ETV Bharat / bharat

ಕೋವಿಡ್​ ಸೋಂಕಿಗೊಳಗಾಗುವ ಭಯ: ಆತ್ಮಹತ್ಯೆಗೆ ಶರಣಾದ ಯುವಕ!

ಕೊರೊನಾ ವೈರಸ್ ಹಬ್ಬುತ್ತದೆ ಎಂಬ ಭಯದಲ್ಲಿ ವ್ಯಕ್ತಿಯೊಬ್ಬ ಸಾವಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

man commits suicide
man commits suicide
author img

By

Published : Apr 24, 2021, 4:40 PM IST

Updated : Apr 24, 2021, 4:53 PM IST

ಕೃಷ್ಣ(ಆಂಧ್ರಪ್ರದೇಶ): ದೇಶದಲ್ಲಿ ಮಹಾಮಾರಿ ಕೊರೊನಾ ಅಬ್ಬರ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಸಾವಿರಾರು ಜನರು ಡೆಡ್ಲಿ ವೈರಸ್​ಗೆ ಬಲಿಯಾಗುತ್ತಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್​​ ಸಮಸ್ಯೆ: ಒಂದೇ ರಾತ್ರಿಯಲ್ಲಿ ದೆಹಲಿ ಆಸ್ಪತ್ರೆಯಲ್ಲಿ 25 ರೋಗಿಗಳ ಸಾವು!

ಇದರ ಮಧ್ಯೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿನ ಯುವಕನೊಬ್ಬ ಕೊರೊನಾ ಮಹಾಮಾರಿ ತಗುಲಬಹುದು ಎಂಬ ಭಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೋವಿಡ್​ ಭಯದಿಂದ ಯುವಕ ಆತ್ಮಹತ್ಯೆ

ಅತ್ಮಹತ್ಯೆ ಮಾಡಿಕೊಂಡ ಯುವಕನನ್ನ ಲಕ್ಷ್ಮಣ್​(29) ಎಂದು ಗುರುತಿಸಲಾಗಿದೆ. ನೀರಿನ ಟ್ಯಾಂಕರ್​ಗೆ ಹಾರಿ ಇತ ಸಾವನ್ನಪ್ಪಿದ್ದಾನೆ. ಕೃಷ್ಣ ಜಿಲ್ಲೆಯ ಉಂಗಟೂರು ಮಂಡಲದ ಪೆದ್ದ ಆವೋಟಪಲ್ಲಿ ಎಂಬಲ್ಲಿ ಈತ ವಾಸವಾಗಿದ್ದನು. ಈತನಿಗೆ ಮಹಾಮಾರಿ ಸೋಂಕು ತಗುಲಿದೆ ಎಂಬ ಭಯದಿಂದ ಮೃತದೇಹವನ್ನ ಯಾರು ಹೊರಗೆ ತೆಗೆದಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

Last Updated : Apr 24, 2021, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.