ETV Bharat / bharat

26 ವರ್ಷಗಳ ಬಳಿಕ ದಕ್ಷಿಣ ಭಾರತದ ನಾಯಕನಿಗೆ ಸಿಗಲಿದೆ ಕಾಂಗ್ರೆಸ್ ಸಾರಥ್ಯ

ಆಂಧ್ರ ಪ್ರದೇಶದ ಪಿವಿ ನರಸಿಂಹ ರಾವ್ ಅವರು 1992ರಿಂದ 1996ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರೇ ದಕ್ಷಿಣ ಭಾರತದಿಂದ ಈ ಹುದ್ದೆಯನ್ನು ಅಲಂಕರಿಸಿದ ಕೊನೆಯ ವ್ಯಕ್ತಿಯು ಹೌದು.

after-26-years-congress-to-get-a-president-from-south-india
26 ವರ್ಷಗಳ ಬಳಿಕ ದಕ್ಷಿಣ ಭಾರತದ ನಾಯಕನಿಗೆ ಸಿಗಲಿದೆ ಕಾಂಗ್ರೆಸ್ ಸಾರಥ್ಯ
author img

By

Published : Sep 30, 2022, 8:49 PM IST

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಶುಕ್ರವಾರ ಕೊನೆಯಾಗಿದ್ದು, ದೇಶದ ಹಳೆ ಪಕ್ಷದ ಸಾರಥ್ಯವು 26 ವರ್ಷಗಳ ನಂತರ ದಕ್ಷಿಣ ಭಾರತಕ್ಕೆ ಸಿಗುವುದು ಖಚಿತವಾಗಿದೆ.

ಆಂಧ್ರ ಪ್ರದೇಶದ ಪಿವಿ ನರಸಿಂಹ ರಾವ್ ಅವರು 1992ರಿಂದ 1996ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರೇ ದಕ್ಷಿಣ ಭಾರತದಿಂದ ಈ ಹುದ್ದೆಯನ್ನು ಅಲಂಕರಿಸಿದ ಕೊನೆಯ ವ್ಯಕ್ತಿಯು ಹೌದು. ಇದೀಗ ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ತಿರುವನಂತಪುರಂ ಲೋಕಸಭಾ ಸಂಸದ ಶಶಿ ತರೂರ್ ಕಾಂಗ್ರೆಸ್​ ಅಧ್ಯಕ್ಷ ರೇಸ್​ನಲ್ಲಿದ್ದಾರೆ.

ದಕ್ಷಿಣ ಭಾರತದ ಇಬ್ಬರು ನಾಯಕರ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೋರಾಟ ನಡೆಯಲಿದೆ. ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಪಕ್ಷದ ಬಗ್ಗೆ ನನ್ನದೇ ಆದ ದೃಷ್ಟಿಕೋನವನ್ನು ಹೊಂದಿದ್ದೇನೆ ಎಂದು ಶಶಿ ತರೂರ್ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷರ ಚುನಾವಣೆ: ಹೈಕಮಾಂಡ್​ ಹೇಳಿದರೆ ಖರ್ಗೆ ಸ್ಪರ್ಧಿಸಲು ಹಿಂಜರಿಯುವುದಿಲ್ಲ.. ವರದಿ

ಇತ್ತ, ಅನುಭವಿ ಖರ್ಗೆ ಅವರು ನೆಹರು-ಗಾಂಧಿ ಕುಟುಂಬದ 'ಅಧಿಕೃತ' ಅಭ್ಯರ್ಥಿಯಾಗಿರುವುದರಿಂದ, ಅವರು ಕೂಡ ಸ್ಪರ್ಧೆಯಿಂದ ಹಿಂದೆ ಸರಿಯಲು ಹೋಗುವುದಿಲ್ಲ. ಹೀಗಾಗಿ ಸುಮಾರು 9,100 ಕಾಂಗ್ರೆಸ್ ಮತದಾರರು ಇದ್ದು, ಅಕ್ಟೋಬರ್​​ 17ರಂದು ತಮ್ಮ ಪಕ್ಷದ ಮುಖ್ಯಸ್ಥರು ಯಾರು ಆಗಬೇಕೆಂದು ನಿರ್ಧರಿಸಲಿದ್ದಾರೆ.

ಅಕ್ಟೋಬರ್​ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದೇ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ನಾಮಪತ್ರ ಹಿಂಪಡೆದುಕೊಳ್ಳಲು ಅಕ್ಟೋಬರ್​ 8 ಕೊನೆಯ ದಿನವಾಗಿದೆ. ಅಕ್ಟೋಬರ್​​ 17ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 19ರಂದು ಫಲಿತಾಂಶ ಪ್ರಕಟಗೊಳ್ಳುತ್ತದೆ.

ಇದನ್ನೂ ಓದಿ: ನಾನು ದೊಡ್ಡ ಬದಲಾವಣೆಗಾಗಿ ಹೋರಾಡುತ್ತಿದ್ದೇನೆ ಎಂದ ಖರ್ಗೆ: ಭಿನ್ನಮತೀಯ ನಾಯಕರಿಂದಲೂ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.