ವಡೋದರಾ (ಗುಜರಾತ್): ವಡೋದರಾ ನಗರದಲ್ಲಿ ರಾಮ ನವಮಿಯ ದಿನದಂದು ಫತೇಹಪುರ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ನಡೆಯುತ್ತಿದ್ದ ವೇಳೆ, ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಇಡೀ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಡೋದರಾ ನಗರದ ಹಿರಿಯ ಅಧಿಕಾರಿಗಳು ಭದ್ರತೆಯ ದೃಷ್ಟಿಯಿಂದ ಫತೇಹಪುರ ಪ್ರದೇಶ ಬೀಡುಬಿಟ್ಟಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಪಡೆ ನಿಯೋಜನೆ: ವಡೋದರಾ ಸೇರಿದಂತೆ ಇಡೀ ರಾಜ್ಯದಲ್ಲಿ ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ರಾಮ ದೇವರ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡು ಬರುತ್ತಿದೆ. ವಡೋದರಾ ನಗರದ ಹಲವು ಪ್ರದೇಶಗಳಿಂದ ರಾಮನವಮಿ ಮೆರವಣಿಗೆಗಳು ನಡೆದಿವೆ. ಆದರೆ, ಫತೇಹಪುರಾ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ವೇಳೆ ಹಠಾತ್ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಪರಿಸ್ಥಿತಿ ಹದಗೆಡದಂತೆ ಇಡೀ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಗೋವಾದಿಂದ ದಾಖಲೆ ಇಲ್ಲದ 5.25 ಲಕ್ಷ ರೂ ಸಾಗಣೆ: ಕಾರು, ನಗದು ವಶಕ್ಕೆ
ನಿರಂತರವಾಗಿ ಗಸ್ತು ತಿರುಗುತ್ತಿರುವ ಪೊಲೀಸರು: ವಡೋದರದ ಅತ್ಯಂತ ಸೂಕ್ಷ್ಮವಾದ ಫತೇಹಪುರ್ ಪ್ರದೇಶವನ್ನು ಈಗ ಪೊಲೀಸ್ ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ನಗರದಲ್ಲಿ ಮತ್ತೊಂದು ರಾಮನವಮಿ ಮೆರವಣಿಗೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವಡೋದರಾ ನಗರ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ವಿವಿಧೆಡೆ ಕಳ್ಳತನ: ಕರ್ನಾಟಕದ ಐವರು ಆರೋಪಿಗಳ ಬಂಧನ
ಡಿಸಿಪಿ ಯಶಪಾಲ್ ಜಗನಿಯಾ ಹೇಳಿದ್ದೇನು?: ಸ್ಥಳಕ್ಕಾಗಮಿಸಿದ ಡಿಸಿಪಿ ಯಶಪಾಲ್ ಜಗನಿಯಾ, ''ಇಂತಹ ಘಟನೆಗೆ ಸಂಬಂಧಿಸಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಬೆಂಗಾವಲು ಪಡೆ ಸ್ಥಳಕ್ಕೆ ತಲುಪಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಗರದಲ್ಲಿ ನಡೆಯುವ ಎಲ್ಲಾ ಮೆರವಣಿಗೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಳಿ ಮೇಲೆ ನಿಂತ ವಾಹನ; ರೈಲು ಗುದ್ದಿದ ರಭಸಕ್ಕೆ ಬೊಲೆರೋ ಅಪ್ಪಚ್ಚಿ
ರಾಮನವಮಿ ಶೋಭಾಯಾತ್ರೆ ಮೇಲೆ ಭಾರೀ ಕಲ್ಲು ತೂರಾಟ: ವಡೋದರಾದಲ್ಲಿ ರಾಮನವಮಿ ಶೋಭಾಯಾತ್ರೆ ಮೇಲೆ ಭಾರೀ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯು ಶಾಂತಿಯುತವಾಗಿಯೇ ಸಾಗುತ್ತಿತ್ತು. ಆದರೆ, ನಂತರ ಪಂಜ್ರಿಗರ್ ಪ್ರದೇಶದಿಂದ ಕಿಡಿಗೇಡಿಗಳಿಂದ ಕಲ್ಲು ತೂರಾಟ ಆರಂಭವಾಯಿತು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಆರೋಪಿಸಿದರು.
ಇದನ್ನೂ ಓದಿ: ದೇವಸ್ಥಾನದಲ್ಲಿ ಬಾವಿಯ ಮೇಲ್ಛಾವಣಿ ಕುಸಿತ: ಮಹಿಳೆಯರು ಸೇರಿ ಐವರ ದುರ್ಮರಣ