ETV Bharat / bharat

ಬರೋಬ್ಬರಿ 1 ಕೋಟಿ ರೂಪಾಯಿಗೆ ಮಾರಾಟವಾದ ಬೆಟ್ಟಿಂಗ್ ಜೋಡಿ ಗೂಳಿ

ಬೆಟ್ಟಿಂಗ್ ಗೂಳಿಗಳ ಜೋಡಿಯೊಂದನ್ನು ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಿದ ಅಪರೂಪದ ಘಟನೆ ಹೈದರಾಬಾದ್ ಸಮೀಪದ​​​​​ ಸೂರ್ಯಪೇಟ್​ನಲ್ಲಿ ನಡೆದಿದೆ.

author img

By

Published : Aug 10, 2023, 1:15 PM IST

A pair of betting bulls
ಬೆಟ್ಟಿಂಗ್ ಜೋಡಿ ಗೂಳಿ

ಹುಜೂರ್ ನಗರ (ಹೈದರಾಬಾದ್) : ಬೆಟ್ಟಿಂಗ್ ಗೂಳಿಗಳ ಮಾರಾಟ ಮತ್ತು ಖರೀದಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಸೂರ್ಯಪೇಟ್ ಜಿಲ್ಲೆಯ ಹುಜೂರ್‌ನಗರದ ಸುಂಕಿ ಸುರೇಂದರ್ ರೆಡ್ಡಿ ಎಂಬುವರು ಸಾಕಿದ ಜೋಡಿ ಗೂಳಿಯನ್ನು ಬರೋಬ್ಬರಿ 1 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.

ಹೌದು, ಅಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕೊಲ್ಲೂರು ಮಂಡಲದ ಅನಂತರಾಮ ಗ್ರಾಮದ ರೈತರೊಬ್ಬರು ಇತ್ತೀಚೆಗಷ್ಟೇ ಕೋಟಿ ರೂಪಾಯಿ ಪಾವತಿಸಿ ಈ ಬೆಟ್ಟಿಂಗ್ ಜೋಡಿ ಗೂಳಿಗಳ ಮಾಲೀಕರಾಗಿದ್ದಾರೆ. ಭೀಮ ಮತ್ತು ಅರ್ಜುನ ಎಂಬ ಹೆಸರಿನ ಈ ಎರಡು ಗೂಳಿಗಳು ಕಳೆದ 9 ತಿಂಗಳಲ್ಲಿ ತೆಲುಗು ರಾಜ್ಯಗಳಲ್ಲಿ ನಡೆದ 40ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿವೆ. ಅದರಲ್ಲಿ ಬರೋಬ್ಬರಿ 34 ಪ್ರಥಮ ಬಹುಮಾನ ಪಡೆದಿವೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಳೇಯ ಮಾಲೀಕ ಸುರೇಂದರ್ ರೆಡ್ಡಿ, "ನನ್ನ ಅನುಭವದ ಪ್ರಕಾರ ಯಾವ ಜೋಡಿ ಗೂಳಿಗೂ ಇಷ್ಟೊಂದು ಬೆಲೆ ಸಿಗುವುದಿಲ್ಲ. ಆದರೆ, ಭೀಮ ಮತ್ತು ಅರ್ಜುನ ನನ್ನು 1 ಕೋಟಿ ರೂ.ಗೆ ಅಂಧ್ರಪ್ರದೇಶದ ರೈತರೊಬ್ಬರು ಖರೀದಿ ಮಾಡಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ : 10 ಲಕ್ಷ ರೂಪಾಯಿಗೆ ಮಾರಾಟವಾದ ಹಳ್ಳಿಕಾರ್ ಎತ್ತು 'ಬ್ರಾಂಡ್‌ ಅಪ್ಪಣ್ಣ'!- ವಿಡಿಯೋ

10 ಲಕ್ಷ ರೂ. ಗೆ ಮಾರಾಟವಾದ ಹಳ್ಳಿಕಾರ್ : ಇನ್ನು ​ಮಂಡ್ಯದ ಶ್ರೀರಂಗ ಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ರೈತರೊಬ್ಬರು ಸಾಕಿದ್ದ ಎತ್ತು ಕಳೆದ ಮೇ ತಿಂಗಳಲ್ಲಿ 10 ಲಕ್ಷ 25 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ವಿನು ಎಂಬುವರಿಂದ ಚಿಕ್ಕಮಗಳೂರಿನ ತೇಗೂರು ಮಂಜಣ್ಣ ಎಂಬಾತ ದುಬಾರಿ ಬೆಲೆ ಕೊಟ್ಟು ಎತ್ತು ಖರೀದಿ ಮಾಡಿದ್ದರು. ರಾಜ್ಯದ ವಿವಿಧೆಡೆ ನಡೆದ ಎತ್ತಿನ ಗಾಡಿ ರೇಸ್‌ನಲ್ಲಿ ಭಾಗವಹಿಸಿದ್ದ ಬ್ರಾಂಡ್‌ ಅಪ್ಪಣ್ಣ ಎಂಬ ಹೆಸರಿನ ಎತ್ತು ಸಾಕಷ್ಟು ಪ್ರಸಿದ್ಧಿ ಪಡೆದಿದೆ. "ಚಿತ್ರನಟ ದರ್ಶನ್‌ ಕೂಡ ಇದನ್ನು ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆ ಅವರಿಗೆ ನೀಡಲಾಗಿಲ್ಲ" ಎಂದು ಮಾಲೀಕ ವಿನು ಹೇಳಿದ್ದರು.

ಇದನ್ನೂ ಓದಿ : ಬಾಗಲಕೋಟೆ : ದಾಖಲೆಯ 14 ಲಕ್ಷ ರೂಪಾಯಿಗೆ ಮಾರಾಟವಾದ ಎತ್ತು

14 ಲಕ್ಷ ರೂಪಾಯಿಗೆ ಎತ್ತು ಮಾರಾಟ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಹಲಕಿ ಗ್ರಾಮದ ರೈತ ಸಹೋದರರಾದ ಕಾಶಿಲಿಂಗಪ್ಪ ಗಡದಾರ ಹಾಗೂ ಯಮನಪ್ಪ ಗಡದಾರ ಎಂಬವರು ಇದೇ ವರ್ಷದ ಪ್ರಾರಂಭದಲ್ಲಿ 14 ಲಕ್ಷ ರೂಪಾಯಿಗೆ ಎತ್ತನ್ನು ಮಾರಾಟ ಮಾಡಿದ್ದರು. ಒಂದು ವರ್ಷದ ಹಿಂದೆ 5 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದ ಒಂದು ಎತ್ತನ್ನು ನಂದಗಾಂವ ಗ್ರಾಮದ ವಿಠ್ಠಲ ಎಂಬುವರಿಗೆ ಬರೋಬ್ಬರಿ 14 ಲಕ್ಷ ರೂ. ಗೆ ಮಾರಾಟ ಮಾಡಿದ್ದರು.

ಇದನ್ನೂ ಓದಿ : ಬಂಡಿ ಸ್ಪರ್ಧೆಯ ಚಾಂಪಿಯನ್​ 'ರಾಜ' ದಾಖಲೆಯ 13.5 ಲಕ್ಷ ರೂಪಾಯಿಗೆ ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.