ETV Bharat / bharat

ಅಕ್ರಮ ಸಂಬಂಧದ ಶಂಕೆ: ಪತ್ನಿ - ಮಗಳ ಶಿರಚ್ಛೇದ ಮಾಡಿದ ಪಾಪಿ - beheads in Bihar

ಬಿಹಾರದಲ್ಲಿ ಪತ್ನಿಯ ಅಕ್ರಮ ಸಂಬಂಧದ ಶಂಕೆಯಿಂದ ಪತಿಯೋರ್ವ ಪತ್ನಿ ಮತ್ತು ಮಗಳ ಶಿರಚ್ಛೇದ ಮಾಡಿ ತಲೆಮರೆಸಿಕೊಂಡಿದ್ದಾನೆ.

A man beheads his wife and daughter in Bihar
ಅಕ್ರಮ ಸಂಬಂಧದ ಶಂಕೆ: ಪತ್ನಿ - ಮಗಳ ಶಿರಚ್ಛೇದ ಮಾಡಿದ ಪಾಪಿ
author img

By

Published : Aug 6, 2022, 7:50 PM IST

ಮಾಧೇಪುರ (ಬಿಹಾರ): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳನ್ನು ಶಿರಚ್ಛೇದ ಮಾಡಿ ಹತ್ಯೆಗೈದ ಭೀಕರ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ, ಕೊಲೆ ಮಾಡಿದ ಬಳಿಕ ಪತ್ನಿಯ ತಲೆಯನ್ನು ತೆಗೆದುಕೊಂಡು ಹೋಗಿ ಅತ್ತೆ-ಮಾವನ ಮನೆಯ ಸಮೀಪದ ಮೋರಿಗೆ ಎಸೆದು ಪರಾರಿಯಾಗಿದ್ದಾನೆ.

ಇಲ್ಲಿನ ಶ್ರೀನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೋಖಾರಿಯಾ ಟೋಲಾ ಗ್ರಾಮದಲ್ಲಿ ಈ ಬರ್ಬರ ಘಟನೆ ಜರುಗಿದೆ. ಮುರ್ಷಿದಾ ಖಾತೂನ್ ಹಾಗೂ 3 ವರ್ಷದ ಮಗಳು ಜಿಯಾ ಪರ್ವೀನ್ ಎಂಬುವವರೇ ಕೊಲೆಯಾದವರು. ಮೊಹಮ್ಮದ್ ಆಲಂ ಎಂಬಾತನೇ ಪತಿ ಹಾಗೂ ಪುತ್ರಿಯ ತಲೆಯನ್ನು ಹರಿತವಾದ ಆಯುಧದಿಂದ ಕಡಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮೊಹಮ್ಮದ್ ಆಲಂ ಮತ್ತು ಮುರ್ಷಿದಾ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳು ಚಿಕ್ಕಪ್ಪನ ಮನೆಯಲ್ಲಿ ಓದುತ್ತಿದ್ದು, ಮಗಳು ಮಾತ್ರ ಪೋಷಕರೊಂದಿಗೆ ವಾಸವಾಗಿದ್ದಳು. ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೀಗ ಪತ್ನಿಯ ಅಕ್ರಮ ಸಂಬಂಧದ ಶಂಕೆಯಿಂದ ಆರೋಪಿ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಭಯ-ಭೀತರಾದ ಜನರು: ಮನೆಯಲ್ಲಿ ಪತ್ನಿ ಮತ್ತು ಪುತ್ರಿಯನ್ನು ಕೊಲೆ ಮಾಡಿದ ಬಳಿಕ ಆರೋಪಿಯು ಪತ್ನಿಯ ತಲೆಯನ್ನು ತೆಗೆದುಕೊಂಡು ಹೋಗಿ ಭಾರಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಧೇಲಾ ಗ್ರಾಮದಲ್ಲಿರುವ ಅತ್ತೆ-ಮಾವನ ಮನೆ ಸಮೀಪದ ಮೋರಿಯಲ್ಲಿ ಎಸೆದು ಓಡಿ ಹೋಗಿದ್ದಾನೆ.

ಬೆಳಗ್ಗೆ ಗ್ರಾಮಸ್ಥರು ಮನೆಗಳಿಂದ ಹೊರ ಬಂದಾಗ ಮೋರಿಯೊಳಗೆ ರುಂಡ ಮಾತ್ರವೇ ಕಾಣಿಸಿಕೊಂಡಿದೆ. ಇದನ್ನು ಕಂಡ ಗ್ರಾಮಸ್ಥರು ಭಯ-ಭೀತರಾಗಿದ್ದಾರೆ. ಇತ್ತ, ಪೋಖಾರಿಯಾ ಟೋಲಾ ಗ್ರಾಮದಲ್ಲೂ ಮುರ್ಷಿದಾ ಮುಂಡ ಹಾಗೂ ಬಾಲಕಿಯ ಶವ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಈ ಕೊಲೆಗಳ ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಆಗಮಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೇ, ಕೊಲೆ ಆರೋಪಿ ಮೊಹಮ್ಮದ್ ಆಲಂನ ತಾಯಿ ಮತ್ತು ಮಲ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತಲೆ ಮರೆಸಿಕೊಂಡಿರುವ ಹಂತಕ ಆಲಂ ಪತ್ತೆಯಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಗೆಳೆಯನ ಭೇಟಿಗೆ ಹೋದ ವಿವಾಹಿತ ಮಹಿಳೆ: ಕಾಂಪೌಂಡ್​​ಗೆ ಕಟ್ಟಿ ತಾಲಿಬಾನ್ ರೀತಿ ಶಿಕ್ಷೆ ನೀಡಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.