ಅಮೃತಸರ: 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಿಖ್ ಸಮುದಾಯದ ವ್ಯಕ್ತಿ ಕಣಕ್ಕಿಳಿಯಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದು ಸಿಖ್ ಸಮುದಾಯದ ಹಕ್ಕು ಎಂದು ಕೇಜ್ರೀವಾಲ್ ಹೇಳಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅಮೃತಸರದಲ್ಲಿ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.
ಕುನ್ವರ್ ವಿಜಯ್ ಪ್ರತಾಪ್ ರಾಜಕಾರಣಿ ಅಲ್ಲ, ಅವರನ್ನು 'ಆಮ್ ಆದ್ಮಿ ಕಾ ಪೊಲೀಸ್ವಾಲಾ' ಎಂದು ಕರೆಯಲಾಗಿದೆ. ನಾವೆಲ್ಲರೂ ದೇಶಸೇವೆ ಮಾಡಲು ಇಲ್ಲಿದ್ದೇವೆ. ಈ ಮನೋಭಾವದಿಂದ ಅವರು ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಅಮೃತಸರದಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ್ರು.
ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಪಂಜಾಬ್ನಲ್ಲಿ 2015ರ ಕೋಟ್ಕಾಪುರ ಪೊಲೀಸ್ ಗುಂಡಿನ ಘಟನೆಯನ್ನು ತನಿಖೆ ಮಾಡುವ ಎಸ್ಐಟಿಯ ಭಾಗವಾಗಿದ್ದರು.