ETV Bharat / bharat

ಆಕರ್ಷಕ ವೈಶಿಷ್ಟ್ಯಗಳೊಂದಿಗೆ 'ಎಲೆಕ್ಟ್ರಿಕ್ ಬೈಕ್'​ ಉತ್ಪಾದಿಸಿದ ಖಾಸಗಿ ಮೋಟಾರ್ ಕಂಪನಿ! - ಪ್ರಣವ್ ಇ-ಬೈಕ್

ಕೊಯಮತ್ತೂರಿನ ಶ್ರೀವಾರು ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ದೇಶದಲ್ಲಿ ಮೊದಲ ಬಾರಿಗೆ ‘ಪ್ರಣವ್’ ಎಂಬ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಮೋಟಾರ್ ಬೈಕ್​ನ್ನು ಉತ್ಪಾದಿಸಿದ್ದು, ಇ-ಬೈಕ್ ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

A private motor company in Coimbatore produces electric bike with attractive features
ಆಕರ್ಷಕ ವೈಶಿಷ್ಟ್ಯಗಳೊಂದಿಗೆ 'ಎಲೆಕ್ಟ್ರಿಕ್ ಬೈಕ್'​ ಉತ್ಪಾದಿಸಿದ ಖಾಸಗಿ ಮೋಟಾರ್ ಕಂಪನಿ
author img

By

Published : Feb 4, 2021, 1:03 PM IST

ಕೊಯಮತ್ತೂರು (ತಮಿಳುನಾಡು): ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ಮೋಟಾರು ಕಂಪನಿಯೊಂದು ಪರಿಸರ ಸ್ನೇಹಿ ವಿದ್ಯುತ್ ಮೋಟಾರು ಬೈಕ್​ನ್ನು ಉತ್ಪಾದಿಸಿದೆ.

ಆಕರ್ಷಕ ವೈಶಿಷ್ಟ್ಯಗಳೊಂದಿಗೆ 'ಎಲೆಕ್ಟ್ರಿಕ್ ಬೈಕ್'​ ಉತ್ಪಾದಿಸಿದ ಖಾಸಗಿ ಮೋಟಾರ್ ಕಂಪನಿ

ಪ್ರಣವ್ ಎಂಬ ಇ - ಬೈಕ್ ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಯುವಕರನ್ನು ಹೆಚ್ಚು ಗಮನ ಸೆಳೆದಿದೆ. ಈ ಬೈಕ್​​ನ್ನು ಸಾಮಾನ್ಯ ಸವಾರಿಯಲ್ಲದೇ, ರಿವರ್ಸ್ ಮೋಡ್ ಮತ್ತು ರೇಸ್ ಮೋಡ್‌ನಲ್ಲಿಯೂ ನಿರ್ವಹಿಸಬಹುದು.

ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಹವಾಮಾನ ಬದಲಾವಣೆ ಮತ್ತು ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದು ಗಾಳಿ, ನೀರು ಮತ್ತು ಭೂಮಿಯ ಗುಣಮಟ್ಟವನ್ನು ಹಾನಿಗೊಳಿಸುತ್ತಿದೆ. ಹೆಚ್ಚುತ್ತಿರುವ ಮಾಲಿನ್ಯಕ್ಕೆ ಭಾರತವು ಹೊರತಾಗಿಲ್ಲ. ಇದು ಜನರ ಆರೋಗ್ಯವನ್ನು ಕೆಡಿಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಅವು ಹೊರಸೂಸುವ ಇಂಗಾಲದಿಂದ ಹೆಚ್ಚು ಮಾಲಿನ್ಯ ಮಟ್ಟವೂ ಹೆಚ್ಚುತ್ತಿದೆ. ಹೀಗಾಗಿ, ಕಳೆದ ಕೆಲ ವರ್ಷಗಳಿಂದ ಜನರು ಪರಿಸರ ಸ್ನೇಹಿ ವಾಹನಗಳನ್ನು ಆರಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ, ಕೊಯಮತ್ತೂರಿನ ಶ್ರೀವಾರು ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ‘ಪ್ರಣವ್’ ಎಂಬ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಮೋಟಾರ್ ಬೈಕ್​ನ್ನು ಉತ್ಪಾದಿಸಿದೆ. ಏರೋ ಡೈನಾಮಿಕ್ ಪ್ರಣವ್ ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 123 ಕಿ.ಮೀ ವೇಗವನ್ನು ತಲುಪಬಲ್ಲದು ಮತ್ತು ನಾಲ್ಕು ನಿಮಿಷಗಳಲ್ಲಿ 60 ಕಿ.ಮೀ ವೇಗವನ್ನು ಮುಟ್ಟಬಲ್ಲದು.

160 ಕೆಜಿ ತೂಕದ ಈ ಬೈಕ್​, ಒಂದೇ ಚಾರ್ಜ್‌ನಲ್ಲಿ ಸುಮಾರು 126 ಕಿ.ಮೀ. ಚಲಿಸಬಲ್ಲದು. ಡಿಜಿಟಲ್ ಪ್ರದರ್ಶನವು ಬೈಕ್​ನ ಬ್ಯಾಟರಿ ಚಾರ್ಜ್, ವೇಗ ಒಳಗೊಂಡಂತೆ ಇನ್ನಿತರ ಮಾಹಿತಿಯನ್ನು ಒದಗಿಸುತ್ತದೆ. ಈ ಬೈಕ್​ನ ಬೆಲೆ 2.25 ಲಕ್ಷ ರೂ. ವರೆಗೂ ಇದೆ.

ಓದಿ: ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಗಳ ಸಂಖ್ಯೆಯನ್ನು 11 ರಿಂದ 6ಕ್ಕೆ ಇಳಿಸಿದ ಸರ್ಕಾರ

ಈ ಕುರಿತು ಮಾಹಿತಿ ವಿವರಿಸಿದ ಶ್ರೀವಾರು ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ‘ಪ್ರಣವ್’ ಎಂಜಿನಿಯರ್ ಮೋಹನ್ ಪೆರಿಯಸ್ವಾಮಿ, ಪ್ರಣವ್ ಇ-ಬೈಕ್ ಬಳಕೆದಾರರಿಗೆ ಯಾವುದೇ ಕಂಪನವನ್ನು ನೀಡದ ಕಾರಣ ಸವಾರಿ ಸುಲಭ ಮತ್ತು ಆರಾಮದಾಯಕವಾಗಿದೆ. ಬೈಕ್‌ಗೆ ಯಾವುದೇ ಹಿಡಿತವಿಲ್ಲದ ಕಾರಣ ಜನರು ಪ್ರಯಾಣವನ್ನು ಆನಂದಿಸುತ್ತಾರೆ. ಈ ಬೈಕ್​ ಯಾವುದೇ ಅನಿಲವನ್ನು ಹೊರಸೂಸುವುದಿಲ್ಲ. "10 ಗಿಡಗಳನ್ನು ನೆಡುವ ಫೋಟೋಗಳೊಂದಿಗೆ ಹೊರಬರುವ ಗ್ರಾಹಕರಿಗೆ ನಾವು 25 ಸಾವಿರ ರೂ.ಗಳ ರಿಯಾಯಿತಿಯನ್ನು ನೀಡುತ್ತೇವೆ" ಎಂದು ಅವರು ಹೇಳಿದ್ದಾರೆ.

ವಾಹನದ ವಿನ್ಯಾಸಕ ಅರವಿಂದ್ ಮಾತನಾಡಿ, ಯುವಕರು ಈ ಬೈಕ್ ಅನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಏಕೆಂದರೆ ಇದು ವ್ಯಾಪಕ ಶ್ರೇಣಿಯ ಆಕರ್ಷಕ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಮೂರು ಮೋಡ್ ರೈಡಿಂಗ್ ಹೊಂದಿದೆ. ಸಾಮಾನ್ಯ ಸವಾರಿಯಲ್ಲದೇ, ಬೈಕ್​ ರಿವರ್ಸ್ ಮೋಡ್ ಮತ್ತು ರೇಸ್ ಮೋಡ್‌ನಲ್ಲಿ ನಿರ್ವಹಿಸಬಹುದು. ಡ್ರೈವ್ ಮೋಡ್‌ನಲ್ಲಿ ಒಬ್ಬರು ಗರಿಷ್ಠ 123 ಕಿ.ಮೀ ವೇ ಸಾಧಿಸಬಹುದು, ಸ್ಪೋರ್ಟ್ಸ್ ಮೋಡ್‌ನಲ್ಲಿ ಗರಿಷ್ಠ 123 ಕಿ.ಮೀ ವೇಗ ಮತ್ತು ರಿವರ್ಸ್ ಮೋಡ್‌ ರೈಡ್ನಲ್ಲಿ ಗರಿಷ್ಠ 5 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸಬಹುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.