ಭುವನೇಶ್ವರ: ಕಳೆದ 26 ವರ್ಷಗಳ ನಂತರ ಇದೇ ಮೊದಲ ಬಾರಿಗೆ 'ನಾಗಾರ್ಜುನ ಬೆಷ'ಧಾರ್ಮಿಕ ಕಾರ್ಯಕ್ರಮವನ್ನು ಇಲ್ಲಿನ ಜಗನ್ನಾಥ ದೇಗುಲದಲ್ಲಿ ನೆರವೇರಿಸಲಾಯಿತು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಕ್ತರಾರಿಗೂ ಗರ್ಭಗುಡಿಕೆ ಅವಕಾಶ ನೀಡಲಾಗಿರಲಿಲ್ಲ. ಈ ಆಚರಣೆಯನ್ನು ಕೊನೆಯದಾಗಿ 1994 ರ ನವೆಂಬರ್‌ನಲ್ಲಿ ನಡೆಸಲಾಗಿತ್ತು. ಇಲ್ಲಿನ ದೇವರ ವಿಗ್ರಹವನ್ನು ಚಿನ್ನದ ಆಭರಣಗಳಿಂದ ಅತ್ಯಾಕರ್ಷಕವಾಗಿ ಸಿಂಗರಿಸಲಾಗಿತ್ತು. ಅಲ್ಲದೇ, 16 ಸಾಂಪ್ರಸಾಯಿಕ ಶಸ್ತ್ರಾಸ್ತ್ರಗಳು ದೇವರ ವಿಗ್ರಹಕ್ಕೆ ಮತ್ತಷ್ಟು ಮೆರಗು ತಂದವು. ಕಾರ್ಯಕ್ರಮದ ವೇಳೆ ಸೇವಕರು ಮತ್ತು ದೇವಾಲಯದ ಅಧಿಕಾರಿಗಳು ಮಾತ್ರ ಹಾಜರಿದ್ದರು.
ದೇವಾಲಯದ ಆವರಣಕ್ಕೆ ಮಾತ್ರ ಜನರಿಗೆ ಅವಕಾಶ ಮಾಡಿಕೊಟ್ಟಿದ್ದ ಹಿನ್ನೆಲೆ ದೇವಾಲಯದ ಮುಂಭಾಗದಲ್ಲಿ ಜನಸಂದಣಿ ತಡೆಯಲು ಪುರಿ ಆಡಳಿತವು ನಗರದ ಕೆಲವು ಭಾಗಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿತ್ತು. ನಾಗಾರ್ಜುನ ಬೆಷ ಆಚರಣೆಯು ಭಗವಂತ ಪರಶುರಾಮನಿಂದ ಕೊಲ್ಲಲ್ಪಟ್ಟ ಪ್ರಮುಖ ರಾಜರಲ್ಲಿ ಒಬ್ಬನಾದ ಕಾರ್ತ್ಯವೇರ ಅರ್ಜುನನ ಹತ್ಯೆಯನ್ನು ನೆನಪಿಸುತ್ತದಂತೆ.