ತಿರುವನಂತಪುರಂ (ಕೇರಳ): ಜೂನ್ 1ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಮಾಡಲಿದ್ದೇವೆ ಎಂದು ಶಿಕ್ಷಣ ಸಚಿವ ವಿ. ಶಿವಕುಟ್ಟಿ ಮಾಹಿತಿ ನೀಡಿದ್ದಾರೆ. ಆದರೆ, ಈ ತರಗತಿಗಳು ಡಿಜಿಟಲ್ ಮಾದರಿಯಲ್ಲಿ ಮಾತ್ರ ಇರಲಿದೆ ಎಂದಿದ್ದಾರೆ.
ಕೆಐಟಿಇ ಚಾನೆಲ್ ಮೂಲಕ ತರಗತಿ ಪ್ರಸಾರವಾಗಲಿದ್ದು, ಕಳೆದ ವರ್ಷದ ಅಂತ್ಯದ ಪಾಠಗಳು ಈ ವರ್ಷದ ಮೊದಲ ವಾರದಲ್ಲಿ ಮತ್ತೆ ಪುನರಾವರ್ತಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ.
ಈ ತರಗತಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪುಸ್ತಕಗಳನ್ನು ಶನಿವಾರ ವಿತರಿಸಲಾಗುವುದು. ದ್ವಿತಿಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆಯು ಜೂನ್ 1ರಿಂದ ಆರಂಭಗೊಳ್ಳಲಿದ್ದು, 19ಕ್ಕೆ ಅಂತ್ಯವಾಗಲಿದೆ. ಹಾಗೆಯೆ ಎಸ್ಎಸ್ಎಲ್ಸಿ ಮೌಲ್ಯಮಾಪನವು ಜೂನ್ 7ಕ್ಕೆ ಆರಂಭಗೊಂಡು, 25ಕ್ಕೆ ಅಂತ್ಯವಾಗಲಿದೆ. ಪ್ರಾಯೋಗಿಕ ಪರೀಕ್ಷೆಯೂ ಜೂನ್ 11ರಿಂದ ಜುಲೈ 7ರ ವರೆಗೆ ನಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಹಣ ಮರುಪಾವತಿಗೆ ನಕಾರ: ಪ್ರತಿಭಟನೆ ಮಾಡಿದ ಜಾಧವ್ ಭಾವೆ ಬಂಧನ