ETV Bharat / bharat

ಛತ್ತೀಸ್‌ಗಢದಲ್ಲಿ ರಾಜಕೀಯ ದಿಢೀರ್‌ ಬೆಳವಣಿಗೆ; ಕಾಂಗ್ರೆಸ್‌ನ 15 ಶಾಸಕರು ದೆಹಲಿಗೆ ದೌಡು - ಶಾಸಕ ಬೃಹಸ್ಪತಿ ಸಿಂಗ್

ಛತ್ತೀಸ್‌ಗಢ ಕಾಂಗ್ರೆಸ್‌ನ 15 ಶಾಸಕರು ದೆಹಲಿಗೆ ಭೇಟಿ ನೀಡಿದ್ದು, ಇಲ್ಲೂ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಈ ಶಾಸಕರು ಹೈಕಮಾಂಡ್‌ಗೆ ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಹೋಗಿರುವುದು ಎಂದು ಎನ್ನಲಾಗಿದೆ.

After Punjab there was again political uproar in Chhattisgarh Congress 15 MLAs left for Delhi
ಛತ್ತೀಸ್‌ಗಢದಲ್ಲಿ ರಾಜಕೀಯ ದಿಢೀರ್‌ ಬೆಳವಣಿಗೆ; ಕಾಂಗ್ರೆಸ್‌ನ 14 ಶಾಸಕರು ದೆಹಲಿಗೆ ದೌಡು
author img

By

Published : Sep 30, 2021, 1:02 AM IST

ರಾಯ್‌ಪುರ: ಪಂಜಾಬ್‌ ಬಳಿಕ ಛತ್ತೀಸ್‌ಗಢದಲ್ಲೂ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿದ್ದು, ಕಾಂಗ್ರೆಸ್‌ನ 15 ಶಾಸಕರು ದೆಹಲಿಗೆ ಭೇಟಿ ನೀಡಿರುವುದು ಭಾರಿ ಕುತೂಹಲ ಮೂಡಿಸಿದೆ. ದೆಹಲಿ ತಲುಪಿದ ನಂತರ ಎಲ್ಲಾ ಶಾಸಕರು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ.ಎಸ್‌. ಸಿಂಗ್‌ ಡಿಯೊ, ಶಾಸಕರ ಈ ಪ್ರವಾಸ ಸಾಮಾನ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ಹೇಳಲು ಹೋಗಿದ್ದಾರೆ ಎಂದಿದ್ದಾರೆ.

ಮತ್ತೊಂದೆಡೆ ಶಾಸಕ ಬೃಹಸ್ಪತಿ ಸಿಂಗ್, ರಾಜ್ಯ ಉಸ್ತುವಾರಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇವೆ. ಸಿಎಂ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಪಕ್ಷದ ಹೈಕಮಾಂಡ್, ಎಲ್ಲಾ ಶಾಸಕರು ಮತ್ತು ಛತ್ತೀಸ್‌ಗಢ ಜನರು ಸಿಎಂ ಭೂಪೇಶ್ ಬಘೇಲ್ ಅವರ ಕಾರ್ಯವೈಖರಿಯಿಂದ ತೃಪ್ತರಾಗಿದ್ದಾರೆ. ಒಬ್ಬ ವ್ಯಕ್ತಿಯನ್ನು ತೃಪ್ತಿಪಡಿಸಲು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೆಹಲಿಗೆ ಹೋಗಿರುವ ಶಾಸಕರು

ಯುಡಿ ಮಿಂಜ್

ಮೋಹಿತ್ ಕೆರ್ಕಟ್ಟೆ

ರಾಮಕುಮಾರ್ ಸಿಂಗ್ ಯಾದವ್

ಬೃಹಸ್ಪತಿ ಸಿಂಗ್

ಗುಲಾಬಿ ಕಮ್ರೊ

ಚಂದ್ರದೇವ್ ರೈ

ಪುರುಷೋತ್ತಮ ಕನ್ವರ್

ದ್ವಾರಕಾಧೀಶ್ ಯಾದವ್

ಪ್ರಕಾಶ್ ನಾಯಕ್

ಗುರುದಯಾಳ್ ಬಂಜಾರೆ

ವಿನಯ್ ಜೈಸ್ವಾಲ್

ಸೆಪ್ಟೆಂಬರ್ 16 ರಂದು ರಾಯ್‌ಪುರ ಹೋಟೆಲ್‌ನಲ್ಲಿ 25 ಶಾಸಕರು ವಾಸ್ತವ್ಯ ಹೂಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಇದನ್ನು ಸಿಎಂ ಭೂಪೇಶ್‌ ಬಘೇಲ್ ನಿರಾಕರಿಸಿದ್ದರು. ಇದಾದ ಬಳಿಕ ಸಚಿವ ಸಿಂಗ್‌ ಡಿಯೊ ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ. ಇವರ ಎರಡೂ ಪ್ರವಾಸಗಳು ವೈಯಕ್ತಿಕ ಎಂದು ಹೇಳಲಾಗಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳು ಅಧಿಕಾರ ಬದಲಾವಣೆಯ ಕಸರತ್ತು ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.