೆಯ ನಂತರ, ಕಾರು ಮಾಲೀಕ 27.30 ಲಕ್ಷ ರೂಪಾಯಿ ಪರಿಹಾರ ಕೊಟ್ಟರು. ಮ್ಯಾಕ್ಟ್ ಸಂಪರ್ಕಿಸುವ ಮುನ್ನ ವಕೀಲ ಪ್ರದೀಪ್ ಟಿಲ್ಲು ಎಂಬುವರು ಈ ಪ್ರಕರಣವನ್ನು ನಡೆಸುತ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಂಪತಿ, ನಮಗೆ ನಮ್ಮ ಮಗನನ್ನು ಕಳೆದುಕೊಂಡಿದ್ದಕ್ಕೆ ದುಃಖವಿದೆ. ಆದರೆ, ಅವನ ಸಾವಿನ ಪರಿಹಾರವಾಗಿ ಬಂದ ಹಣವನ್ನು ಈ ಸಮಾಜಕ್ಕೆ ಮರಳಿ ಕೊಡುತ್ತೇವೆ. ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡಲು ಟ್ರಸ್ಟ್ ಸ್ಥಾಪಿಸಿದ್ದೇವೆ ಎಂದಿದ್ದಾರೆ.
ಈ ಹಿಂದೆ ಮಗ ಮೃತಪಟ್ಟಾಗ ಅವನ ಎರಡೂ ಕಣ್ಣುಗಳನ್ನು ದಾನ ಮಾಡಿದ್ದರು. ಏತನ್ಮಧ್ಯೆ, MACT ಸದಸ್ಯ ರೊಕಾಡೆ ಅವರು ಶನಿವಾರ ಇಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 180 ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ಇದನ್ನೂ ಓದಿ: RSS ಗೆ ಟಕ್ಕರ್ ಕೊಡಲು ಮುಂದಾದ ಕಾಂಗ್ರೆಸ್ .. ದೇಶಾದ್ಯಂತ Jawahar Bal Manch ಸ್ಥಾಪನೆ