ETV Bharat / bharat

ವಾರೆ ವ್ಹಾ..! ಗಟ್ಟಿಗಿತ್ತಿ ಈ ನಾರಿ: ಸೀರೆಯುಟ್ಟು ಟ್ರೆಂಡ್​ ಕ್ರಿಯೇಟ್​​​ ಮಾಡಿದ 'ಮೊನಾಲಿಸಾ' - ಯೂಟ್ಯೂಬ್​ ವೈರಲ್​ ವಿಡಿಯೋ

ಸಂಪ್ರದಾಯಬದ್ಧ ಉಡುಗೆ ತೊಟ್ಟು ಕುದುರೆ ಸವಾರಿ ಮಾಡುವ ಮೊನಾಲಿಸಾ, ಅಷ್ಟೆ ಸರಳವಾಗಿ ಟ್ರಕ್​, ಬುಲೆಟ್​ ಓಡಿಸ್ತಾರೆ. ಅಲ್ಲದೆ ಸೀರೆಯನ್ನುಟ್ಟು ಟ್ರ್ಯಾಕ್ಟರ್​​ನಿಂದ ಹೊಲ ಉಳುತ್ತಾರೆ. ಈ ಎಲ್ಲಾ ವಿಡಿಯೋಗಳನ್ನು ತಮ್ಮ ಯೂಟ್ಯೂಬ್​​ ಚಾನಲ್​ನಲ್ಲಿ ಹಾಕಿರುವ ಮೊನಾಲಿಸಾಗೆ ಬರೋಬ್ಬರಿ 22 ಲಕ್ಷ​ ಮಂದಿ ಸಬ್​ಸ್ಕ್ರೈಬ್​​ ಆಗಿದ್ದಾರೆ.

a-rural-woman-monalisha-earns-millions-by-performing-bold-stunts
ಮೊನಾಲಿಸಾ ಭದ್ರಾ
author img

By

Published : Jun 7, 2021, 7:29 PM IST

Updated : Jun 7, 2021, 9:40 PM IST

ಜಾಜ್​ಪುರ(ಒಡಿಶಾ): ಬಾಗಿಲು ದಾಟಿ ಹೊರ ಬಂದ್ರೆ ಅಪರಾಧ ಎನ್ನುವಂತಿದ್ದ ಕಾಲಘಟ್ಟದಿಂದ, ಮಧ್ಯರಾತ್ರಿ ಹೆಣ್ಣು ಒಂಟಿಯಾಗಿ ನಡೆದರೆ ಸ್ವಾತಂತ್ರ್ಯ ಸಿಕ್ಕಂತೆ ಎನ್ನುವ ನವಯುಗದಲ್ಲಿ ಗಂಡಿನಂತೆ ಹೆಣ್ಣು ಸರಿಸಮಾನ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಜಾಜ್​ಪುರದ ಮಹಿಳೆಯೊಬ್ಬರು ತಮ್ಮ ವಿಶಿಷ್ಟ ಹವ್ಯಾಸಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ್ದು, ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

ಗಟ್ಟಿ ಗಿತ್ತಿ ನಾರಿಯ ಧೈರ್ಯಕ್ಕೆ ವಾರೆ ವ್ಹಾ..!​​
a-rural-woman-monalisha-earns-millions-by-performing-bold-stunts
ಕುದುರೆ ಸವಾರಿಯಲ್ಲಿ ಮೊನಾಲಿಸಾ

ಜೈಪುರ ಜಿಲ್ಲೆಯ ಜಹಾಲ್​​ ಎಂಬ ಹಳ್ಳಿಯ ನಿವಾಸಿ ಮೊನಾಲಿಸಾ ಭದ್ರಾ ಸೋಷಿಯಲ್ ಮೀಡಿಯಾದಲ್ಲಿ ಸಖತ್​​ ಟ್ರೆಂಡ್ ಸೃಷ್ಟಿಸಿರುವ ಮಹಿಳೆ. ಕೈತುಂಬ ಬಳೆ, ಸಂಪ್ರದಾಯಬದ್ಧ ಉಡುಗೆ ತೊಟ್ಟು ಕುದುರೆ ಸವಾರಿ ಮಾಡುವ ಮೊನಾಲಿಸಾ, ಅಷ್ಟೇ ಸರಳವಾಗಿ ಟ್ರಕ್​, ಬುಲೆಟ್​ ಓಡಿಸ್ತಾರೆ. ಅಲ್ಲದೆ ಸೀರೆಯನ್ನುಟ್ಟು ಟ್ರ್ಯಾಕ್ಟರ್​​ನಿಂದ ಹೊಲ ಊಳುತ್ತಾರೆ. ಈ ಎಲ್ಲಾ ವಿಡಿಯೋಗಳನ್ನು ತಮ್ಮ ಯೂಟ್ಯೂಬ್​​ ಚಾನಲ್​ನಲ್ಲಿ ಹಾಕಿರುವ ಮೊನಾಲಿಸಾಗೆ ಬರೊಬ್ಬರಿ 22 ಲಕ್ಷ​ ಮಂದಿ ಸಬ್​ಸ್ಕ್ರೈಬ್​​ ಆಗಿದ್ದಾರೆ.

ಟ್ರಾಕ್ಟರ್​​ ಏರಿ ಹೊಲ ಊಳಿದ ಮೊನಾಲಿಸಾ

ಟ್ರಕ್​​ ಚಾಲನೆ ಮಾಡಿದ ಗಟ್ಟಿಗಿತ್ತಿ ಮೊನಾಲಿಸಾ

ಸಾಮಾಜಿಕ ಕಾರ್ಯಕರ್ತ, ಕ್ರಿಯೇಟಿವ್​ ಡೈರೆಕ್ಟರ್ ಆಗಿರುವ ಮೊನಾಲಿಸಾ ಅವರ ಪತಿ ಬದ್ರಿ ನಾರಾಯಣ ಭದ್ರಾ ಅವರೇ ತಮ್ಮ ಪತ್ನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ. ಮೊನಾಲಿಸಾ ಅವರು ಗದ್ದೆ ಊಳುವುದು, ನಾಟಿ ಮಾಡುವುದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವೋಲ್ವೊ ಬಸ್​ ಚಾಲನೆ ಮಾಡಿದ್ದು ಸೇರಿ ಹಲವು ವಿಡಿಯೋಗಳನ್ನು ಈಗಾಗಲೇ ಯೂಟ್ಯೂಬ್​ಗೆ ಅಪ್​​ಲೋಡ್​ ಮಾಡಿದ್ದಾರೆ. ಪ್ರತಿ ತಿಂಗಳು ಸುಮಾರು ಒಂದು ಲಕ್ಷಕ್ಕೂ ಅಧಿಕ ಹಣವನ್ನು ಇವರು ಸಂಪಾದನೆ ಕೂಡಾ ಮಾಡುತ್ತಿದ್ದಾರೆ.

ಕುದುರೆ ಮೇಲೆ ಮೊನಾಲಿಸಾ

ಬುಲೆಟ್​​ ಮೇಲೆ ಸಿರೆಯುಟ್ಟ ನಾರಿ

ಒಟ್ಟಾರೆಯಾಗಿ ನಾಲ್ಕು ಗೋಡೆಯ ಮಧ್ಯ ಇದ್ದು, ಯಾರಾದರೂ ಏನಾದರೂ ಅನ್ನುತ್ತಾರೆ ಎಂದು ಅನೇಕ ಮಹಿಳೆಯರು ತಮ್ಮ ಹವ್ಯಾಸ ಮತ್ತು ಪ್ರತಿಭೆಗಳನ್ನು ಮೊಟುಕುಗೊಳಿಸಿ ಬದುಕುತ್ತಿದ್ದಾರೆ. ಅಂತಹ ಮಹಿಳೆಯರಿಗೆ ಸ್ಫೂರ್ತಿಯಾಗಿರುವ ಮೊನಾಲಿಸಾ, ನಾರಿ ಮನಸು ಮಾಡಿದ್ರೆ ಎಲ್ಲವೂ ಸಾಧ್ಯ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬುದಕ್ಕೆ ನಿದರ್ಶನ ಆಗಿದ್ದಾರೆ.

Last Updated : Jun 7, 2021, 9:40 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.