ETV Bharat / bharat

ಪ್ರೇಯಸಿ ಎದುರು ಹೊಡೆದರು ಅಂತಾ ಆತ್ಮಹತ್ಯೆ ಮಾಡಿಕೊಂಡ ಯುವಕ - ನೇಣು ಬಿಗಿದುಕೊಂಡು ಆತ್ಮಹತ್ಯೆ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ- ಪ್ರತೀಕ ಹಾಗೂ ಪ್ರಥಮೇಶ ಇಬ್ಬರೂ ಒಬ್ಬಳೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಪ್ರಥಮೇಶ, ಹುಡುಗಿಯ ಎದುರೇ ಪ್ರತೀಕ್​ನನ್ನು ಹೊಡೆದಿದ್ದ.

ಪ್ರೇಯಸಿ ಎದುರು ಹೊಡೆದ್ರು ಅಂತ ಆತ್ಮಹತ್ಯೆ ಮಾಡಿಕೊಂಡ ಯುವಕ
A young man committed suicide after beaten by friend
author img

By

Published : Sep 17, 2022, 5:17 PM IST

ಪಿಂಪ್ರಿ - ಚಿಂಚವಡ್ (ಮಹಾರಾಷ್ಟ್ರ): ಪ್ರೇಯಸಿಯ ಎದುರು ಥಳಿತಕ್ಕೊಳಗಾದ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ. ಪ್ರತೀಕ್ ಸಂತೋಷ ಕೂತವಳ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈ ಪ್ರಕರಣದಲ್ಲಿ ಪ್ರಥಮೇಶ ಮಹಾದು ಪಠಾರೆ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಥಮೇಶ ಈತ ಪ್ರತೀಕನನ್ನು ಆತನ ಪ್ರೇಯಸಿಯ ಎದುರು ಥಳಿಸಿದ್ದ. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಪ್ರತೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ- ಪ್ರತೀಕ್ ಹಾಗೂ ಪ್ರಥಮೇಶ ಇಬ್ಬರೂ ಒಬ್ಬಳೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಪ್ರಥಮೇಶ, ಹುಡುಗಿಯ ಎದುರೇ ಪ್ರತೀಕ್​ನನ್ನು ಹೊಡೆದಿದ್ದ. ಇದರಿಂದ ಅವಮಾನಿತನಾಗಿದ್ದ ಪ್ರತೀಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ 25 ಮೇ, 2022 ರಂದು ನಡೆದಿತ್ತು. ಅದಾಗಿ ಎರಡು ತಿಂಗಳು ಕಳೆದ ನಂತರ ಈಗ ಪ್ರತೀಕ್​ನ ತಂದೆ ಸಂತೋಷ ಕೂತವಳ ಭೋಸರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಯುವತಿ ಜೊತೆ ನಿರಂತರ ದೈಹಿಕ ಸಂಪರ್ಕ : ಕೈಕೊಟ್ಟ ಎಂಜಿನಿಯರ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.