ಕಣ್ಣೂರು : ವೈದ್ಯೆಯಾಗುವ ಕನಸು ಕಾಣುತ್ತಿದ್ದ ಬಡಗಿಯೊಬ್ಬರ ಮಗಳು(carpenter's daughter) ಇದೀಗ ಕೀಬೋರ್ಡ್( keyboard)ಅನ್ನು ಉಲ್ಟಾ ನುಡಿಸುವುದರಲ್ಲಿ ಮಾಸ್ಟರ್ ಆಗಿದ್ದಾರೆ. ಸಂಗೀತದ ಮೇಲಿನ ತನ್ನ ಉತ್ಸಾಹವನ್ನು ಮುಂದುವರಿಸಲು ಆಕೆ ವೈದ್ಯೆಯಾಗುವ ಕನಸಿಗೆ ವಿದಾಯ ಹೇಳಿದ್ದಾರೆ.
ವಿಶೇಷತೆಯೆಂದರೆ ಅವರು ಕಣ್ಣುಮುಚ್ಚಿ ಕೂಡ ಕೀಬೋರ್ಡ್ ಅನ್ನು ಉಲ್ಟಾ ನುಡಿಸಬಲ್ಲರು. ಕಣ್ಣೂರಿನ ಪಡಿಯೊಟ್ಟು ಚಾಲ್ (Padiyottuchal in Kannur) ಮೂಲದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿ ಅಮಲಾ ರವೀಂದ್ರನ್(Amala Raveendran) ಈ ಸಾಧನೆ ಮಾಡುತ್ತಿರುವ ಯುವ ಪ್ರತಿಭೆ.
ಈಗಾಗಲೇ ವಿದೇಶಗಳಲ್ಲಿ 20ಕ್ಕೂ ಹೆಚ್ಚು ಲೈವ್ ಶೋಗಳನ್ನು ಮಾಡಿದ್ದಾರೆ ಮತ್ತು ಇದುವರೆಗೆ 200ಕ್ಕೂ ಹೆಚ್ಚು ಲೈವ್ ಕಾರ್ಯಕ್ರಮಗಳನ್ನು ದೇಶದದಲ್ಲಿ ನಡೆಸಿಕೊಟ್ಟಿದ್ದಾರೆ.
ಪ್ರಮುಖ ವಿಷಯ ಎಂದರೆ ಮಲಯಾಳಂ(Malayalam ) ಚಲನಚಿತ್ರದ ಹಾಡೊಂದನ್ನು 2.42 ನಿಮಿಷಗಳ ಕಾಲ ಕೀಬೋರ್ಡ್ ಉಲ್ಟಾ ತಿರುಗಿಸಿ ನುಡಿಸಿದ್ದು, ಈ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಕಳೆದ 10 ವರ್ಷಗಳಿಂದ ಅಮಲಾ ಸಂಗೀತ ಕಲಿಯುತ್ತಿದ್ದರು. ಈ ವೇಳೆ ಅವರ ತಂದೆ, ಇತರ ಸಂಗೀತಗಾರರಿಗಿಂತ ವಿಭಿನ್ನವಾಗಿ ಏನಾದರೂ ಮಾಡುವಂತೆ ಸಲಹೆ ನೀಡಿದ್ದಾರೆ. ಹಾಗಂದಿದ್ದೇ ತಡ ತನ್ನ ಅಸಾಮಾನ್ಯ ಪ್ರತಿಭೆಯನ್ನು ಹೊರ ಹಾಕುತ್ತಾ ಬರುತ್ತಿದ್ದಾರೆ ಅಮಲಾ.
ಅಮಲಾ ಅವರ ಪಾಂಡಿತ್ಯವು ಕೇವಲ ಕೀಬೋರ್ಡ್‌ಗೆ ಸೀಮಿತವಾಗಿಲ್ಲ. ಬದಲಾಗಿ ಗಿಟಾರ್ ಅನ್ನು ಸಹ ನುಡಿಸಬಲ್ಲರು. ಹೆಸರಾಂತ ಸಂಗೀತಗಾರರ ಬಳಿ ಕರ್ನಾಟಕ ಸಂಗೀತವನ್ನೂ (Carnatic music) ಕಲಿಯುತ್ತಿದ್ದಾರೆ.
ಅಮಲಾ ಪ್ರಸಿದ್ಧ ಕೀಬೋರ್ಡ್ ಕಲಾವಿದ ಸ್ಟೀಫನ್ ದೇವಸ್ಸಿ (keyboard artist Stephen Devassy ) ಅವರ ಶಿಷ್ಯೆಯಾಗಬೇಕೆಂದು ಕನಸು ಕಂಡಿದ್ದಾರೆ. ಬಡಗಿಯಾಗಿರುವ ರವೀಂದ್ರನ್ (Ravindran) ಅವರು ತಮ್ಮ ಸಂಪಾದನೆಯ ಬಹುಪಾಲನ್ನು ಮಗಳ ಸಂಗೀತಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದಾರೆ.