ಮುಂಬೈ (ಮಹಾರಾಷ್ಟ್ರ): ತೌಕ್ತೆ ಚಂಡಮಾರುತವು ಮಹಾರಾಷ್ಟ್ರದಲ್ಲಿ ಸಾವು - ನೋವನ್ನುಂಟುಮಾಡಿದೆ. ಮನೆಗಳು, ಕಟ್ಟಡಗಳು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಮುಂಬೈನ ವಿಖ್ರೋಲಿ ಪ್ರದೇಶದಲ್ಲಿ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದು ಹೋಗುತ್ತಿರುವ ವೇಳೆ ಹೆಮ್ಮರವೊಂದು ಬಿದ್ದಿದೆ.
ಮರಬೀಳುವುದಕ್ಕೂ ಕೆಲವೇ ಸೆಕೆಂಡ್ಗಳ ಮುಂಚೆ ಆಕೆ ಅಲ್ಲಿಂದ ಓಡಿದ್ದು, ಬೃಹತ್ ಮರ ದಾರಿಗೆ ಬಿದ್ದಿದೆ. ಪವಾಡ ಸದೃಶ್ಯ ಎಂಬಂತೆ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಸದ್ಯ ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.