ವಾರಾಣಸಿ (ಉತ್ತರ ಪ್ರದೇಶ): ಪ್ಯಾರಿಸ್‌ನಿಂದ ಬಂದ ಪ್ರವಾಸಿ ಮಹಿಳೆಯೊಂದಿಗೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ವಿದೇಶಿ ಮಹಿಳೆಗೆ ಮಾರ್ಗದರ್ಶಿಯಾಗಿ ಆರೋಪಿ ವಾರಾಣಸಿಯಲ್ಲಿ ಆಕೆ ಜೊತೆ ಎರಡು ದಿನಗಳ ಕಾಲ ಸಂಚರಿಸಿದ್ದಾನೆ ಎಂದು ಭೇಲುಪುರ ಪೊಲೀಸ್ ಠಾಣೆ ಉಸ್ತುವಾರಿ ರಾಮಕಾಂತ್ ದುಬೆ ತಿಳಿಸಿದ್ದಾರೆ.
ಮದ್ಯ ವ್ಯಸನಿಯಾಗಿದ್ದ ಆರೋಪಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ. ಪ್ರಸ್ತುತ ಮಹಿಳೆ ಪ್ಯಾರಿಸ್ಗೆ ಮರಳಿದ್ದಾರೆ. ಪ್ಯಾರಿಸ್ ಸಿಟಿ ಆಫ್ ಫ್ರಾನ್ಸ್‌ನಿಂದ ಬನಾರಸ್‌ಗೆ ಮಹಿಳೆ ಪ್ರವಾಸಕ್ಕೆಂದು ಬಂದಿದ್ದರು.
ಪೊಲೀಸರ ಪ್ರಕಾರ, ಫ್ರಾನ್ಸ್‌ನ ಮಹಿಳೆ ಬನಾರಸ್‌ನ ಕೇದಾರ್ ಘಾಟ್‌ನಲ್ಲಿನ ಅತಿಥಿ ಗೃಹದಲ್ಲಿ ತಂಗಿದ್ದರು. ಆರೋಪಿ ಮಾರ್ಗದರ್ಶಿ ಅಲ್ಲದಿದ್ದರು, ತನ್ನನ್ನು ತಾನು ಮಾರ್ಗದರ್ಶಿ ಎಂದು ಹೇಳಿಕೊಂಡು ಯುವತಿ ಜೊತೆ ಇದ್ದ. ಇಬ್ಬರು ಎರಡು ದಿನಗಳ ಕಾಲ ನಗರವನ್ನು ಸುತ್ತಾಡಿದ್ದಾರೆ. ಮೂರನೇ ದಿನ ತಡರಾತ್ರಿ ಇಬ್ಬರು ಊಟ ಮಾಡಿ, ಮದ್ಯಪಾನ ಮಾಡಿದ್ದಾರೆ.
ಇದನ್ನೂ ಓದಿ: ಎರಡನೇ ಪತ್ನಿ, ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ.. ಪಿಎಸ್ಐ ವಿರುದ್ಧವೇ ದಾಖಲಾಯ್ತು ಪ್ರಕರಣ
ಆರೋಪಿ ಸ್ಥಳೀಯ ಮದ್ಯವನ್ನು ಬಿಯರ್‌ನಲ್ಲಿ ಬೆರೆಸಿದ್ದಾನೆ. ಇದರಿಂದಾಗಿ ಮಹಿಳೆ ಪ್ರಜ್ಞಾಹೀನಳಾಗಿದ್ದಾಳೆ. ಆಕೆ ಎಚ್ಚರವಾದಾಗ ಹಾಸಿಗೆಯ ಮೇಲೆ ಬೆತ್ತಲೆಯಾಗಿ ಇದ್ದಳು. ಬಳಿಕ ವೈದ್ಯರನ್ನು ಸಂಪರ್ಕಿಸಿದಾಗ, ಅವರು ಅತ್ಯಾಚಾರವಾಗಿಲ್ಲ ಎಂದಿದ್ದಾರೆ.
ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಫ್ರೆಂಚ್ ಯುವತಿ, ನಾನು ತನ್ನ ದೇಶಕ್ಕೆ ಮರಳುತ್ತಿದ್ದೇನೆ ಎಂದು ಹೇಳಿದ್ದಾಳೆ. ಭವಿಷ್ಯದಲ್ಲಿ ನನಗೆ ಆದ ರೀತಿ ಬೇರೆಯವರಿಗೆ ಆಗಬಾರದು ಎಂದು ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ವಿದೇಶಿ ಮಹಿಳೆಯ ಲಿಖಿತ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಭೆಲುಪುರ ಪೊಲೀಸ್ ಠಾಣೆ ಉಸ್ತುವಾರಿ ರಾಮಕಾಂತ್ ದುಬೆ ಹೇಳಿದ್ದಾರೆ.