ETV Bharat / bharat

ಆ್ಯಸಿಡ್ ಫ್ಲೈ: ಆತಂಕ ಸೃಷ್ಟಿಸಿದ ಡೇಂಜರಸ್ ಕೀಟ! ಎಲ್ಲಿಂದ ಬಂತು? ವೈದ್ಯರ ಸಲಹೆ ಏನು? - ಆ್ಯಸಿಡ್ ಫ್ಲೈ ಲಕ್ಷಣಗಳು

ವೈದ್ಯರ ಸೂಕ್ತ ಉಪಚಾರ, ಚಿಕಿತ್ಸೆ ಸಿಕ್ಕಲ್ಲಿ 8 ರಿಂದ 10 ದಿನಗಳಲ್ಲಿ ಸಂಪೂರ್ಣ ಚೇತರಿಸಿಕೊಳ್ಳಬಹುದು. ಅರಣ್ಯ ಪ್ರದೇಶಗಳತ್ತ ಹೋಗದೇ ಇರುವುದೇ ಸದ್ಯ ಇದರಿಂದ ಪಾರಾಗುವ ಉಪಾಯ ಎಂಬುದು ವೈದ್ಯರ ಅಭಿಪ್ರಾಯ.

Acid Fly: New terror in North Bengal
Acid Fly: New terror in North Bengal
author img

By

Published : Jul 6, 2022, 11:54 AM IST

ಸಿಲಿಗುರಿ (ಪಶ್ಚಿಮ ಬಂಗಾಳ): ಯಾವುದೋ ಒಂದು ಅಪರಿಚಿತ ಕೀಟದ ದಾಳಿಯಿಂದ ಇಡೀ ಪಶ್ಚಿಮ ಬಂಗಾಳ ಇದೀಗ ಭಯಭೀತವಾಗಿದೆ ಎಂದು ವರದಿಗಳು ತಿಳಿಸಿವೆ. ಸಿಲಿಗುರಿ ಹಾಗೂ ದಾರ್ಜಿಲಿಂಗ್ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಈ ಭಯಾನಕ ಕೀಟವನ್ನು ನೈರೋಬಿ ಫ್ಲೈ ಅಥವಾ ಆ್ಯಸಿಡ್ ಫ್ಲೈ ಎಂದು ಕರೆಯಲಾಗಿದೆ.

ಕಳೆದ ಕೆಲವೇ ದಿನಗಳ ಅವಧಿಯಲ್ಲಿ ಸಿಲಿಗುರಿಯಲ್ಲಿ ಅನೇಕ ಜನರು ಆ್ಯಸಿಡ್ ಫ್ಲೈ ದಾಳಿಗೆ ತುತ್ತಾಗಿದ್ದಾರೆ. ಆಫ್ರಿಕಾ ದೇಶದ ಈ ಕೀಟದ ಮೈಯಿಂದ ಸುರಿಯುವ ಒಂದು ರೀತಿಯ ದ್ರವವು ಮನುಷ್ಯನ ಮೈಮೇಲೆ ಬೀಳುತ್ತಿದ್ದಂತೆಯೇ ಮೈಮೇಲೆ ಗುಳ್ಳೆಗಳೆದ್ದು ಗಾಯವಾಗುತ್ತದೆ. ಈ ಕೀಟದ ಕಾರಣದಿಂದ ಪಶ್ಚಿಮ ಬಂಗಾಳದ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಒಂದು ರೀತಿಯ ಆತಂಕದ ವಾತಾವರಣ ಹರಡಿದೆ. ಆದಾಗ್ಯೂ ಈ ಕೀಟದಿಂದ ಯಾರೂ ಹೆದರಬೇಕಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಆ್ಯಸಿಡ್ ಫ್ಲೈ.. ಆತಂಕ ಸೃಷ್ಟಿಸಿದ ಡೇಂಜರಸ್ ಕೀಟ

ಆ್ಯಸಿಡ್ ಫ್ಲೈ ಅಥವಾ ನೈರೋಬಿ ಫ್ಲೈ ಎಂಬುದು ಆಫ್ರಿಕಾ ಮೂಲದ ಕೀಟವಾಗಿದೆ. ಕೇಸರಿ, ಕೆಂಪು ಮತ್ತು ಕಪ್ಪು ಬಣ್ಣದ ಕೀಟವು ಪೆಡಿಟಿನ್ ಎಂಬ ಆ್ಯಸಿಡ್​ ಅನ್ನು ಹೊಂದಿರುತ್ತದೆ. ಈ ಆ್ಯಸಿಡ್​ ಮಾನವರ ಚರ್ಮಕ್ಕೆ ತಗುಲಿದರೆ ಹಾನಿಯಾಗುತ್ತದೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಈ ಕೀಟ ವಾಸ ಮಾಡುತ್ತದೆ.

ರಾಜ್ಯದ ಉತ್ತರ ಭಾಗದಲ್ಲಿ ಅಂದರೆ ವಿಶೇಷವಾಗಿ ಹಿಮಾಲಯದ ತಪ್ಪಲಿನಲ್ಲಿ ವಿಪರೀತ ಮಳೆಯಾಗುವ ಕಾರಣದಿಂದ ಈ ಕೀಟ ಆ ಸ್ಥಳಗಳಲ್ಲಿ ವಾಸಿಸುತ್ತದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತಿಯಾದ ಮಳೆಯಾಗಿದ್ದರಿಂದ ಆ್ಯಸಿಡ್ ಫ್ಲೈ ಕೀಟಗಳು ಸಾಮಾನ್ಯಕ್ಕಿಂತ ಹೆಚ್ಚಾಗಿ ಉತ್ಪತ್ತಿಯಾಗಿವೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಈ ಕೀಟ ಮಾನವರನ್ನು ಕಚ್ಚುವುದಿಲ್ಲ. ಆದರೆ, ಕೀಟ ಬಂದು ಶರೀರದ ಮೇಲೆ ಕುಳಿತಾಗ ಅದನ್ನು ಕೊಂದ ನಂತರ ಅದರಿಂದ ಹೊರಬರುವ ಪೆಡಿಟಿನ್ ಆ್ಯಸಿಡ್​ನಿಂದ ಚರ್ಮಕ್ಕೆ ಗಾಯವಾಗುತ್ತದೆ.

ಕೀಟದ ಆ್ಯಸಿಡ್ ಚರ್ಮಕ್ಕೆ ತಗುಲಿದಾಗ ವಿಪರೀತ ಉರಿ ಉಂಟಾಗಿ ಗಾಯವಾಗುತ್ತದೆ. ನಂತರ ಬಹಳ ಹೊತ್ತಿನವರೆಗೆ ನೋವು ಕಾಡುತ್ತದೆ. ಅಲ್ಲದೆ ವಾಂತಿ ಹಾಗೂ ಜ್ವರ ಕೂಡ ಕಾಣಿಸಿಕೊಳ್ಳಬಹುದು.

ಈ ಕೀಟ ಕಚ್ಚಿ ಗಾಯವಾಗಿರುವುದು

ವೈದ್ಯರ ಸೂಕ್ತ ಉಪಚಾರ ಚಿಕಿತ್ಸೆ ಸಿಕ್ಕಲ್ಲಿ 8 ರಿಂದ 10 ದಿನಗಳಲ್ಲಿ ಸಂಪೂರ್ಣ ಚೇತರಿಸಿಕೊಳ್ಳಬಹುದು. ಅರಣ್ಯ ಪ್ರದೇಶಗಳತ್ತ ಹೋಗದೇ ಇರುವುದೇ ಸದ್ಯ ಇದರಿಂದ ಪಾರಾಗುವ ಉಪಾಯವಾಗಿದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಉದ್ದ ತೋಳಿನ ಶರ್ಟು, ಪ್ಯಾಂಟು ಮತ್ತು ರಾತ್ರಿ ಸಮಯದಲ್ಲಿ ಸೊಳ್ಳೆ ಪರದೆ ಉಪಯೋಗಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಸಿಲಿಗುರಿ ವಲಯದ ಆಶ್ರಂಪಾರಾ, ಗುರುಂಗ್ ಬಸ್ತಿ, ಚಂಪಾಸರಿ, ದೇಬಿದಂಗಾ, ಮಟಿಗಾರಾ, ಖಾಪ್ರೈಲ್, ದೇಶಬಂಧುಪಾರಾ ಪ್ರದೇಶಗಳಲ್ಲಿ ಹೆಚ್ಚು ಜನರಿಗೆ ಈ ಕೀಟ ಬಾಧೆ ಕಾಣಿಸಿಕೊಂಡಿದೆ. ನಕ್ಷಲ್​ಬಾರಿ, ಖರಿಬಾರಿ ಮತ್ತು ಫನ್ಸಿದೇವಾ ಪ್ರದೇಶಗಳಲ್ಲೂ ಕೀಟದ ಕಾಟ ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.