ನವದೆಹಲಿ: ಆಮ್ನೆಸ್ಟಿ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಹೊರಡಿಸಿರುವ ಲುಕ್ಔಟ್ ನೋಟಿಸ್ ಅನ್ನು ತ್ರಿಸದಸ್ಯ ಪೀಠ ರದ್ದುಗೊಳಿಸಿದ್ದರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದು, ಈ ಬಗ್ಗೆ ವಿವರಣೆ ಕೋರಿ ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ರದ್ದು ಕುರಿತು ಪಟೇಲ್ ಅವರ ಪ್ರತಿಕ್ರಿಯೆಯನ್ನು ಕೋರ್ಟ್ ಕೋರಿದ್ದು, ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರಿದ್ದ ಪೀಠ ಮುಂದಿನ ವಿಚಾರಣೆಯನ್ನು ಮೇ 18 ಕ್ಕೆ ಮುಂದೂಡಲಾಗಿದೆ.
ಪಟೇಲ್ ಅವರು ಯುಎಸ್ಗೆ ತೆರಳುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದು, ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ-2010 ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅವರ ವಿರುದ್ಧ ಲುಕ್ಔಟ್ ಸುತ್ತೋಲೆ ಹೊರಡಿಸಿತ್ತು.
ಓದಿ: ಮತ್ತು ಬರೋ ಔಷಧ ನೀಡಿ ಶಿಕ್ಷಕಿ ಮೇಲೆ ರೇಪ್: ಬ್ಲಾಕ್ ಮೇಲೆ ಮಾಡಿ, ಮತಾಂತರಕ್ಕೆ ಒತ್ತಡ