ETV Bharat / bharat

ಅಪ್ರಾಪ್ತೆ ಮೇಲೆ ಕಾಮುಕರಿಂದ ಅತ್ಯಾಚಾರ.. ಗರ್ಭಿಣಿಯಾಗ್ತಿದ್ದಂತೆ ಬೆಳಕಿಗೆ ಬಂದ ಪ್ರಕರಣ - ಹೈದರಾಬಾದ್​ ಅತ್ಯಾಚಾರ ಪ್ರಕರಣ

ಕಳೆದ ಎರಡು ತಿಂಗಳ ಹಿಂದೆ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Minor Girl raped by two youth
Minor Girl raped by two youth
author img

By

Published : Jun 8, 2022, 11:46 AM IST

ನಾರಾಯಣಪೇಟ(ತೆಲಂಗಾಣ): ಮನೆಯಲ್ಲಿ ಯಾರು ಇಲ್ಲದ ವೇಳೆ ಅಪ್ರಾಪ್ತೆ ಮೇಲೆ ಕಾಮುಕರಿಬ್ಬರು ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ತೆಲಂಗಾಣದ ನಾರಾಯಣಪೇಟ ಜಿಲ್ಲೆಯ ಕೊಯಿಲಕೊಂಡ ವಲಯದಲ್ಲಿ ಈ ಘಟನೆ ನಡೆದಿದೆ.

ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ(13) ಮನೆಯಲ್ಲಿ ಏಕಾಂಗಿಯಾಗಿದ್ದಳು. ಇದನ್ನ ಗಮನಿಸಿರುವ ರವಿಕುಮಾರ್​ ಮತ್ತು ಆತನ ಸ್ನೇಹಿತ ಶ್ರೀಕಾಂತ್​ ಆಕೆಯನ್ನ ಬಲವಂತವಾಗಿ ತಮ್ಮ ಮನೆಗೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಘಟನೆ ಬಗ್ಗೆ ಯಾರಿಗಾದ್ರೂ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾರೆ.

ಇದನ್ನೂ ಓದಿ: ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ.. ಈ ಸಾಧನೆ ಮಾಡಿದ ಮೊದಲ ಭಾರತೀಯ!

ಘಟನೆ ನಡೆದು ಎರಡು ತಿಂಗಳ ಬಳಿಕ ಬಾಲಕಿ ಅಸ್ವಸ್ಥಳಾಗಿದ್ದು, ಬಾಲಕಿಯ ತಾಯಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ, ಪರೀಕ್ಷೆ ನಡೆಸಲಾಗಿದ್ದು, ಬಾಲಕಿ ಗರ್ಭಿಣಿಯಾಗಿರುವ ವಿಷಯ ಬಹಿರಂಗಗೊಂಡಿದೆ. ಆಕೆಯನ್ನ ಪ್ರಶ್ನೆ ಮಾಡಲಾಗಿದ್ದು, ತನ್ನ ಮೇಲೆ ನಡೆದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಪೊಲೀಸರು ಆರೋಪಿಗಳಾದ ರವಿ ಹಾಗೂ ಆತನ ಸ್ನೇಹಿತ್​ ಶ್ರೀಕಾಂತ್​​ನನ್ನ ಬಂಧಿಸಿದ್ದಾರೆ. ಈ ವೇಳೆ, ವಿಚಾರಣೆ ನಡೆಸಲಾಗಿದ್ದು, ತಮ್ಮ ಅಪರಾಧ ಒಪ್ಪಿಕೊಂಡಿದ್ದಾರೆಂದು ಎಸ್​​ಐ ಸೀನೈಶ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.