ETV Bharat / bharat

ಮೊದಲ ಬಾರಿಗೆ ಮುಕ್ತ ಮಾರುಕಟ್ಟೆಯಿಂದ ಸೇಬು ಖರೀದಿಗೆ ಮುಂದಾದ ಅದಾನಿ ಆಗ್ರೋಫ್ರೆಶ್

ಪ್ರತಿ ವರ್ಷ ತೋಟಗಳಿಂದ ಸೇಬುಗಳನ್ನು ಖರೀದಿಸುತ್ತಿದ್ದ, ಅದಾನಿ ಆಗ್ರೋಫ್ರೆಶ್ ಕಂಪನಿಯು ಮೊದಲ ಬಾರಿಗೆ ಮುಕ್ತ ಮಾರುಕಟ್ಟೆಗಳಿಂದ ಸೇಬುಗಳನ್ನು ಖರೀದಿಸುತ್ತಿದೆ.

ಅದಾನಿ ಆಗ್ರೋಫ್ರೆಶ್
ಅದಾನಿ ಆಗ್ರೋಫ್ರೆಶ್
author img

By ETV Bharat Karnataka Team

Published : Sep 7, 2023, 8:04 PM IST

ಶಿಮ್ಲಾ (ಹಿಮಾಚಲ ಪ್ರದೇಶ) : ಹಿಮಾಚಲ ಪ್ರದೇಶದ ಅತಿದೊಡ್ಡ ಸೇಬು ಖರೀದಿ ಕಂಪನಿಯಾದ ಅದಾನಿ ಆಗ್ರೋಫ್ರೆಶ್ ಮಂಡಿಗಳಿಂದ ಸೇಬು ಖರೀದಿಸಲು ಆರಂಭಿಸಿದೆ. ಇದೇ ಮೊದಲ ಬಾರಿಗೆ ಅದಾನಿ ಕಂಪನಿ ಬಿಡ್ ಮಾಡುವ ಮೂಲಕ ಮುಕ್ತ ಮಾರುಕಟ್ಟೆಯಿಂದ ಸೇಬು ಖರೀದಿಸುತ್ತಿದೆ.

ಅದಾನಿ ಕಂಪನಿಯು ಸಾಮಾನ್ಯವಾಗಿ ತೋಟಗಳಲ್ಲಿ ಬೆಳೆಗಾರರಿಂದ ಸೇಬುಗಳನ್ನು ಖರೀದಿಸುತ್ತಿತ್ತು. ಆದರೆ, ಈ ಬಾರಿ ಕಡಿಮೆ ಸೇಬು ಬೆಳೆದಿರುವುದರಿಂದ ರಾಂಪುರ, ಸೈನ್ಜ್ ಮತ್ತು ರೋಹ್ರುದಲ್ಲಿರುವ ತನ್ನ ಸಿಎ ಮಳಿಗೆಗಳ ಸ್ಥಳೀಯ ಮಂಡಿಗಳಿಂದ ಸೇಬುಗಳನ್ನು ಖರೀದಿಸಲು ಪ್ರಾರಂಭಿಸಿದೆ. ಕಂಪನಿಯ ಪ್ರತಿನಿಧಿಗಳು ಮಾರುಕಟ್ಟೆಗಳಲ್ಲಿ ನಡೆಯುವ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಸೇಬುಗಳನ್ನು ಖರೀದಿಸಲಿದ್ದು, ಬಳಿಕ ಸಿಎ ಸ್ಟೋರ್‌ಗಳಿಗೆ ತಲುಪಿಸಲಿದ್ದಾರೆ. ಏಕೆಂದರೆ ದೂರದ ಮಂಡಿಗಳಿಂದ ಸಿಎ ಸ್ಟೋರ್‌ಗಳಿಗೆ ಸೇಬುಗಳನ್ನು ಸಾಗಿಸಲು ಕಂಪನಿಗೆ ಹೆಚ್ಚು ಖರ್ಚಾಗಲಿದೆ. ಅದಕ್ಕಾಗಿಯೇ ಕಂಪನಿ ಸ್ಥಳೀಯ ಮಂಡಿಗಳ ಮೇಲೆ ಮಾತ್ರ ಗಮನಹರಿಸಿದೆ.

ಈ ಬಾರಿ ಅಂದುಕೊಂಡಂತೆ ಸೇಬು ಬೆಳೆ ಕಡಿಮೆ ಆಗಿರುವುದರಿಂದ, ಹಣ್ಣುಗಳು ಕೆಡದೇ ಇರುವಂತೆ ನೋಡಿಕೊಳ್ಳುವ ನಿಯಂತ್ರಿತ ಸ್ಟೋರ್‌ಗಳು ಖಾಲಿ ಬಿದ್ದಿವೆ. ಕಂಪನಿಯ ಮೂರು ಮಳಿಗೆಗಳ ಒಟ್ಟು ಸಾಮರ್ಥ್ಯ 25 ಸಾವಿರ ಮೆಟ್ರಿಕ್ ಟನ್, ಆದರೆ ಸ್ಟೋರ್​ಗಳಿಗೆ ಕಡಿಮೆ ಸೇಬುಗಳು ತಲುಪುತ್ತಿವೆ. ಹೀಗಾಗಿ ಕಂಪನಿ ಮುಕ್ತವಾಗಿ ಬಿಡ್‌ ಮೂಲಕ ಮಂಡಿಗಳಿಂದ ಸೇಬುಗಳನ್ನು ಖರೀದಿ ಮಾಡುತ್ತಿದೆ. ಈಗಾಗಲೇ 4500 ಮೆಟ್ರಿಕ್ ಟನ್ ಸೇಬುಗಳನ್ನು ಖರೀದಿಸಿದ್ದು, ಸ್ಟೋರ್​ಗಳನ್ನು ಭರ್ತಿ ಮಾಡಲು ಇನ್ನು 20 ಸಾವಿರ ಮೆಟ್ರಿಕ್ ಟನ್ ಸೇಬುಗಳು ಬೇಕಾಗಿವೆ. ಹಿಮಾಚಲ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಸೇಬು ಬೆಳೆಯುವ ಸೀಸನ್ ಸಂಪೂರ್ಣ ಮುಗಿದ್ದು, ಮಧ್ಯ ಭಾಗ ಪ್ರದೇಶಗಳಲ್ಲಿಯೂ ​ಸೀಸನ್​ ಮುಗಿಯುವ ಹಂತದಲ್ಲಿದೆ. ಈಗ ಸೇಬು ಎತ್ತರದ ಪ್ರದೇಶಗಳಲ್ಲಿ ಮಾತ್ರವೇ ಕಂಡು ಬರುತ್ತಿದೆ.

ಅದಾನಿ ಆಗ್ರೋಫ್ರೆಶ್ ತನ್ನ ಸಿಎ ಸ್ಟೋರ್‌ನಲ್ಲಿ ಸೇಬುಗಳನ್ನು ಖರೀದಿಸಲು ಉತ್ತಮ ಗುಣಮಟ್ಟದ ಸೇಬುಗಳ ದರವನ್ನು ಪ್ರತಿ ಕೆಜಿಗೆ 110 ರೂ.ಗೆ ನಿಗದಿಪಡಿಸಿದೆ. ಆದರೆ, ಬೆಳಗಾರಿಗೆ ಮಾರುಕಟ್ಟೆಯಲ್ಲಿ ಇದಕ್ಕಿಂತ ಹೆಚ್ಚಿನ ದರ ಸಿಗುತ್ತಿದೆ. ಈ ಕಾರಣದಿಂದ ಬೆಳಗಾರರು ಸಿಎ ಸ್ಟೋರ್​ಗೆ ಹೋಗುತ್ತಿಲ್ಲ. ಮತ್ತೊಂದೆಡೆ ಈ ಹಿಂದೆ ಮಂಡಿಗಳಲ್ಲಿ ಬಾಕ್ಸ್‌ಗಳ ಆಧಾರದ ಮೇಲೆ ಸೇಬುಗಳನ್ನು ಖರೀದಿಸಲಾಗುತ್ತಿತ್ತು. ಈ ಬಾರಿ ತೋಟಗಾರರ ಸೇಬಿನ ದರವನ್ನು ಮಂಡಿಗಳಲ್ಲಿಯೂ ಕೆಜಿ ಲೆಕ್ಕದಲ್ಲಿ ಪಡೆಯಲಾಗುತ್ತಿದೆ. ಈ ಹಿಂದೆ ಅದಾನಿ ಆಗ್ರೋಫ್ರೆಶ್ ಮತ್ತು ಇತರ ಕಂಪನಿಗಳು ಸೇಬುಗಳನ್ನು ಕೆಜಿ ಲೆಕ್ಕದಲ್ಲಿ ಖರೀದಿಸಿದ್ದವು. ಹೀಗಾಗಿ ಬೆಳಗಾರಿಗೆ ಉತ್ತಮ ಬೆಲೆ ಸಿಗುತ್ತಿದ್ದು, ಲಾಭವೂ ಹೆಚ್ಚಾಗುತ್ತಿದೆ.

ಕಳೆದ ಬಾರಿ, ಹೆಚ್ಚಿನ ಸಂಖ್ಯೆಯ ಬೆಳೆಗಾರರು ಸ್ಟೋರ್​ಗಳ ಬಳಿ ಬರದೇ ಇರುವುದರಿಂದ ಕಂಪನಿಯು ತನ್ನ ಮಳಿಗೆಗಳನ್ನು ಹಲವಾರು ಬಾರಿ ಮುಚ್ಚಿತು. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ಕೆಲವೇ ಕೆಲವು ರೈತರು ಸಿಎ ಸ್ಟೋರ್‌ಗಳಿಗೆ ಹೋಗುತ್ತಿದ್ದು, ಸ್ಟೋರ್​ಗಳು ಖಾಲಿ ಖಾಲಿ ಬಿದ್ದಿವೆ. ಇನ್ನೊಂದೆಡೆ ಬೆಳಗಾರರು ಹೆಚ್ಚಿನ ಸೇಬುಗಳನ್ನು ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅದಾನಿ ಕಂಪನಿಯೂ ಮುಕ್ತ ಮಾರುಕಟ್ಟೆಯಲ್ಲಿ ಬಿಡ್ ಮಾಡುವ ಮೂಲಕ ಸೇಬುಗಳನ್ನು ಖರೀದಿಸಲು ಮುಂದಾಗಿದೆ.

ಇದನ್ನೂ ಓದಿ : ಹಲ್ದಿರಾಮ್ ಸ್ವಾಧೀನಪಡಿಸಿಕೊಳ್ಳುವ ಮಾತುಕತೆ ನಡೆಸುತ್ತಿಲ್ಲ: ಟಾಟಾ ಕನ್ಸೂಮರ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.