ವಿಶಾಖಪಟ್ಟಣ: ಯುವಕನೊಬ್ಬ ಕೆಲಸ ವೇಳೆ ಆಯತಪ್ಪಿ ಕೆಳಗೆ ಬಿದ್ದಾಗ ಆತನ ಕತ್ತಿನಿಂದ ಮುಖದೊಳಗೆ ಕಬ್ಬಿಣದ ರಾಡ್ ಸಿಲುಕಿದ್ದ ಘಟನೆ ಇಲ್ಲಿನ ಅಂಗನಂಪೂಡಿ ಹೋಮಿ ಬಾಬಾ ಆಸ್ಪತ್ರೆಯಲ್ಲಿ ನಡೆದಿದೆ.
ಉತ್ತರಪ್ರದೇಶದ ನಿವಾಸಿ ಎಂ. ರಾಹುಲ್ ಸಿವಾಕ್ (22) ಪ್ರವೈಟ್ ಬಿಲ್ಡಿಂಗ್ ಸರ್ವಿಸಸ್ ಕಂಪನಿಯಲ್ಲಿ ಎಲಕ್ಟ್ರಿಕಲ್ ಕೆಲಸ ಮಾಡುತ್ತಿದ್ದ. ಸೋಮವಾರ ಸಂಜೆ ಕೆಲಸದ ವೇಳೆ ಮೇಲಿಂದ ಜಾರಿ ಕಬ್ಬಿಣದ ರಾಡ್ಗಳ ರಾಶಿ ಮೇಲೆ ಬಿದ್ದಿದ್ದಾನೆ. ಇದರಲ್ಲೊಂದು ಕಬ್ಬಿಣದ ರಾಡ್ ಆತನ ಕತ್ತಿನಿಂದ ಎಡಗಣ್ಣು ಕೆಳ ಭಾಗದಿಂದ ನುಗ್ಗಿದೆ.
ಇದನ್ನು ನೋಡಿದ ಸ್ಥಳೀಯರು ಕೂಡಲೇ ರಾಹುಲ್ನನ್ನು ಗಾಜುವಾಕದ ಆರ್ಕೆ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ದಂತ ವೈದ್ಯರಾದ ಟಿ.ಸುನೀಲ್, ಈಎನ್ಟಿ ಸರ್ಜನ್ ಡಾಕ್ಟರ್ ಜಿ. ರಾಕೇಶ್, ಡಾಕ್ಟರ್ ಕೃಷ್ಣಮೂರ್ತಿಯ ವೈದ್ಯರ ತಂಡ ಎರಡೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ರಾಡ್ ಅನ್ನು ಹೊರ ತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ರಾಡ್ ಹೊರ ತೆಗೆದಿದ್ದೇವೆ. ಯುವಕನಿಗೆ ಯಾವುದೇ ಪ್ರಾಣ ಹಾನಿ ಇಲ್ಲ. ಇನ್ನೊಂದು ವಾರದಲ್ಲಿ ಯುವಕ ಚೇತರಿಸಿಕೊಳ್ಳುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.