ETV Bharat / bharat

ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ್​ದಲ್ಲಿ ಸಂಭವಿಸುವ ಭೂಕಂಪನಗಳು ದೆಹಲಿಗೂ ಅಪಾಯ: ಸಣ್ಣ ಕಂಪನಗಳೇ ಎಚ್ಚರಿಕೆಯ ಮುನ್ಸೂಚನೆಗಳು!

author img

By ETV Bharat Karnataka Team

Published : Oct 11, 2023, 1:15 PM IST

ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ ಮತ್ತು ಉತ್ತರಾಖಂಡದಲ್ಲಿ ಪ್ರತಿದಿನ ಭೂಕಂಪನದ ಅನುಭವವಾಗುತ್ತಿದೆ. ಈ ಪ್ರದೇಶದ ಭೂಗರ್ಭದಲ್ಲಿ ಸಾಕಷ್ಟು ಒತ್ತಡದ ಶಕ್ತಿ ಸಂಗ್ರಹವಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದು ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

according-to-geologist-kalachand-sai-earthquake-in-uttarakhand-will-cause-devastation-till-delhi
ಹಿಮಾಲಯದ ತಪ್ಪಲಿನ ಉತ್ತರಾಖಂಡ್​ನಲ್ಲಿ ಸಂಭವಿಸುವ ಭೂಕಂಪನಗಳು ದೆಹಲಿಗೂ ಅಪಾಯ: ಸಣ್ಣ ಕಂಪನಗಳೇ ಎಚ್ಚರಿಕೆಯ ಮುನ್ಸೂಚನೆಗಳು

ಡೆಹ್ರಾಡೂನ್​ (ಉತ್ತರಾಖಂಡ): ಕಳೆದ ಕೆಲವು ದಿನಗಳ ಹಿಂದೆ ನೇಪಾಳದಲ್ಲಿ ಉಂಟಾದ ಭೂಕಂಪ ಹಾಗೂ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರಾಖಂಡ ಸೇರಿ ಇತರ ಭಾಗಗಳಲ್ಲಿ ಭೂಮಿ ನಡುಗಿದ ಅನುಭವವಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಳೆಯ ಭೂಕಂಪದ ದಾಖಲೆಗಳ ವಿಶ್ಲೇಷಣೆ ಮಾಡುತ್ತಿದ್ದಾರೆ. ಇದೇ ವೇಳೆ, ಭವಿಷ್ಯದಲ್ಲಿ ಭಾರಿ ಭೂಕಂಪನದ ಅನುಭವವಾಗಬಹುದು ಎಂದೂ ಎಚ್ಚರಿಸಿದ್ದಾರೆ.

ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ ಮತ್ತು ಉತ್ತರಾಖಂಡದಲ್ಲಿ ಪ್ರತಿದಿನ ಭೂಕಂಪನದ ಅನುಭವವಾಗುತ್ತಿದೆ. ಇದೇ ಕಾರಣಕ್ಕೆ ಈ ಪ್ರದೇಶಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ವಿಜ್ಞಾನಿಗಳೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸುವ ಭೀತಿ ಬಹಳ ದಿನಗಳಿಂದ ಮನೆ ಮಾಡಿದೆ. ಈ ಭೂಕಂಪ ಯಾವಾಗ ಸಂಭವಿಸುತ್ತದೆ ಅಥವಾ ಅದರ ತೀವ್ರತೆಯ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇಲ್ಲ.

ವಿಜ್ಞಾನಿಗಳ ಪ್ರಕಾರ, ಈ ಪ್ರದೇಶದ ಭೂಗರ್ಭದಲ್ಲಿ ಸಾಕಷ್ಟು ಒತ್ತಡದ ಶಕ್ತಿ ಸಂಗ್ರಹವಾಗಿದೆ. ಈ ಶಕ್ತಿಯು ಯಾವುದೇ ಸಮಯದಲ್ಲಿ ದೊಡ್ಡ ಭೂಕಂಪದೊಂದಿಗೆ ಭೂಮಿಯನ್ನು ನಡುಗಿಸಬಹುದು ಎಂಬುವುದೇ ಭೀತಿಗೆ ಕಾರಣ. ಜೊತೆಗೆ ಸಣ್ಣ ಭೂಕಂಪಗಳು ಮನುಷ್ಯನಿಗೆ ಎಚ್ಚರವಾಗಿರುವಂತೆ ಸಿಗುವ ಮುನ್ಸೂಚನೆಗಳು. ಒಂದು ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸುವ ಸಾಧ್ಯತೆಯಿದ್ದರೆ ಮತ್ತು ಆ ಪ್ರದೇಶದಲ್ಲಿ 5 ಅಥವಾ 6ರ ತೀವ್ರತೆಯ ಭೂಕಂಪ ಸಂಭವಿಸಿದರೆ, ಅದು ಭವಿಷ್ಯದಲ್ಲಿ ಸಂಭವಿಸುವ ದೊಡ್ಡ ಭೂಕಂಪದ ಆತಂಕವನ್ನು ಸ್ವಲ್ಪ ಮುಂದೂಡುತ್ತವೆ. ಈ ಸಣ್ಣ ಭೂಕಂಪಗಳೇ ಭವಿಷ್ಯದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಲು ಹೆಚ್ಚಿನ ಸಮಯವನ್ನು ನೀಡುತ್ತವೆ.

ಭೂಗರ್ಭದಲ್ಲಿ ಸಂಗ್ರಹವಾಗಿರುವ ಒತ್ತಡದ ಶಕ್ತಿಯ ಸಣ್ಣ ಪ್ರಮಾಣವನ್ನು ಬಿಡುಗಡೆ ಮಾಡಿದರೆ, ಅದು ದೊಡ್ಡ ಭೂಕಂಪವನ್ನು ಪ್ರಚೋದಿಸುತ್ತದೆ. ಈ ದೊಡ್ಡ ಭೂಕಂಪವು ನೇಪಾಳ ಮತ್ತು ಉತ್ತರಾಖಂಡದ ಪ್ರದೇಶಗಳಲ್ಲಿ ಭಾರಿ ವಿನಾಶವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಇಷ್ಟೇ ದೊಡ್ಡ ಪರಿಣಾಮವು ದೆಹಲಿಯಲ್ಲೂ ಕಂಡು ಬರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಈ ಕುರಿತು ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆಯ ನಿರ್ದೇಶಕ ಕಲಾಚಂದ್ ಸಾಯಿ ಮಾತನಾಡಿ, ಕಳೆದ ಮೂರ್ನಾಲ್ಕು ದಿನಗಳಲ್ಲಿ ಪಶ್ಚಿಮ ನೇಪಾಳ ಮತ್ತು ಪೂರ್ವ ಉತ್ತರಾಖಂಡದ ಪ್ರದೇಶಗಳಲ್ಲಿ ರಿಕ್ಟರ್​ ಮಾಪನದಲ್ಲಿ 5.5ಕ್ಕೂ ಹೆಚ್ಚು ತೀವ್ರತೆಯ ಭೂಕಂಪಗಳು ದಾಖಲಾಗಿವೆ. ಇಂಡಿಯನ್ ಪ್ಲೇಟ್​ ಮತ್ತು ಯುರೇಷಿಯನ್ ಪ್ಲೇಟ್ ನಡುವಿನ ಘರ್ಷಣೆಯಿಂದಾಗಿ ಈ ಪ್ರದೇಶದಲ್ಲಿ ಸಾಕಷ್ಟು ಒತ್ತಡದ ಶಕ್ತಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಅಲ್ಲದೇ, ಘರ್ಷಣೆಯಿಂದಾಗಿ ಈ ಪ್ರದೇಶವು ಸಾಕಷ್ಟು ಒತ್ತಡದಲ್ಲಿದೆ. ಈ ಪ್ರದೇಶವು ಭೂಕಂಪನ ವಲಯ 4 ಮತ್ತು 5ರಲ್ಲಿ ಬರುತ್ತದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಒತ್ತಡದ ಶಕ್ತಿಯು ಸಂಗ್ರಹವಾಗುತ್ತದೆ. ಜಿಪಿಎಸ್ ಮತ್ತು ಭೂಕಂಪಶಾಸ್ತ್ರದ ಅಧ್ಯಯನದಿಂದ ಇದು ದೃಢಪಟ್ಟಿದೆ. ಆದರೆ, ಕೆಲವು ಸಮಯದಿಂದ ಭೂಕಂಪಗಳ ಮೂಲಕ ಒತ್ತಡದ ಶಕ್ತಿಯು ಬಿಡುಗಡೆಯಾಗುವ ಮೂಲಕ ದೊಡ್ಡ ಭೂಕಂಪದ ಅಪಾಯವು ಸ್ವಲ್ಪ ಸಮಯದವರೆಗೆ ಮುಂದೂಡಲ್ಪಡುತ್ತಿದೆ. ಈ ಶಕ್ತಿಯು ಏಕಕಾಲದಲ್ಲಿ ಬಿಡುಗಡೆಯಾದರೆ ದೊಡ್ಡ ಭೂಕಂಪದ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇದನ್ನು ಕಂಡುಕೊಳ್ಳಲು ಪ್ರಸ್ತುತ ಯಾವುದೇ ತಂತ್ರಜ್ಞಾನ ಲಭ್ಯವಿಲ್ಲ. ಒಂದು ವೇಳೆ, ಅಂತರ ತಂತ್ರಜ್ಞಾನ ಲಭ್ಯವಾದರೆ, ಅದರ ಮೂಲಕ ಸಂಗ್ರಹವಾಗಿರುವ ಒತ್ತಡ ಶಕ್ತಿಯಿಂದ ಎಷ್ಟು ಶಕ್ತಿ ಬಿಡುಗಡೆಯಾಗುತ್ತದೆ ಮತ್ತು ಅದು ಯಾವಾಗ ಸಂಭವಿಸುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಆದಾಗ್ಯೂ, ಸಣ್ಣ ಭೂಕಂಪಗಳಿಂದ ಮೇಲ್ಮೈಯಲ್ಲಿ ದುರ್ಬಲ ಬಿಂದುಗಳು ಉತ್ಪತ್ತಿಯಾಗುತ್ತಿವೆ. ಭೂಕಂಪದ ದೃಷ್ಟಿಕೋನದಿಂದ ಈ ಪ್ರದೇಶವನ್ನು ಅಧ್ಯಯನ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.

ಇದನ್ನೂ ಓದಿ: ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪನ: ದೆಹಲಿ, ನೋಯ್ಡಾದಲ್ಲೂ ನಡುಗಿದ ಭೂಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.