ಗ್ಯಾಂಗ್ಟಾಕ್: ಸಿಕ್ಕಿಂನ ಶೆರ್ತಾಂಗ್ ಬಳಿ ನಿನ್ನೆ ರಾತ್ರಿ ಹಿಮದಲ್ಲಿ ಸಿಲುಕಿದ್ದ 17 ಪ್ರವಾಸಿಗರನ್ನು ಐಟಿಬಿಪಿ ಜವಾನರು ರಕ್ಷಿಸಿದ್ದಾರೆ.
ಮಾಹಿತಿಯ ಪ್ರಕಾರ, ಸಿಕ್ಕಿಂನ ಸೌಂದರ್ಯ ಸವಿಯಲು ಮೂರು ಕಾರಿನ ಮೂಲಕ 17 ಪ್ರವಾಸಿಗರು ಬಂದಿದ್ದರು. ಪ್ರವಾಸ ನಿಮಿತ್ತ ಶರ್ತಾಂಗ್ ಬಳಿಯ 13,500 ಅಡಿಗಳ ಎತ್ತರದ ಬೆಟ್ಟದ ಮೇಲೆ ಹತ್ತಿದ್ದಾರೆ. ಆದ್ರೆ ಈ ವೇಳೆ ಭಾರಿ ಹಿಮ ಮಳೆಯಾಗಿದ್ದು, 17 ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.
ಇನ್ನು ಈ ಸುದ್ದಿ ಇಂಡೋ-ಟಿಬೆಟಿಯನ್ ಯೋಧರಿಗೆ ತಿಳಿದಿದೆ. ಕೂಡಲೇ ಹಿಮದಿಂದ ಆವೃತವಾದ ಬೆಟ್ಟವನ್ನು ತಲುಪಿ 17 ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.