ETV Bharat / bharat

ಆದಿತ್ಯ-ಎಲ್1 ಮಿಷನ್: ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ- ಇಸ್ರೋ

ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದ್ದು, ಇಂದು ನಡೆದ ಸುಮಾರು 16 ಸೆಕೆಂಡುಗಳ ಪಥ ಸರಿಪಡಿಸುವಿಕೆ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ.

aditya-l1
ಆದಿತ್ಯ ಎಲ್1 ಮಿಷನ್
author img

By ANI

Published : Oct 8, 2023, 2:15 PM IST

ನವದೆಹಲಿ : ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಯೋಜನೆ ಕುರಿತು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದ್ದು, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಸುಮಾರು 16 ಸೆಕೆಂಡುಗಳ ಪಥ ಸರಿಪಡಿಸುವಿಕೆ ಕಾರ್ಯ (TCM - Trajectory Correction Maneuvre) ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದೆ.

  • Aditya-L1 Mission:
    The Spacecraft is healthy and on its way to Sun-Earth L1.

    A Trajectory Correction Maneuvre (TCM), originally provisioned, was performed on October 6, 2023, for about 16 s. It was needed to correct the trajectory evaluated after tracking the Trans-Lagrangean…

    — ISRO (@isro) October 8, 2023 " class="align-text-top noRightClick twitterSection" data=" ">

ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದ್ದು, ನಿರಂತರವಾಗಿ ಸೂರ್ಯನ ಕಡೆಗೆ ಚಲಿಸುತ್ತಿದೆ. ಇಂದು (ಅಕ್ಟೋಬರ್ 6 ರಂದು) ನೌಕೆಯ ಪಥ ಸರಿಪಡಿಸುವಿಕೆ ಪ್ರಕ್ರಿಯೆ ಮಾಡಲಾಯಿತು. ಬಾಹ್ಯಾಕಾಶ ನೌಕೆಯು L1 ಸುತ್ತ ಹಾಲೋ ಕಕ್ಷೆಯ ಅಳವಡಿಕೆಯ ಕಡೆಗೆ ಅದರ ಉದ್ದೇಶಿತ ಮಾರ್ಗದಲ್ಲಿದೆ ಎಂದು TCM ಖಚಿತಪಡಿಸುತ್ತಿದೆ. ಆದಿತ್ಯ-L1 ಪ್ರಗತಿಯಲ್ಲಿದೆ, ಮ್ಯಾಗ್ನೆಟೋಮೀಟರ್ ಅನ್ನು ಕೆಲವೇ ದಿನಗಳಲ್ಲಿ ಮರುಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದೆ.

ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಮಿಷನ್ ಆದಿತ್ಯ-ಎಲ್ 1 ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಎಲ್ 1 ಪಾಯಿಂಟ್ ಅನ್ನು ಸುತ್ತುತ್ತದೆ. ಬಾಹ್ಯಾಕಾಶ ನೌಕೆ ಇದುವರೆಗೆ ಭೂಮಿಯಿಂದ 10 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸಿದೆ. ನೌಕೆಯು ಈಗ ಭೂಮಿಯ ಪ್ರಭಾವದ ವಲಯದಿಂದ ಹೊರಬಂದಿದೆ. ಸೆಪ್ಟೆಂಬರ್ 2 ರಂದು ಯಶಸ್ವಿ ಉಡಾವಣೆಯಾದ ನಂತರ ಆದಿತ್ಯ L 1 ಪ್ರಸ್ತುತ ಭೂಮಿಯ ಕಕ್ಷೆಯನ್ನು ತೊರೆದು L 1 ಪಾಯಿಂಟ್‌ನತ್ತ ವೇಗವಾಗಿ ಚಲಿಸುತ್ತಿದೆ.

ಇದನ್ನೂ ಓದಿ : ಇಸ್ರೋ ಪ್ರತಿದಿನ 100ಕ್ಕೂ ಹೆಚ್ಚು ಸೈಬರ್ ದಾಳಿ ಎದುರಿಸುತ್ತಿದೆ: ಎಸ್.ಸೋಮನಾಥ್

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಮಾಹಿತಿ ಹಂಚಿಕೊಂಡ ಇಸ್ರೋ, ಸೆಪ್ಟೆಂಬರ್ 19, 2023 ರಂದು ನಡೆಸಿದ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 ಅಳವಡಿಕೆ (TL1I) ಕುಶಲತೆಯನ್ನು ಟ್ರ್ಯಾಕ್ ಮಾಡಿದ ನಂತರ ಮಾರ್ಗವನ್ನು ಸರಿಪಡಿಸಲು TCM ಅಗತ್ಯವಿದೆ. L1 ಕಕ್ಷೆಯನ್ನು ಪ್ರವೇಶಿಸಲು ಬಾಹ್ಯಾಕಾಶ ನೌಕೆಯು ಸರಿಯಾದ ಹಾದಿಯಲ್ಲಿದೆ ಎಂದು TCM ಖಚಿತಪಡಿಸುತ್ತದೆ. ಬಾಹ್ಯಾಕಾಶ ನೌಕೆಯು ಮುಂದೆ ಚಲಿಸುವುದನ್ನು ಮುಂದುವರೆಸಿದ್ದು, ಮ್ಯಾಗ್ನೆಟೋಮೀಟರ್ ಅನ್ನು ಕೆಲವೇ ದಿನಗಳಲ್ಲಿ ಮರುಪ್ರಾರಂಭಿಸಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಇದನ್ನೂ ಓದಿ : ಸೂರ್ಯಯಾನದ ಬಹುದೂರದ ಯಾತ್ರೆ ಆರಂಭ : 5ನೇ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ

ನೌಕೆಯು L 1 ಕಕ್ಷೆಯನ್ನು ತಲುಪಿದಾಗ 2024 ರ ಜನವರಿ ಮೊದಲ ವಾರದೊಳಗೆ ಆದಿತ್ಯ L 1 ರ ಈ ಕ್ರೂಸ್ ಹಂತವು ಪೂರ್ಣಗೊಳ್ಳುತ್ತದೆ. ಈ ಮಧ್ಯೆ ಆದಿತ್ಯ L1 ನಲ್ಲಿ ಅಳವಡಿಸಲಾಗಿರುವ ASPEX ಪೇಲೋಡ್‌ನ ಒಂದು ಘಟಕವನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗಿದೆ. ಇದು ಭೂಮಿಯ ಮ್ಯಾಗ್ನೆಟೋಸ್ಪಿಯರ್ ಮತ್ತು ಅದರ ಹೊರಗಿನ ಜಾಗದಲ್ಲಿ ಇರುವ ಶಕ್ತಿಯುತ ಕಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.

ಇದನ್ನೂ ಓದಿ : ಭೂಮಿಯ ಪ್ರಭಾವ ಗೋಳ ದಾಟಿ ಎಲ್​ 1 ಪಾಯಿಂಟ್ ಕಡೆಗೆ ಪಯಣ ಆರಂಭಿಸಿದ 'ಆದಿತ್ಯ': ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.