ETV Bharat / bharat

ಭಾರತದ ನೂತನ ಅಡ್ವೊಕೇಟ್​ ಜನರಲ್​ ಆಗಿ ಆರ್​ ವೆಂಟಕರಮಣಿ ನೇಮಕ

ಹಿರಿಯ ವಕೀಲ ಆರ್‌ ವೆಂಕಟರಮಣಿ ಅವರನ್ನು ಮುಂದಿನ ಮೂರು ವರ್ಷಗಳವರೆಗೆ ಅಟಾರ್ನಿ ಜನರಲ್‌ ಆಗಿ ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.

r venkataramani
ಆರ್​ ವೆಂಟಕರಮಣಿ
author img

By

Published : Sep 29, 2022, 9:01 AM IST

ನವದೆಹಲಿ: ಭಾರತದ ನೂತನ ಅಟಾರ್ನಿ​ ಜನರಲ್​ ಆಗಿ ಸುಪ್ರೀಂಕೋರ್ಟ್​ನ ಹಿರಿಯ ನ್ಯಾಯವಾದಿ ಆರ್​ ವೆಂಟಕರಮಣಿ ಅವರನ್ನು ನೇಮಕ ಮಾಡಲಾಗಿದೆ. ಬುಧವಾರ ವೆಂಕಟರಮಣಿ ಎಜಿ ಆಗಿ ನೇಮಕವಾಗಿದ್ದು, ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳವರೆಗೆ ಇರಲಿದೆ.

ನಾಳೆಗೆ (ಸೆ.30) ಅಟಾರ್ನಿ​ ಜನರಲ್​ ಕೆ ಕೆ ವೇಣುಗೋಪಾಲ್ ಅವರ ಅವಧಿ ಮುಕ್ತಾಯವಾಗೊಳ್ಳುವ ಹಿನ್ನೆಲೆ ಆರ್​ ವೆಂಕಟರಮಣಿ ಅವರನ್ನು ನೇಮಿಸಿರುವ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ನೊಟಿಫಿಕೇಷನ್​ ಪ್ರಕಾರ, 'ಭಾರತದ ಅಟಾರ್ನಿ ಜನರಲ್​ ಆಗಿ ಆರ್​ ವೆಂಕಟರಮಣಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕಕ್ಕೆ ಅಂಕಿತ ಹಾಕುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿತ್ತು. ಅದರ ಪ್ರಕಾರ ಬುಧವಾರ ಅವರ ನೇಮಕವಾಗಿದೆ.

ಸಂವಿಧಾನದ ಪರಿಚ್ಛೇದ 76 (1) ಅಡಿ ಕೇಂದ್ರ ಸರ್ಕಾರದ ಸಂಪುಟದ ನಿರ್ಧಾರದಂತೆ ರಾಷ್ಟ್ರಪತಿಗಳಿಗೆ ಭಾರತದ ಅಟಾರ್ನಿ ಜನರಲ್​ ಅವರನ್ನು ನೇಮಿಸುವ ಅಧಿಕಾರ ಇರುತ್ತದೆ. ಮುಕುಲ್​ ರೋಹಟಗಿ ಅವರು ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ಬೆನ್ನಲ್ಲೇ ಆರ್​ ವೆಂಕಟರಮಣಿ ಅವರಿಗೆ ಈ ಸ್ಥಾನ ಒಲಿದು ಬಂದಿದೆ.

ಇದನ್ನೂ ಓದಿ: ದೆಹಲಿಯ ಏಮ್ಸ್ ನಿರ್ದೇಶಕ ಸ್ಥಾನಕ್ಕೆ ಕನ್ನಡಿಗ ನೇಮಕ: ಕೇಂದ್ರದಿಂದ ಆದೇಶ

ಜೂನ್​ 30 2022 ರಂದೇ ಹಿರಿಯ ನ್ಯಾಯವಾದಿ ನಿರ್ಗಮಿತ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್​ ಅವರ ಅವಧಿ ಮುಗಿದಿತ್ತು. ಆದ್ರೆ, ಕೇಂದ್ರದ ಮನವಿ ಮೇರೆಗೆ ಮತ್ತೆ ಮೂರು ತಿಂಗಳವರೆಗೆ ತಮ್ಮ ಅಧಿಕಾರನ್ನು ವೇಣುಗೋಪಾಲ್​ ಮುಂದುವರಿಸಿದ್ದರು. ಇವರು ಜುಲೈ​ 1, 2017 ರಿಂದ ಭಾರತದ ಅಟಾರ್ನಿ ಜನರಲ್​ ಆಗಿ ಕಾರ್ಯ ನಿರ್ವಹಿಸಿದ್ದು, ನಾಳೆಗೆ ಅಧಿಕೃತವಾಗಿ ನಿವೃತ್ತಿ ಪಡೆಯಲಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಮುಕುಲ್​ ರೋಹಟಗಿ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಿಸಲು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಆದರೆ ರೋಹಟಗಿ ಈ ಪ್ರಸ್ತಾಪವನ್ನು ನಿರಾಕರಿಸಿದರು.

ಇದನ್ನೂ ಓದಿ: ಭಾರತ ದಕ್ಷಿಣ ಆಫ್ರಿಕಾ ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿಯ ಅವಿನಾಶ ಪೋತದಾರ ನೇಮಕ

ಆರ್​ ವೆಂಕಟರಮಣಿ ಪರಿಚಯ: ಸುಪ್ರೀಂಕೋರ್ಟ್​ನ ಖ್ಯಾತ ನ್ಯಾಯವಾದಿ ಆಗಿರುವ ಆರ್​ ವೆಂಕಟರಮಣಿ ಅವರು ಸಾಂವಿಧಾನಿಕ ಕಾನೂನು, ಪರಿಸರ ಕಾನೂನು, ಬುಡಕಟ್ಟು ಜನರ ಹಕ್ಕುಗಳು, ಮಹಿಳಾ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಪರಿಣಿತಿ ಮತ್ತು ವಾದ ಮಂಡಿಸಿ ಖ್ಯಾತಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.