ETV Bharat / bharat

ಮೊದ್ಲೇ ಮೂರು ಮಕ್ಕಳ ಅಮ್ಮ.. ಮತ್ತೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ!

ಮಹಿಳೆಗೆ ಮೂರು ಹೆಣ್ಣು ಮಕ್ಕಳಿದ್ದು, ಗಂಡು ಮಗು ಪಡೆಯಬೇಕು ಎಂಬ ಹಂಬಲವಿತ್ತಂತೆ. ಈಗ ಏಕಕಾಲದಲ್ಲಿ ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ.

author img

By

Published : Dec 21, 2022, 5:52 PM IST

Updated : Dec 21, 2022, 6:05 PM IST

ರಾಜಸ್ಥಾನದಲ್ಲಿ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮೂವರು ಹೆಣ್ಣು ಮಕ್ಕಳ ತಾಯಿ
a-mother-of-three-daughters-gave-birth-to-triplet-boys-in-rajasthan

ದುಂಗ್ರಾಪುರ್(ರಾಜಸ್ಥಾನ)​: ಹತ್ತಾರು ದೇವರುಗಳಿಗೆ ನೂರಾರು ಹರಕೆ ಕಟ್ಟಿಕೊಂಡರೂ ಕೆಲವರಿಗೆ ಮಕ್ಕಳ ಭಾಗ್ಯ ಇರುವುದಿಲ್ಲ. ಆದ್ರೆ ರಾಜಸ್ಥಾನದಲ್ಲಿ ಮಹಿಳೆಯೊಬ್ಬರು ತಾಯಿ ಆಗೋದರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆಯೂ ಮೂರು ಮಕ್ಕಳಿಗೆ ಒಟ್ಟಿಗೆ ಹೆತ್ತು ತಾಯಿಯಾಗಿರುವ ಇವರು ಮತ್ತೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಇಂತಹದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ರಾಜಸ್ಥಾನದ ದುಂಗ್ರಾಪುರ ಜಿಲ್ಲೆ. ನ. 26ರಂದು ಈಕೆ ಮೂವರು ಗಂಡು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅವಧಿ ಪೂರ್ವವಾಗಿ ಶಿಶುಗಳು ಜನಿಸಿದ ಹಿನ್ನೆಲೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿತ್ತು. ತಾಯಿ ಮತ್ತು ಮಕ್ಕಳು ಗುಣಮುಖರಾದ ಹಿನ್ನೆಲೆ ಡಿಸೆಂಬರ್​ 20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಲಾಗಿದೆ.

ನ. 26ರಂದು 29 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳಿದ್ದು, ಗಂಡು ಮಗು ಪಡೆಯಬೇಕು ಎಂಬ ಹಂಬಲವಿತ್ತಂತೆ. ಈಗ ಏಕಕಾಲದಲ್ಲಿ ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೂರು ಮಕ್ಕಳಲ್ಲಿ ಎರಡು ಮಕ್ಕಳು ಒಂದು ಕೆಜಿಗಿಂತ ಕಡಿಮೆ ತೂಕ ಹೊಂದಿದ್ದವು. ಒಂದು ಮಗು 1.1 ಕೆಜಿ ತೂಕ ಇತ್ತು. ಜೊತೆಗೆ ಉಸಿರಾಟ ಸಮಸ್ಯೆ ಕಂಡುಬಂದ ಹಿನ್ನೆಲೆ ಹೆಚ್ಚಿನ ತಪಾಸಣೆ ನಡೆಸಲಾಗಿದೆ ಎಂದು ದೀನ್​ ದಯಾಳ್​ ಉಪಾಧ್ಯಾಯ ಸರ್ಕಾರಿ ಆಸ್ಪತ್ರೆ ವೈದ್ಯರಾದ ಇಸ್ಮಾಯಿಲ್​ ತಿಳಿಸಿದ್ದಾರೆ.

ನವಜಾತ ಶಿಶುಗಳನ್ನು ಆಸ್ಪತ್ರೆಯ ಎಸ್​ಎನ್​ಸಿಯುಗೆ ತಕ್ಷಣಕ್ಕೆ ದಾಖಲು ಮಾಡಲಾಯಿತು. ಮಕ್ಕಳಿಗೆ ಟ್ಯೂಬ್​ ಮೂಲಕ ಹಾಲು ನೀಡಲಾಗುತ್ತಿತ್ತು. ನರ್ಸ್​ ಮತ್ತು ವೈದ್ಯರ ಕಾಳಜಿಯಿಂದ ಮಕ್ಕಳು 25 ದಿನದಲ್ಲಿ ಚೇತರಿಕೆ ಕಂಡವು. ಈ ಹಿನ್ನೆಲೆ ಡಿಸೆಂಬರ್​ 20ರಂದು ತಾಯಿ ಮತ್ತು ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.

ಇದನ್ನೂ ಓದಿ: ಕೊರೊನಾ, ಮಾಟಮಂತ್ರಕ್ಕೆ ಹೆದರಿ 2 ವರ್ಷ ಮನೆಯಿಂದ ಹೊರಬರದ ತಾಯಿ ಮಗಳು!

Last Updated : Dec 21, 2022, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.