ETV Bharat / bharat

ಕುಡಿದ ಅಮಲಿನಲ್ಲಿದ್ದವ ಸರಿರಾತ್ರಿ ಮನೆಗೆ ಹೋಗಲು ಸರ್ಕಾರಿ ಬಸ್ಸನ್ನೇ ಕದ್ದ! - ಪಾಲಕೊಂಡ ಆರ್​ಟಿಸಿ ಡಿಪೋಗೆ ಮಾಹಿತಿ

ಕುಡಿದು ಮತ್ತೇರಿಸಿಕೊಂಡಿದ್ದ ವ್ಯಕ್ತಿ ಬಸ್​ ಕದ್ದ- ರಾತ್ರಿ ಮನೆಗೆ ತೆರಳಲು ಸರ್ಕಾರಿ ಬಸ್​ ಕಳ್ಳತನ ಮಾಡಿದ ಕುಡುಕ- ಪ್ರಕರಣ ದಾಖಲಾಗಿ, ಹುಡುಕಾಟದ ಬಳಿಕ ಬಸ್​ ಪತ್ತೆ

a-man-stolen-rtc-bus-to-go-home
ಕುಡಿದ ಅಮಲಿನಲ್ಲಿದ್ದವ ಸರಿರಾತ್ರಿ ಮನೆಗೆ ಹೋಗಲು ಸರ್ಕಾರಿ ಬಸ್ಸನ್ನೇ ಕದ್ದ
author img

By

Published : Aug 10, 2022, 12:19 PM IST

ವಂಗರ(ಆಂಧ್ರಪ್ರದೇಶ): ಹೊಟ್ಟೆಯೊಳಗಿಳಿದ ಪರಮಾತ್ಮ ಆಡಿಸುವ ಆಟ ಅಂತಿಂಥದ್ದಲ್ಲ. ಕುಡಿದು ಟೈಟಾಗಿದ್ದ ವ್ಯಕ್ತಿಯೊಬ್ಬ ಮನೆಗೆ ತಲುಪಲು ಯಾವ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರಿ ಬಸ್​ ಅನ್ನೇ ಮನೆಗೆ ಕದ್ದೊಯ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಏನಾಯ್ತು?: ಆಂಧ್ರಪ್ರದೇಶದ ಪಾಲಕೊಂಡ ಡಿಪೋಗೆ ಸೇರಿದ ವಿದ್ಯಾರ್ಥಿಗಳನ್ನು ಬಿಡುವ ಬಸ್ ಸೋಮವಾರ ಮಧ್ಯರಾತ್ರಿ ಕಳ್ಳತನವಾಗಿದೆ. ಸಂಜೆಯಷ್ಟೇ ಮಕ್ಕಳನ್ನು ಮನೆಗಳಿಗೆ ಬಿಟ್ಟು ಬಂದು ನಿಲ್ಲಿಸಲಾಗಿದ್ದ ಬಸ್​ ಕಳುವಾಗಿದ್ದು, ಚಾಲಕನಿಗೆ ಅಚ್ಚರಿ ಮೂಡಿಸಿತ್ತು.

ಕುಡಿದ ಅಮಲಿನಲ್ಲಿದ್ದವ ಸರಿರಾತ್ರಿ ಮನೆಗೆ ಹೋಗಲು ಸರ್ಕಾರಿ ಬಸ್ಸನ್ನೇ ಕದ್ದ!

ಸಹೋದ್ಯೋಗಿಗಳ ಸಹಾಯದಿಂದ ಬೆಳಗಿನವರೆಗೂ ಇಡೀ ಗ್ರಾಮವನ್ನು ಜಾಲಾಡಿದರೂ ಬಸ್ ಮಾತ್ರ ಪತ್ತೆಯಾಗಿಲ್ಲ. ನಂತರ ವಂಗರ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಬಸ್​ ಪತ್ತೆಗಾಗಿ ಪಾಲಕೊಂಡ ಆರ್​ಟಿಸಿ ಡಿಪೋಗೆ ಮಾಹಿತಿ ನೀಡಲಾಯಿತು.

ಇದಾದ ಕೆಲವು ಗಂಟೆಗಳ ಬಳಿಕ ಬಸ್ ಮೀಸಲ ಡೋಲಪೇಟ ಗ್ರಾಮದ ಬಳಿ ಇದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಮನೆಯೊಂದರ ಬಳಿ ಬಸ್​ ನಿಲ್ಲಿಸಿದ್ದನ್ನು ಪತ್ತೆ ಮಾಡಿದ್ದಾರೆ. ಶಂಕಿತ ಆರೋಪಿಗಳನ್ನು ರಾಜಂ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಅಚ್ಚರಿಯ ಅಸಲಿ ಸತ್ಯ ಬಯಲಾಗಿದೆ.

ಗೋಕರ್ಣಪಲ್ಲಿಯ ಚೌಧರಿ ಸುರೇಶ್ ಎಂಬುವವರು ಕುಡಿದ ಅಮಲಿನಲ್ಲಿ ರಾತ್ರಿ ಮನೆಗೆ ತೆರಳಲು ಸರ್ಕಾರಿ ಬಸ್ ಅನ್ನೇ ಕದ್ದೊಯ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳ ಹೇಳಿಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: ಖಾಸಗಿ ಬಸ್ ಪಲ್ಟಿ: 9ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.