ETV Bharat / bharat

ಮದುವೆ ದಿಬ್ಬಣದ ಬಸ್​ಗೆ ಕಂಟೈನರ್ ಡಿಕ್ಕಿ: ಚಾಲಕ ಸಾವು, 10 ಜನರಿಗೆ ಗಾಯ - Raigad District of Maharashtra

ಮದುವೆ ಸಮಾರಂಭ ಮುಗಿಸಿ ಸಿಂಧುದುರ್ಗದಿಂದ ಶಹಪುರಕ್ಕೆ 35 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಖಾಸಗಿ ಬಸ್​ಗೆ ಟ್ರಕ್​ ಹಿಂದಿನಿಂದ ಗುದ್ದಿದೆ.

A truck collided with a private bus from behind in Maharashtra
ಖಾಸಗಿ ಬಸ್​ಗೆ ಹಿಂದಿನಿಂದ ಡಿಕ್ಕಿ ಹೊಡೆದ ಟ್ರಕ್
author img

By

Published : Dec 19, 2022, 1:41 PM IST

ಮಹಾರಾಷ್ಟ್ರ: ಖಾಸಗಿ ಬಸ್​ಗೆ ಹಿಂಬದಿಯಿಂದ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸಾವನ್ನಪ್ಪಿ, 10 ಜನ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಮದುವೆ ಸಮಾರಂಭ ಮುಗಿಸಿ ಸಿಂಧುದುರ್ಗದಿಂದ ಶಹಪುರಕ್ಕೆ 35 ಪ್ರಯಾಣಿಕರೊಂದಿಗೆ ಖಾಸಗಿ ಬಸ್​ ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಬಸ್​ನಿಂದ ಕೆಳಕ್ಕೆ ಬಿದ್ದು, ಟ್ರಕ್​ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಗೆ ಬಸ್​ನಲ್ಲಿದ್ದ ಹತ್ತು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಕಂಟೈನರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ದೆಹಲಿಯಲ್ಲಿ ದಟ್ಟ ಮಂಜು; ರೈಲು ಸಂಚಾರ ವಿಳಂಬ, ಟ್ರಾಫಿಕ್ ಸಮಸ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.