ETV Bharat / bharat

ನಾಮಪತ್ರ ರದ್ದು.. ಪೆಟ್ರೋಲ್​ ಸುರಿದುಕೊಂಡು AAP ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ!

AAP candidate attempts to commit suicide: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿಯೋರ್ವರ ನಾಮಪತ್ರ ರದ್ದುಗೊಂಡಿರುವ ಕಾರಣ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

AAP candidate tried to commit suicide
AAP candidate tried to commit suicide
author img

By

Published : Jan 24, 2022, 5:53 PM IST

ಮುಜಾಫರ್​ನಗರ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಮೊದಲ ಹಂತದ ಚುನಾವಣೆಗೋಸ್ಕರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಿಸಿದ್ದಾರೆ. ಅದೇ ರೀತಿ ಮುಜಾಫರ್​ನಗರದ ಮೀರಾಪುರ್ ಕ್ಷೇತ್ರದಿಂದ ಕಣಕ್ಕಿಳಿಯಲು ಇಚ್ಛಿಸಿದ್ದ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಉಮೇದುವಾರಿಕೆ ರದ್ದುಗೊಂಡ ಹಿನ್ನೆಲೆ ರಾದ್ಧಾಂತವೇ ನಡೆದಿದೆ. ನಾಮಪತ್ರ ರದ್ದಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ನಾಮಪತ್ರ ರದ್ಧು ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಅಭ್ಯರ್ಥಿ

ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಸರ್ದಾರ್​​ ಜೋಗಿಂದರ್ ​​ಸಿಂಗ್​​ ಮೀರಾಪುರ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ಉಮೇದುವಾರಿಕೆ ರದ್ದುಗೊಳ್ಳುತ್ತಿದ್ದಂತೆ ಮನನೊಂದಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.

Aam Aadmi Party candidate tried to commit suicide
ಎಎಪಿ ಅಭ್ಯರ್ಥಿ ರಕ್ಷಣೆ ಮಾಡಿದ ಪೊಲೀಸರು

ಇದನ್ನೂ ಓದಿರಿ: ಹರಿಣಗಳ ವಿರುದ್ಧ ODI ಸರಣಿ ಸೋತ ರಾಹುಲ್ ಪಡೆಗೆ ಶಾಕ್​​.. ಫೈನಲ್​​​ ಪಂದ್ಯದ ಶೇ.40ರಷ್ಟು ದಂಡ

ತಮ್ಮ ನಾಮಪತ್ರ ರದ್ದುಗೊಂಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜೋಗಿಂದರ್ ಸಿಂಗ್​, ಜಿಲ್ಲಾ ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಓರ್ವ ಸಿಖ್​​ ಆಗಿರುವ ಕಾರಣ ನನ್ನ ಉಮೇದುವಾರಿಕೆ ರದ್ದು ಮಾಡಲಾಗಿದೆ. ಜೊತೆಗೆ ನಾವು ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಎಎಪಿ ಅಭ್ಯರ್ಥಿ

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ವೋಟಿಂಗ್​​ ಫೆಬ್ರವರಿ 10ರಿಂದ ಆರಂಭಗೊಳ್ಳಲಿದೆ. ಮಾರ್ಚ್​ 10ಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.