ದಿಂಡೋರಿ (ಮಧ್ಯಪ್ರದೇಶ): 14 ವರ್ಷಗಳ ಹಿಂದೆ ಕಾಣೆಯಾಗಿದ್ದ ಸಿಕ್ಕಿಂ ಮೂಲದ ಕಿಶೋರ್ ರೈ ಎಂಬ ಯುವಕ ಮರಳಿ ಕುಟುಂಬ ಸೇರಿದ್ದಾರೆ. ಅವರು 14 ವರ್ಷಗಳ ಹಿಂದೆ ಅಸ್ಸೋಂನಿಂದ ನಾಪತ್ತೆಯಾಗಿದ್ದು ಈತ ಗುವಾಹಟಿ, ಹರಿಯಾಣ, ಮಧ್ಯಪ್ರದೇಶದ ಮೂಲಕ ಮಹಾರಾಷ್ಟ್ರ ತಲುಪಿದ್ದರು.
ಇನ್ನು ಎರಡು ವರ್ಷಗಳ ಹಿಂದೆ ಕಿಶೋರ್ ದಿಂಡೋರಿಯಲ್ಲಿರುವ ವಿಲಾಸ್ ದೇಶಮುಖ್ ಅವರ ತೋಟದಲ್ಲಿ ಕೆಲಸಕ್ಕೆ ಸೇರಿದ್ರು. ಬಳಿಕ ಕಿಶೋರ್ ಅವರನ್ನು ಅವರ ಕುಟುಂಬಕ್ಕೆ ಸೇರಿಸಲು ದೇಶಮುಖ್ ಅವರ ಪ್ರಯತ್ನ ಯಶಸ್ವಿಯಾಗಿದೆ. ಕುಟುಂಬವು ಕಿಶೋರ್ ಸತ್ತಿದ್ದಾನೆ ಎಂದು ಭಾವಿಸಿ ದಶಾಕ್ರಿಯಾ ಆಚರಣೆಯನ್ನೂ ಮಾಡಿತ್ತು.
ಇದನ್ನೂ ಓದಿ: ಭೂಮಿಯ ಮೇಲಿನ ಸ್ವರ್ಗ ಉಳಿಸಿಕೊಂಡ ಯುವಕನ ಸಾಹಸಗಾಥೆ..
ಒಂದೂವರೆ ತಿಂಗಳ ಹಿಂದೆ ಕಿಶೋರ್ ನಮ್ಮ ಸಂಪರ್ಕಕ್ಕೆ ಬಂದಿದ್ದರು ಎಂದು ಅವರ ಸೋದರ ಮಾವ ಹೇಳಿದ್ದಾರೆ. ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದ ಮಗನನ್ನು ಜೀವಂತವಾಗಿ ಕಂಡಾಗ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.